ಬಾಲ್ಯ ಸ್ನೇಹಿತೆ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಜಾಲಿ ಜಾಲಿ

Untitled design 2025 04 13t231152.627

ಚಿಕ್ಕಹಟ್ಟಿಹೊಳಿ (ಖಾನಾಪುರ) : ತವರು ಮನೆಯ ಜಾತ್ರೆಯಲ್ಲಿ ಭಾಗಿಯಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭಾನುವಾರ ತಮ್ಮ ಬಾಲ್ಯ ಸ್ನೇಹಿತೆಯ ಜೊತೆ ಸಂಭ್ರಮಿಸಿದರು. ವಿಶೇಷವೆಂದರೆ ಸಚಿವರ ಬಾಲ್ಯ ಸ್ನೇಹಿತೆ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿ ಬರುವ ಅಂಗನವಾಡಿ ಕಾರ್ಯಕರ್ತೆ!

ಚಿಕ್ಕಹಟ್ಟಿಹೊಳಿಯ ಶ್ರೀ ವೀರಭದ್ರ ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ತವರು ಮನೆಯಲ್ಲಿದ್ದಾರೆ. ಭಾನುವಾರ ಅವರ ಶಾಲಾ ಹಾಗೂ ಬಾಲ್ಯ ಸ್ನೇಹಿತೆ ಗಂಗಮ್ಮ ಮನೆಗೆ ಆಗಮಿಸಿದ್ದರು. ಇಬ್ಬರೂ ಜೊತೆ ಕುಳಿತು ಊಟ ಸವಿದು, ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ಪರಸ್ಪರ ಖುಷಿ ಹಂಚಿಕೊಂಡರು.

ವೃತ್ತಿಯಲ್ಲಿ ಗಂಗಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದ ಸಚಿವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಇಬ್ಬರ ಸ್ನೇಹದಲ್ಲಿ ಯಾವುದೇ ಅಂತರ ಕಾಣಲಿಲ್ಲ. ಬಾಲ್ಯದಲ್ಲಿದ್ದಂತೆ ಇಬ್ಬರೂ ಮಾತನಾಡುತ್ತ ಕಾಲಕಳೆದರು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version