ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ

ನಾಡಿನೆಲ್ಲಡೆ ಶ್ರೀರಾಮನವಮಿ ಸಂಭ್ರಮ

Film 2025 04 06t153428.231

ವರದಿ: ಮೂರ್ತಿ.ಬಿ ನೆಲಮಂಗಲ

ರಾಜ್ಯದಾದ್ಯಂತ ಶ್ರೀರಾಮನವಮಿ ಉತ್ಸವವು ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಇದಕ್ಕೆ ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣೆ ಹೊರತಾಗಿರಲಿಲ್ಲ. ಹೌದು ಇಂದು ಬಾಗಲಗುಂಟೆ ಪೊಲೀಸ್ ಠಾಣೆಯ ಸಿಬ್ಭಂದಿಗಳು ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ನಂತರ  ರಾಮ ನವಮಮಿಯ ವಿಶೇಷ ಖಾದ್ಯಗಳಾದ  ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಿಸುವ ಮೂಲಕ ಶ್ರೀರಾಮನವಮಿ ಹಬ್ಬವನ್ನು ಸಾಮಾಜಿಕ ಸೌಹಾರ್ದತೆಯ ಸಂಕೇತವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ “ಸ್ನೇಹ – ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಹರಡಲಿ” ಎಂಬ ಸಂದೇಶ ನೀಡಿ, ಮಾನವೀಯ ಮೌಲ್ಯಗಳಾದ ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ – ಮಮತೆ ಇತ್ಯಾದಿಗಳನ್ನು ಎಲ್ಲರೂ ಆದರ್ಶವಾಗಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

| Reported by: ಮೂರ್ತಿ.ಬಿ ನೆಲಮಂಗಲ
Exit mobile version