ಹೋಂವರ್ಕ್ ಒತ್ತಡದಿಂದ 15 ವರ್ಷದ ವಿದ್ಯಾರ್ಥಿ ಆ*ತ್ಮಹ*ತ್ಯೆ

Web (14)

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮದಲ್ಲಿ ಹೋಂವರ್ಕ್ ಒತ್ತಡದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.

ದಾಸನಪುರ ಗ್ರಾಮದ 15 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕುಸುಮ ಆತ್ಮಹತ್ಯೆಗೆ ಶರಣು.ಮಾಕಳಿ ಬಳಿಯ ಸೃಷ್ಟಿ ಫ್ರೌಡಶಾಲಾಯಲ್ಲಿ ಓದುತ್ತಿದ್ದ ಕುಸುಮ, ಪೋಷಕರಾದ ರಾಮು ಮತ್ತು ಶೋಭ ದಂಪತಿಯ ಮಗಳು. ಕುಸುಮ ಸಾಕಷ್ಟು ಹೋಂವರ್ಕ್ ಪೆಂಡಿಂಗ್ ಇಟ್ಟುಕೊಂಡಿದ್ದಳು. ಶಿಕ್ಷಕರು ಕೇಳ್ತಾರೆ ಎಂಬ ಭಯದಿಂದ ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿದ್ದಳು.

ಕುಸುಮ ಮನೆಯವರ ಒತ್ತಡವೋ ಅಥವಾ ಶಾಲೆಯಿಂದ ಒತ್ತಡ ಜಾಸ್ತಿಯಾಗಿತ್ತೋ ಗೊತ್ತಿಲ್ಲ..?
“ಹೋಂವರ್ಕ್ ಮಾಡಿಲ್ಲ ಅಂದ್ರೆ ಟೀಚರ್ ಹೊಡಿತಾರೆ, ರಜೆ ಹಾಕಿದ್ರೆ ಪೋಷಕರು ಬೈತಾರೆ” ಎನ್ನುವ ಆಕೆಯ ಮನಸ್ಥಿತಿಯಲ್ಲಿ ಇತ್ತು. ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯುವತಿ ಕುಸುಮ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

“ಎಲ್ಲಾ ಮಕ್ಕಳಿಗೂ ಒಂದೇ ರೀತಿ ಹೋಂವರ್ಕ್ ನೀಡಲಾಗಿದೆ. ಆತ್ಮಹತ್ಯೆಗೆ ಬೇರೆ ಕಾರಣವೂ ಇರಬಹುದು. ತನಿಖೆ ಬಳಿಕ ಸತ್ಯ ಗೊತ್ತಾಗುತ್ತದೆ” ಎಂದು ಶಾಲೆಯ ಮುಖ್ಯ ಶಿಕ್ಷಕ ಅಶೋಕ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಿ ಯುವತಿ ಬಳಸುತ್ತಿದ್ದ ಮೊಬೈಲ್‌‌‌‌ಅನ್ನು ವಶಕ್ಕೆ ಪಡೆದು ತನಿಖಾಧಿಕಾರಿಗಳು ತನಿಖೆ
ಆರಂಭಿಸಿದ್ದಾರೆ.

ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
Exit mobile version