ಮಹಾಲಕ್ಷ್ಮೀ ಲೇಔಟ್ ನಲ್ಲಿ ಗೋಪಾಲಯ್ಯ ಭದ್ರ

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Film 2025 04 04t210921.805

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

2023ರ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಫಲಿತಾಂಶ; ಕೆ ಗೋಪಾಲಯ್ಯ ಬಿಜೆಪಿಪರವಾಗಿ 96,424 (60.06%) ಪಡೆದು 51,165 ಅಂತರದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಎಸ್ ಕೇಶವಮೂರ್ತಿ 45,259 (28.45%), ಜೆಡಿಎಸ್ ನ ಕೆ.ಸಿ ರಾಜಣ್ಣ ಗೆ 9,241(5.81%) ಮತಗಳು ಪಡೆದಿದ್ದರು.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಚಿತ್ರಣ..

ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳಿಂದ ಗೆಲವು ಸಾಧಿಸಿರೋ ಗೋಪಾಲಯ್ಯ ಮಹಾಲಕ್ಷ್ಮೀ ಲೇಔಟ್ ನನ್ನು ತಮ್ಮ ಪ್ರತಿಷ್ಠಿತ ಕ್ಷೇತ್ರ ಎಂದು ಸಾಬೀತು ಪಡಿಸಿಕೊಂಡಿದ್ದಾರೆ. 2013, 2018 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು, ನಂತರ ಬಿಜೆಪಿ ಸೇರಿದ ಗೋಪಾಲಯ್ಯಗೆ 4 ಬಾರಿ ಮತದಾರರ ಆಶೀರ್ವಾದ ಮಾಡಿದ್ದರು.

ಮೂಡ್ ಆಫ್ ಕರ್ನಾಟಕ ಮಹಾಲಕ್ಷ್ಮೀ ಲೇಔಟ್‌‌ ಮೂಡ್ ಹೇಗಿದೆ.?

ಅಭಿವೃದ್ಧಿ ಕೆಲಸದ ಮೂಲಕವೇ ಜನಮನ್ನಣೆ ಪಡೆದಿರೋ ಬೆಂಗಳೂರಿನ ಕೆಲವೇ ಶಾಸಕರಲ್ಲಿ ಇವರು ಒಬ್ಬರು. ವಲಸಿಗ ಮತದಾರರೇ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ವೋಟ್ ಬ್ಯಾಂಕ್. ವಿರೋಧ ಪಕ್ಷದ ಅಭ್ಯರ್ಥಿಗಳು ಯಾರೇ ಇರಲಿ, ಕ್ಷೇತ್ರದಲ್ಲಿ ಗೋಪಾಲಯ್ಯಗೆ ಮತ

ಮಹಾಲಕ್ಷ್ಮೀ ಲೇಔಟ್ ಆಕಾಂಕ್ಷಿಗಳು ಯಾರು.?

ಮಹಾಲಕ್ಷ್ಮೀ ಲೇಔಟ್ ನಲ್ಲಿ ಸತತ ಗೆಲುವು ಕಂಡಿರುವ ಕೆ.ಗೋಪಾಲಯ್ಯಗೆ ಬಿಜೆಪಿ ಟೆಕೆಟ್ ಫಿಕ್ಸ್. ಕಾಂಗ್ರೆಸ್ ನಿಂದ ಎಸ್ ಕೇಶವಮೂರ್ತಿ ಮತ್ತು ಮಂಜುನಾಥ್ ಹೆಚ್ ಎಸ್ ಹಾಗೂ ಜೆಡಿಎಸ್ ಪರ ಕೆ ಸಿ ರಾಜಣ್ಣ ಅಥವಾ ಗೀರಿಶ್ ಕೆ ನಾಶಿ ಚಾನ್ಸ್ ಸಿಗುವ ನಿರೀಕ್ಷೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version