ಹುಬ್ಬಳ್ಳಿಯಲ್ಲಿ ಮಹಾದೇವ V ಕರ್ಮಾರಿ & VSV ಪ್ರಸಾದ್‌ ಅವರಿಗೆ ಭವ್ಯ ಸನ್ಮಾನ

BeFunky collage 2026 01 18T140724.949

ಉದ್ಯಮಿ, ದಾನಿ ಹಾಗೂ ಸಮಾಜಸೇವಕ ಶ್ರೀ ಮಹಾದೇವ ವಿ. ಕರ್ಮಾರಿ ಅವರ ಸಾಧನೆಗಳನ್ನು ಸ್ಮರಿಸಿ, ಸ್ನೇಹಿತರು ಮತ್ತು ಅಭಿಮಾನಿಗಳ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. 200ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು, ಸಾಮಾಜಿಕ ನಾಯಕರು, ರೋಟೇರಿಯನ್‌ಗಳು, ಶಿಕ್ಷಣತಜ್ಞರು ಮತ್ತು ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿ ಸಮಾರಂಭಕ್ಕೆ ವಿಶೇಷ ಛಾಪು ಮೂಡಿಸಿದರು.

ಕಾರ್ಯಕ್ರಮವನ್ನು ವಿಭವ ಗ್ರೂಪ್‌ನ ಸಿಇಒ ಶ್ರೀ ಎಚ್. ಎನ್. ನಂದಕುಮಾರ್ ಅವರು ಪರಿಚಯಿಸಿ ಮಾತನಾಡಿದರು. ಶ್ರೀ ಕರ್ಮಾರಿ ಅವರು ಸಾಮಾನ್ಯ ವ್ಯಕ್ತಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿ ಹೇಗೆ ಈ ಪ್ರದೇಶದ  ಉತ್ಪಾದನಾ ಕ್ಷೇತ್ರದಲ್ಲಿ ಪ್ರವರ್ತಕರಾದರು ಎಂಬುದನ್ನು ವಿವರಿಸಿದರು. 1962ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, 1991ರಲ್ಲಿ ಭಾರತದ ಆರ್ಥಿಕ ಉದಾರೀಕರಣದ ಸಮಯದಲ್ಲಿ ಕರ್ನಾಟಕ ಕನ್ವೇಯರ್ಸ್ & ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿದ್ದನ್ನು ನೆನಪಿಸಿಕೊಂಡರು.

ಶ್ರೀ ಕರ್ಮಾರಿ ಅವರಿಗೆ ಲಭಿಸಿರುವ ಪ್ರಮುಖ ಪ್ರಶಸ್ತಿಗಳು:

ಸ್ವರ್ಣ ಗ್ರೂಪ್‌ನ ವಿ.ಎಸ್.ವಿ. ಪ್ರಸಾದ್‌ ಅವರಿಗೂ ಸನ್ಮಾನ

ಸ್ವರ್ಣ ಗ್ರೂಪ್‌ನ ಎಂಡಿ ಶ್ರೀ ಚಿಗುರುಪತಿ ವಿ.ಎಸ್.ವಿ. ಪ್ರಸಾದ್ ಅವರಿಗೂ ಇದೇ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯ್ತು. ಪ್ರಸಾದ್ ಅವರ 60 ವರ್ಷಗಳ ಸಮಾಜ ಸೇವೆಯನ್ನು ಸ್ಮರಿಸಿ ಅವರನ್ನು ಗೌರವಿಸಲಾಯ್ತು. ಈ ವೇಳೆ ಮಾತನಾಡಿದ ವಿ. ಎಸ್. ವಿ ಪ್ರಸಾದ್, ಶ್ರೀಯುತ ಕರ್ಮಾರಿ ಅವರ ಸಾಧನೆಗಳನ್ನು ಸ್ಮರಿಸಿದರು. ಕರ್ಮಾರಿ ಅವರ ನಮ್ರತೆಯನ್ನು ಕೊಂಡಾಡಿದ ಪ್ರಸಾದ್, ಕರ್ಮಾರಿ ಅವರು ದೀರ್ಘಾಯುಷ್ಯ ಹೊಂದಲಿ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರಲಿ ಎಂದು ಹಾರೈಸಿದರು.

