ಮುಸ್ಲಿಂ ಯುವತಿ-ಹಿಂದೂ ಯುವಕನ ಮೇಲೆ ಹಲ್ಲೆ: ಬೆಂಗಳೂರಿನಲ್ಲಿ ಐವರು ಅಂದರ್..

Police

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳಿಗೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ ಎಸಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಮಾತನಾಡುತ್ತ ಕುಳಿತಿದ್ದ ಯುವತಿಯನ್ನ ನಿಂದಿಸಿ ಹಲ್ಲೆಗೆ ಯತ್ನಿಸಿದ್ದ ಅಪ್ರಾಪ್ತ ಯುವಕ ಸೇರಿ ಐವರನ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಹೌದು ಮಹೀಮ್, ಅಫ್ರೀದಿ, ವಾಸೀಮ್, ಅಂಜುಮ್ ಬಂಧಿತ ಆರೋಪಿಗಳು. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್‌ನಲ್ಲಿ ಯುವತಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಯಾಕೆ ಕೂತಿದಿಯಾ? ನಿನಗೆ ಮಾನ ಮರ್ಯಾದೆ ಇಲ್ವಾ? ನಿಮ್ಮ ಮನೆಯವರ ಫೋನ್ ನಂಬರ್ ಕೊಡು ಎಂದು ದಬಾಯಿಸಿದ್ದರು.


ಆ ಸಂದರ್ಭದಲ್ಲಿ ಯುವತಿ, ನನ್ನ ಕ್ಲಾಸ್‌ಮೇಟ್ ಜೊತೆ ನಾನು ಮಾತನಾಡುತ್ತಿದ್ದೇನೆ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಪ್ರತ್ಯುತ್ತರ ನೀಡಿದ್ದಳು. ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಆರೋಪಿಗಳು ಯುವಕ ಹಾಗೂ ಯುವತಿಯು ಬೈಕ್‌ನಲ್ಲಿ ಕೂತು ಮಾತನಾಡುತ್ತಿದ್ದ ವೀಡಿಯೋ ವೈರಲ್ ಮಾಡಿದ್ದರು. ಸದ್ಯ ಈ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version