ಇ-ಖಾತೆಗಾಗಿ ಕಂದಾಯ ಪಾವತಿಸಲು ಸೈಟ್ ಹಾಗೂ ಮನೆ ಮಾಲಿಕರ ಪರದಾಟ

ಲಕ್ಷ್ಮೀಪುರ ಗ್ರಾಮ ಪಂಚಾಯತಿಯಲ್ಲಿ ಕಂದಾಯ ಪಾವತಿಗೆ ಜನರ ಹೋರಾಟ

Untitled design (3)

ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್

ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯತಿಯಲ್ಲಿ ಇ-ಖಾತೆಗಾಗಿ ಕಂದಾಯ ಪಾವತಿ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಸುಮಾರು 16 ಸಾವಿರ ಸೈಟ್ ಮತ್ತು ಮನೆಗಳು ಈ ಪಂಚಾಯತಿಯ ವ್ಯಾಪ್ತಿಗೆ ಸೇರಿವೆ. ಪ್ರತಿ ವರ್ಷ ಜುಲೈ–ಆಗಸ್ಟ್ ತಿಂಗಳೊಳಗೆ ಈ ಆಸ್ತಿ ಮಾಲಿಕರು ತಮ್ಮ ಪ್ರಾಪರ್ಟಿ ಟ್ಯಾಕ್ಸ್ ಪಾವತಿಸುತ್ತಾರೆ. ಆದರೆ ಈ ವರ್ಷ,ಸರ್ಕಾರದ ಹೊಸದಾಗಿ ಆರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆಯ ಇ-ಖಾತೆಗಾಗಿ ಕಂದಾಯ ಪಾವತಿಸಲು
ಸ್ಥಳೀಯ ಲಕ್ಷ್ಮೀಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದ ಕಾರಣದಿಂದಾಗಿ ಜನರು ಪ್ರತಿ ದಿನ ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿಯಲ್ಲಿ ನಿಂತಿದ್ದಾರೆ.

ADVERTISEMENT
ADVERTISEMENT

ಪ್ರಸ್ತುತ ಕಚೇರಿಯಲ್ಲಿ ಕೇವಲ ನಾಲ್ಕು ಅಥವಾ ಐದು ಮಂದಿ ಸಿಬ್ಬಂದಿ ಕಂದಾಯ ಸಂಗ್ರಹಕ್ಕಾಗಿ ನೇಮಕಗೊಂಡಿದ್ದಾರೆ. ಈ ಮಟ್ಟದ ಜನಸಂಖ್ಯೆಗೆ ಮತ್ತು ಆಸ್ತಿ ಪ್ರಮಾಣಕ್ಕೆ ಇದು ತೀವ್ರವಾಗಿ ಅಪರ್ಯಾಯ. ದಿನಕ್ಕೆ ಸಾವಿರಕ್ಕೂ ಹೆಚ್ಚು ಜನರು ಕಚೇರಿಗೆ ಬರುವಂತಾಗಿದೆ. ಕೆಲವರು ಬೆಳಿಗ್ಗೆ 4 ಗಂಟೆಗೇ ಬಂದು ರಾತ್ರಿ 7 ಗಂಟೆಯವರೆಗೆ ಸಾಲಿನಲ್ಲಿ ನಿಂತು ಇನ್ನು ಪಾವತಿಯಾಗದೆ ಮನೆಗೆ ಹಿಂತಿರುಗುವಂತಾಗುತ್ತಿದೆ.

ಬೆಂಗಳೂರು ನಗರದಿಂದಲೂ ಜನರು ಬಂದು ಪರದಾಡುತ್ತಿರುವುದು ಬೇಜವಾಬ್ದಾರಿಯಾಗಿದೆ.ತಮ್ಮ ಆಸ್ತಿ ಲಕ್ಷ್ಮೀಪುರ ವ್ಯಾಪ್ತಿಯಲ್ಲಿ ಇದ್ದು, ಕೆಲಸ ನಿಮಿತ್ತ ಬೆಂಗಳೂರು ನಗರದಲ್ಲಿ ವಾಸವಾಗಿರುವವರು ಒಂದು ದಿನ ರಜೆ ತೆಗೆದುಕೊಂಡು ಕಂದಾಯ ಪಾವತಿಸಲು ಬರುತ್ತಾರೆ. ಆದರೆ ಕಚೇರಿಯ ದುರ್ಬಳಕಿಯಿಂದ ಅವರು ದಿನವನ್ನೆಲ್ಲಾ ವ್ಯರ್ಥ ಮಾಡಿಕೊಳ್ಳುವಂತಾಗಿದೆ.

ಈ ಕುರಿತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. “ಹತ್ತು ಮಂದಿ ಸಿಬ್ಬಂದಿ ಬೇಕಾಗಿರುವಲ್ಲಿ ಕೇವಲ ನಾಲ್ಕು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರಿಗೆ ಸುಲಭವಾಗಿ ಕಂದಾಯ ಪಾವತಿಸುವ ವ್ಯವಸ್ಥೆ ಮಾಡಬೇಕು” ಎಂಬುದು ಅವರ ಅಭಿಪ್ರಾಯ.

ಮಾದನಾಯಕನಹಳ್ಳಿ ನಗರಸಭೆ ಆಯುಕ್ತರ ವಿರುದ್ಧವೂ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ಕೊರತೆಯ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮವಿಲ್ಲ ಎಂಬ ಆರೋಪಗಳಿವೆ. ಗ್ರಾಹಕರ ಸಹನೆ ಮೀರಿದ ಹಿನ್ನೆಲೆಯಲ್ಲಿ, ಈಗ ಸಾರ್ವಜನಿಕರು ಮಾಧ್ಯಮಗಳ ಮುಖಾಂತರ ತಮ್ಮ ಬೇಡಿಕೆಯನ್ನು ಅಭಿವ್ಯಕ್ತಿಸುತ್ತಿದ್ದಾರೆ.

“ಸಾಫ್ಟ್‌ವೇರ್ ವ್ಯವಸ್ಥೆ ಇದೆ, ಆನ್‌ಲೈನ್ ಪಾವತಿ ವ್ಯವಸ್ಥೆಯೂ ಇದೆ ಅಂತಾರೆ. ಆದರೆ ಸರಿಯಾಗಿ ಕೆಲಸ ಮಾಡುವ ಸಿಬ್ಬಂದಿ ಇಲ್ಲದಿದ್ದರೆ ಜನರು ಇನ್ನೆಷ್ಟು ದಿನ ಈ ಪರದಾಟ ಅನುಭವಿಸಬೇಕು?” ಎಂದು ಪ್ರಶ್ನಿಸುತ್ತಿದ್ದಾರೆ.

ಕಡೇಗೆ, ಜನರ ಬೇಡಿಕೆ ಒಂದೇ – ಕೂಡಲೇ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ, ಸಾಲು–ಹೋರಾಟವಿಲ್ಲದ ಸುಗಮ ಸೇವೆ ಒದಗಿಸಬೇಕು. ಇಲ್ಲದಿದ್ದರೆ, ಮುಂದೆ ಪ್ರತಿಭಟನೆ ನಡೆಸುವ ದಾರಿಯಲ್ಲಿಯೇ ಜನರು ಮುಂದಾಗುವ ಸಾಧ್ಯತೆ ಇದೆ.

ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್

| Reported by: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್
Exit mobile version