ನೆಲಮಂಗಲದಲ್ಲಿ ಕಾಂಗ್ರೆಸ್ ಪರ ಒಲವು

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t220525.067

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರ 2023ರ ಫಲಿತಾಂಶದಲ್ಲಿ ಕಾಂಗ್ರೆಸ್ ನ ಶ್ರೀನಿವಾಸ್ 84,229 (49%) , ಜೆಡಿಎಸ್ ನ ಡಾ.ಶ್ರೀನಿವಾಸಮೂರ್ತಿ 52,251 (30%) ಬಿಜೆಪಿಯ ಸಪ್ತಗಿರಿ ನಾಯಕ್ 30,582 (18%) ಮತ ಪಡೆದಿದ್ದರು. 31,978 ಮತಗಳ ಅಂತರದಿಂದ ಶ್ರೀನಿವಾಸ್ ಆಯ್ಕೆಯಾಗಿದ್ದರು.

ನೆಲಮಂಗಲ ಕ್ಷೇತ್ರದ ಚಿತ್ರಣ..
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿರುವ ನೆಲಮಂಗಲ ವಿಧಾನ ಸಭಾ ಕ್ಷೇತ್ರ ಬೆಂಗಳೂರಿಗೆ ತೀರ ಸಮೀಪದಲ್ಲಿದೆ. ಒಂದು ಕಡೆ ರಿಯಲ್ ಎಸ್ಟೇಟ್ ಮತ್ತೊಂದು ಕಡೆ ಹೊಸ ಏರ್ಪೋರ್ಟ್ ವಿಚಾರದಲ್ಲಿ ಸುದ್ದಿ ಆಗ್ತಿದೆ. 2013 ಹಾಗೂ 18ರಲ್ಲಿ ಜೆಡಿಎಸ್ 2008ರಲ್ಲಿ ಬಿಜೆಪಿ ಗೆದ್ದಿದ್ದು ಬಿಟ್ಟರೆ ಇಲ್ಲಿ ಕಾಂಗ್ರೆಸ್ ನದ್ದೇ ಮೇಲುಗೈ.. ಒಕ್ಕಲಿಗರ, ದಲಿತ ಹಾಗು ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿವೆ.

ಮೂಡ್ ಆಫ್ ಕರ್ನಾಟಕ : ನೆಲಮಂಗಲ ಮೂಡ್ ಹೇಗಿದೆ?
ಶಾಸಕ ಶ್ರೀನಿವಾಸ್ ಗೆ ಗ್ಯಾರಂಟಿ ಯೋಜನೆಗಳೇ ವರದಾನವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಕಟ್ಟಾ ಬೆಂಬಲಿಗರಾಗಿದ್ದರೆ. ಅಹಿಂದ ಸಂಘಟನೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೂ ಸೈ, ನೆಲಮಂಗಲಕ್ಕೆ ಕುಡಿಯುವ ನೀರು ತರುವ ಎತ್ತಿನಹೊಳೆಗೆ ಸರ್ಕಾರ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಮಾಜಿ ಶಾಸಕ ಶ್ರೀನಿವಾಸಮೂರ್ತಿ ಕೂಡಕ್ಷೇತ್ರದಲ್ಲಿ ಆಕ್ಟೀವ್ ಇದ್ದು, ಜೆಡಿಎಸ್-ಬಿಜೆಪಿ ಮೈತ್ರಿಯಾದರೆ ಕಾಂಗ್ರೆಸ್ ಗೆ ಕಷ್ಟವಾಗಲಿದೆ.

ಮೈತ್ರಿ ಆಗದೇ ಇದ್ದಾರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಕ್ಷೇತ್ರ ದಲ್ಲಿ ಸುಲಭ ಜಯ ಸಿಗಬಹುದು. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ನೆಲಮಂಗಲ ಜನತೆಗೆ ಕಾಂಗ್ರೆಸ್ ಶಾಸಕರ ಪರ ಒಲವು ಕಂಡುಬರುತ್ತಿದೆ.

ನೆಲಮಂಗಲ ಆಕಾಂಕ್ಷಿಗಳು
ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಗೆ ಟಿಕೆಟ್ ಖಚಿತವಾಗಿದ್ದು, ಬಿಜೆಪಿಯಿಂದ ಸಪ್ತಗಿರಿ ನಾಯಕ್ ಮತ್ತು ನಾಗರಾಜ್ ನಡುವೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಕಾದು ನೋಡಬೇಕು. ಜೆಡಿಎಸ್ ಸ್ಪರ್ಧೆ ನಿಂದ ಡಾ. ಶ್ರೀನಿವಾಸಮೂರ್ತಿ ಕಣಕ್ಕೆ ಪ್ರವೇಶ ಪಡೆಯಬಹುದು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version