ಪದ್ಮಶ್ರೀ ಡಾ. ವಿಜಯ್ ಸಂಕೇಶ್ವರ್ ಮತ್ತು ಶ್ರೀಮತಿ ಲಲಿತಾ ಸಂಕೇಶ್ವರ್ ಅವರು ಶ್ರೀ ಮಹಾದೇವ ವಿ. ಕರ್ಮಾರಿ ಮತ್ತು ಶ್ರೀಮತಿ ಸವಿತಾ ಕರ್ಮಾರಿ ಅವರನ್ನು ಸನ್ಮಾನಿಸಿ ಮಾತನಾಡಿದರು. 82 ವರ್ಷ ವಯಸ್ಸಿನಲ್ಲೂ ಶಕ್ತಿಯುತರಾಗಿ, ದೂರದೃಷ್ಟಿಯುಳ್ಳವರಾಗಿ ಉತ್ತರ ಕರ್ನಾಟಕದ ಕೈಗಾರಿಕಾ ಪರಿಸರವನ್ನು ಬಲಪಡಿಸುತ್ತಿರುವುದನ್ನು ಶ್ಲಾಘಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಶ್ರೀ ಜಗದೀಶ್ ಶೆಟ್ಟರ್ ಅವರು ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ ರೂಪಿಸುವಲ್ಲಿ ಶ್ರೀ ಕರ್ಮಾರಿ ಅವರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿ, ರಾಜ್ಯದ ಉದ್ಯಮ ಸುಧಾರಣೆಗಳ ಮೇಲೆ ಅವರ ಪ್ರಯತ್ನಗಳು ದೊಡ್ಡ ಪ್ರಭಾವ ಬೀರಿವೆ ಎಂದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಡಾ. ಅಶೋಕ್ ಶೆಟ್ಟರ್ ಅವರು ಬಿವಿಬಿ ಅಲ್ಯುಮ್ನಿ ಅಸೋಸಿಯೇಷನ್‌ ಅಧ್ಯಕ್ಷರಾಗಿ ನೀಡಿದ ನಾಯಕತ್ವವನ್ನು ಸ್ಮರಿಸಿದರು. ಶಾಸಕ ಶ್ರೀ ಮಹೇಶ್ ತೆಂಗಿನಕಾಯಿ ಅವರು ಶ್ರೀ ಕರ್ಮಾರಿ ಅವರ ಲೋಕೋಪಕಾರಿ ಕಾರ್ಯಗಳನ್ನು “ಅನುಕರಣೀಯ” ಎಂದು ಕರೆದರು.

ಕಾರ್ಯಕ್ರಮವನ್ನು ಸಿಎ ಶೇಷಗಿರಿ ಕುಲಕರ್ಣಿ ಅವರು ನಿರೂಪಿಸಿದರು. ಶ್ರೀ ಕರ್ಮಾರಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ವಿದ್ಯಾರ್ಥಿವೇತನಗಳು ಮತ್ತು ರೋಟರಿ ಸೇವೆಯಲ್ಲಿ “ಸರ್ವಿಸ್ ಅಬೊವೆ ಸೆಲ್ಫ್” ಜೀವನಶೈಲಿಯನ್ನು ಎತ್ತಿ ತೋರಿಸಿದರು. 82ರಲ್ಲೂ ಜೆನ್ ಝೀನಷ್ಟು ಉತ್ಸಾಹ ಹೊಂದಿರುವುದನ್ನು ವಿಶೇಷವಾಗಿ ಗಮನಿಸಿದರು.

ಮೇವಿನ್ ಗ್ರೂಪ್‌ನ ಶ್ರೀ ವಿಕ್ರಮ್ ಶಿರೂರ್, ಎಲ್‌ವಿಟಿ ಗ್ರೂಪ್‌ನ ಶ್ರೀ ಮಹೇಂದ್ರ ಠಕ್ಕರ್, ಏಬಲ್ ಡಿಸೈನ್ ಇಂಜಿನಿಯರಿಂಗ್‌ನ ಶ್ರೀ ಜಗದೀಶ್ ಹಿರೇಮಠ್, ಅಲ್ಯೂ ಪ್ರಿಂಟ್ಸ್‌ನ ಶ್ರೀ ಜಯಪ್ರಕಾಶ್ ತೆಂಗಿನಕಾಯಿ ಮತ್ತು ಸಿಎ ಎನ್.ಎ. ಚರತಿಮಠ್ ಅವರು ಶ್ರೀ ಕರ್ಮಾರಿ ಅವರೊಂದಿಗಿನ ಒಡನಾಟ ಮತ್ತು ಮಾರ್ಗದರ್ಶನವನ್ನು ಹಂಚಿಕೊಂಡು ಪ್ರಾಮಾಣಿಕತೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಶ್ರೀ ಧ್ರುವ ಎಚ್.ಎನ್. ಅವರು ಧನ್ಯವಾದಗಳೊಂದಿಗೆ ಮುಕ್ತಾಯಗೊಳಿಸಿದರು. ಎಲ್ಲಾ ಗಣ್ಯರ ಉಪಸ್ಥಿತಿ ಮತ್ತು ಹೃದಯಸ್ಪರ್ಶಿ ಸನ್ಮಾನಗಳಿಂದಾಗಿ ಈ ಸಮಾರಂಭ ಶ್ರೀ ಮಹಾದೇವ ವಿ. ಕರ್ಮಾರಿ ಅವರ ಜೀವನ ಮತ್ತು ಕೊಡುಗೆಯನ್ನು ಸ್ಮರಿಸುವ ಅವಿಸ್ಮರಣೀಯ ಕ್ಷಣವಾಯಿತು.

Exit mobile version