ಆನ್ಲೈನ್‌ನಲ್ಲಿ ಡ್ರೈ ಫ್ರೂಟ್ಸ್ ಜಾಹೀರಾತು ನಂಬಿ ಹಣ ಕಳೆದುಕೊಂಡ ಉದ್ಯಮಿ

ನಕಲಿ ಫೇಸ್‌ಬುಕ್ ಜಾಹೀರಾತು ನಂಬಿ ಹಣ ಕಳೆದುಕೊಂಡ ಉದ್ಯಮಿ

111 (14)

ಬೆಂಗಳೂರಿನ ಕರಿಹೋಬನಹಳ್ಳಿಯ ಉದ್ಯಮಿಯೊಬ್ಬರು ನಕಲಿ ಫೇಸ್‌ಬುಕ್ ಜಾಹೀರಾತು ನಂಬಿ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಓಹೋ ಡ್ರೈ ಫ್ರೂಟ್ಸ್ ಆಫರ್!

ಬಸವರಾಜ್ ಎಂಬ ಉದ್ಯಮಿ, ತಮ್ಮ ಫೇಸ್‌ಬುಕ್ ಖಾತೆಯಲ್ಲಿ “D-Mart Ready” ಲೋಗೋ ಹೊಂದಿದ ಜಾಹೀರಾತನ್ನು ನೋಡಿದರು. ಅದರಲ್ಲಿ ಕೇವಲ ₹399ಗೆ ಪ್ಯಾಕ್ ಡ್ರೈ ಫ್ರೂಟ್ಸ್ ಲಭ್ಯ ಎಂಬ ಆಫರ್ ನೀಡಲಾಗಿತ್ತು. ಆಫರ್ ನೈಜವಾಗಿತ್ತೆಂದು ತಿಳಿದು ಅವರು ಜಾಹೀರಾತಿನಲ್ಲಿ ನೀಡಿದ್ದ ಲಿಂಕ್‌ ಕ್ಲಿಕ್ ಮಾಡಿ, ಆರ್ಡರ್ ಮಾಡಲು ಮುಂದಾದರು.

ಆರ್ಡರ್ ಪ್ರಕ್ರಿಯೆಯಲ್ಲಿ ಅವರು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದನ್ನ ಬಳಸಿಕೊಂಡ ಸೈಬರ್ ಅಪರಾಧಿಗಳು ಒಟಿಪಿ ಪಡೆದು ಮೊತ್ತ ₹50,000 ಹಣವನ್ನು ಡೆಬಿಟ್ ಮಾಡಿದ್ದಾರೆ. ನಂತರ ಶಾಕ್‌ಗೆ ಒಳಗಾದ ಬಸವರಾಜ್ ಕೂಡಲೇ ಪೀಣ್ಯಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪೀಣ್ಯಾ ಠಾಣೆ ಪೊಲೀಸರು ಈ ಪ್ರಕರಣವನ್ನು IPC ಸೆಕ್ಷನ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ ಸೈಬರ್ ಕ್ರೈಂ ವಿಭಾಗಕ್ಕೂ ಪ್ರಕರಣದ ಬಗ್ಗೆ ಮಾಹಿತಿ ನೀಡಲಾಗಿದೆ. ವಂಚನೆಯ ಲಿಂಕ್, IP ಅಡ್ರೆಸ್, ಪಾವತಿ ಪ್ಲಾಟ್‌ಫಾರ್ಮ್ ಇತ್ಯಾದಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಲಾಗುತ್ತಿದೆ.

ಸುರಕ್ಷತಾ ಸೂಚನೆ

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಆಕರ್ಷಕ ಆಫರ್‌ಗಳಿಗೆ ನಂಬಿಕೆ ಹಾಗೂ ಪ್ರತಿಕ್ರಿಯಿಸುವ ಮೊದಲು ಅದರ ನೈಜತೆ ಪರಿಶೀಲಿಸುವುದು ಅತ್ಯಗತ್ಯ. ವ್ಯಕ್ತಿಗತ ಹಾಗೂ ಬ್ಯಾಂಕ್ ಮಾಹಿತಿಗಳನ್ನು ಯಾವುದೇ ಸಂಶಯಾಸ್ಪದ ಲಿಂಕ್‌ಗಳಲ್ಲಿ ಶೇರ್ ಮಾಡುವುದು ತಪ್ಪು.

ಮೂರ್ತಿ,ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version