ಪ್ರಯಾಣಿಕರ ಗಮನಕ್ಕೆ..ಮೆಟ್ರೋದಲ್ಲಿ ದೊಡ್ಡ ಬ್ಯಾಗ್‌ಗೆ ಟಿಕೆಟ್ ಇಲ್ಲದಿದ್ದರೆ ದಂಡ ಫಿಕ್ಸ್!

11 (1)

ಬೆಂಗಳೂರಿನ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ನಮ್ಮ ಮೆಟ್ರೋ ಜನರಿಗೆ ವರದಾನವಾಗಿದೆ. ಆರಾಮದಾಯಕ ಪ್ರಯಾಣಕ್ಕಾಗಿ ಕನ್ನಡಿಗರ ಮೊದಲ ಆಯ್ಕೆಯಾಗಿರುವ ಮೆಟ್ರೋ, ದುಬಾರಿ ಟಿಕೆಟ್ ಬೆಲೆಯಿಂದಾಗಿ ಮತ್ತೋಮ್ಮೆ ಚರ್ಚೆಗೆ ಗುರಿಯಾಗಿದೆ. ಇದೀಗ, ಲಗೇಜ್‌ಗೂ ಟಿಕೆಟ್ ಕಡ್ಡಾಯ ಎಂಬ ನಿಯಮವು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಭಾರೀ ದಂಡದ ಜೊತೆಗೆ ತೊಂದರೆಗೆ ಸಿಲುಕಬೇಕಾಗುತ್ತದೆ.

ಇತ್ತೀಚೆಗೆ ಒಬ್ಬ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ನಾನು ನಮ್ಮ ಮೆಟ್ರೋದಲ್ಲಿ ಲಗೇಜ್‌ಗೆ ಟಿಕೆಟ್ ತೆಗೆದುಕೊಳ್ಳಬೇಕೆಂದು ಕೇಳಿದಾಗ ಆಶ್ಚರ್ಯವಾಯಿತು. ಒಂದು ಬ್ಯಾಗ್‌ಗೆ 30 ರೂಪಾಯಿ ಶುಲ್ಕ ಪಾವತಿಸಬೇಕಾಯಿತು. ಬೆಂಗಳೂರು ಮೆಟ್ರೋ ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿದೆ. ಈ ಲಗೇಜ್ ಶುಲ್ಕವು ಜನರಿಗೆ ಇನ್ನಷ್ಟು ಆರ್ಥಿಕ ಭಾರವನ್ನು ಹೇರಿದೆ. BMRCL ಜನರಿಗೆ ಮೆಟ್ರೋ ಪ್ರಯಾಣವನ್ನು ಕಷ್ಟಕರವಾಗಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಪಾಲಿಸಬೇಕಾದ ಕೆಲವು ನಿಯಮಗಳು

ಉಚಿತ ಲಗೇಜ್: ಒಬ್ಬ ಪ್ರಯಾಣಿಕನಿಗೆ 15 ಕೆ.ಜಿ. ತೂಕದ ಒಳಗಿನ ಬ್ಯಾಗ್‌ಗೆ ಯಾವುದೇ ಶುಲ್ಕವಿಲ್ಲ.

ದೊಡ್ಡ ಲಗೇಜ್: 15 ಕೆ.ಜಿ.ಗಿಂತ ದೊಡ್ಡ ಗಾತ್ರದ ಬ್ಯಾಗ್‌ಗೆ ಪ್ರತಿ ಬ್ಯಾಗ್‌ಗೆ 30 ರೂಪಾಯಿ ಶುಲ್ಕವನ್ನು ಪಾವತಿಸಿ ಟಿಕೆಟ್ ಖರೀದಿಸಬೇಕು.

ನಿಯಮ ಉಲ್ಲಂಘನೆ: ಲಗೇಜ್‌ಗೆ ಟಿಕೆಟ್ ತೆಗೆದುಕೊಳ್ಳದಿದ್ದರೆ, ದಂಡವನ್ನು ವಿಧಿಸಲಾಗುವುದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಬಹುದು.

ದೇಶದಲ್ಲೇ ಅತಿ ದುಬಾರಿ ಎಂದು ಗುರುತಿಸಲಾದ ಬೆಂಗಳೂರು ಮೆಟ್ರೋದ ಟಿಕೆಟ್ ಬೆಲೆಯ ಜೊತೆಗೆ ಲಗೇಜ್ ಶುಲ್ಕವು ಜನರಿಗೆ ಇನ್ನಷ್ಟು ಆರ್ಥಿಕ ಒತ್ತಡವನ್ನುಂಟು ಮಾಡಿದೆ. ಈ ನಿಯಮವು ಮೆಟ್ರೋ ಸೇವೆಯನ್ನು ಬಳಸುವವರಿಗೆ ಹೆಚ್ಚಿನ ಅಡೆತಡೆಯಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. BMRCL ಈ ನಿಯಮವನ್ನು ಪರಿಷ್ಕರಿಸಬೇಕೆಂದು ಅನೇಕರು ಒತ್ತಾಯಿಸುತ್ತಿದ್ದಾರೆ.

Exit mobile version