ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣ: ಮತ್ತೊಂದು ಮೈಲಿಗಲ್ಲು

123 (98)

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ)ದಲ್ಲಿ ಏರ್ ಇಂಡಿಯಾ ಸ್ಯಾಟ್ಸ್‌ನ ನೂತನ ಲಾಜೆಸ್ಟಿಕ್ ಪಾರ್ಕ್ ಉದ್ಘಾಟನೆಯಾಗಿದೆ. ಇದು ದಕ್ಷಿಣ ಭಾರತದ ಅತಿದೊಡ್ಡ ಲಾಜೆಸ್ಟಿಕ್ ಪಾರ್ಕ್ ಆಗಿದೆ.

ಏರ್ ಇಂಡಿಯಾ ಸ್ಯಾಟ್ಸ್‌ನ ಚೇರ್ಮನ್ ನಿಪುನ್ ಅಗರ್ವಾಲ್, ಬಾಬ್ ಚೀ ಮತ್ತು ವಿಮಾನ ನಿಲ್ದಾಣದ ಎಂಡಿ ಹರಿಮರನ್ ಅವರು ದೀಪ ಬೆಳಗುವ ಮೂಲಕ ಈ ಲಾಜೆಸ್ಟಿಕ್ ಪಾರ್ಕ್‌ನ ಉದ್ಘಾಟನೆ ಮಾಡಿದರು.

ಕೆಐಎಬಿ ದೇಶದ ಮೂರನೇ ಅತಿ ಬಿಡುವಿನ ವಿಮಾನ ನಿಲ್ದಾಣವಾಗಿದ್ದು, ಪ್ರಸ್ತುತ 502,480 ಮೆಟ್ರಿಕ್ ಟನ್ ಸರಕು ಸಾಗಣೆ ಸಾಮರ್ಥ್ಯ ಹೊಂದಿದೆ. 2030ರ ವೇಳೆಗೆ 1 ಮಿಲಿಯನ್ ಮೆಟ್ರಿಕ್ ಟನ್ ಕಾರ್ಗೋ ಸಾಗಣೆಯ ಗುರಿಯನ್ನು ಇದು ಹೊಂದಿದೆ.

ನೂತನ ಏರ್ ಇಂಡಿಯಾ ಸ್ಯಾಟ್ಸ್ ಲಾಜೆಸ್ಟಿಕ್ ಪಾರ್ಕ್ 2.40 ಲಕ್ಷ ಚದರ ಅಡಿಗಳ ವಿಸ್ತೀರ್ಣವನ್ನು ಹೊಂದಿದ್ದು, ಇದರಲ್ಲಿ 11,000 ಚದರ ಅಡಿಗಳ ಸಾಮಾನ್ಯ ವೇರ್‌ಹೌಸ್ ಮತ್ತು 24,000 ಚದರ ಅಡಿಗಳ ಕಚೇರಿ ಸೌಲಭ್ಯವಿದೆ. ಇದಲ್ಲದೇ, ಕೋಲ್ಡ್ ಸ್ಟೋರೇಜ್, ಎಕ್ಸ್‌ಪ್ರೆಸ್ ಕೊರಿಯರ್ ಸೇವೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಪಾರ್ಕ್ ವಿನ್ಯಾಸಗೊಂಡಿದೆ.

Exit mobile version