ಬಚ್ಚೇಗೌಡ VS ಎಂಟಿಬಿ: ಹೊಸಕೋಟೆ ಯಾರ ಪರ?

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t191055.152
ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.
2023ರ ಹೊಸಕೋಟೆ ವಿಧಾನಸಭಾ ಕ್ಷೇತ್ರ ಫಲಿತಾಂಶದ ಕಡೆ ನೋಡಿದರೆ,ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ  107,220 (50%) ಬಿಜೆಪಿಯ ಎಂ.ಟಿ.ಬಿ.ನಾಗರಾಜ್ 102,145 (48%)  ಮತ ಗಳಿಸಿ ಶರತ್ ಬಚ್ಚೇಗೌಡ 5,075 ಮತಗಳಿಂದ ಜಯಗಳಿಸಿದ್ದರು.
 ಹೊಸಕೋಟೆ ಕ್ಷೇತ್ರದ ಚಿತ್ರಣ..
ಬೆಂಗಳೂರಿಗೆ ಅಂಟಿಕೊಂಡಿರುವ ಹೊಸಕೋಟೆ ವಿಧಾನ ಸಭಾ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರ .  ಕಳೆದ ಎರಡು ದಶಕಗಳಿಂದ ಬಚ್ಚೇಗೌಡ ಹಾಗೂ ಎಂಟಿಬಿ ಕುಟುಂಬದ ನಡುವೆ ಜಿದ್ದಾಜಿದ್ದಿನ ರಾಜಕೀಯ ನಡೆಯುತ್ತಿದೆ. ಜನತಾ ಪರಿವಾರದಲ್ಲಿ ರಾಜಕೀಯ ಶುರು ಮಾಡಿದ್ದ ಬಚ್ಚೇಗೌಡ 1978ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ಗೆದ್ದು ಶಾಸಕರಾದವರು ನಾಲ್ಕು ಬಾರಿ ಶಾಸಕ ಒಮ್ಮೆ ಲೋಕಸಭಾ ಸದಸ್ಯರು ಸಹ ಆಗಿದ್ದರು. 2004, 2013, 2018ರಲ್ಲಿ ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದ ಎಂಟಿ ಬಿ ನಾಗರಾಜು ಆಪರೇಷನ್ ಕಮಲ ಪಾಲಿಟಿಕ್ಸ್ ನಿಂದ ಬಿಜೆಪಿಯಲ್ಲಿ ಪರಿಷತ್ ಸದಸ್ಯರಾಗಿದ್ದಾರೆ.
2008ರಿಂದ ಇಲ್ಲಿಯವರೆಗೂ ಕ್ಷೇತ್ರಕ್ಕೆ ನಡೆದ ಐದು ಚುನಾವಣೆಗಳಲ್ಲಿ ಟಫ್ ಪೈಟ್ ನಡೆದಿದ್ದು, ಯಾರು ಸಹ 8 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿಲ್ಲ. ಹೀಗಾಗಿ ಈ ಕ್ಷೇತ್ರವನ್ನ ಬಿಗ್ ಫೈಟ್ ಇರೋ ಕ್ಷೇತ್ರ ಅಂತಲೇ ಕರೆಯಬಹುದು.

 ಮೂಡ್ ಆಫ್ ಕರ್ನಾಟಕ ಹೊಸಕೋಟೆ ಮೂಡ್ ಹೇಗಿದೆ.? 
ಯುವ ಶಾಸಕರಾಗಿರುವ ಶರತ್ ಬಚ್ಚೇಗೌಡ ಜನರಿಗೆ ಸಿಗುವ ಜನಪ್ರತಿನಿಧಿಯಾಗಿದ್ದು, ಕ್ಷೇತ್ರದಲ್ಲೂ,  ಸರ್ಕಾರದಲ್ಲೂ ಫುಲ್ ಆಕ್ಟೀವ್ ಇದ್ದಾರೆ. ಒಕ್ಕಲಿಗ, ಅಹಿಂದ  ಮತಗಳೇ ಶರತ್ ಗೆ ಪಾಸಿಟಿವ್ ಆಗಿದ್ದು, ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಅಭಿವೃದ್ದಿ ಕೆಲಸಗಳು ಮಾಡಿಕೊಂಡು ಬರುತಿದ್ದಾರೆ.
ಎಂಟಿಬಿ ನಾಗರಾಜ್ ಗೆ  ವಯಸ್ಸಾಗಿರೋ ಕಾರಣ ಮೊದಲಿನಷ್ಟು ಆಕ್ಟೀವ್ ಇಲ್ಲ, ಪುತ್ರ ನಿತೀಶ್ ಪುರುಷೊತ್ತಮ್ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಂಡಿಲ್ಲ ಇದರಿಂದಾಗಿ ಮುಂದಿನ ಚುನಾವಣೆಗಳು  ಶರತ್ ಬಚ್ಚೇಗೌಡ ಸುಲುಭವಾಗಬಹುದು. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ  ಸರ್ವೆ ಪ್ರಕಾರ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಆಕ್ಟೀವ್ ಆಗಿದ್ದು, ಜನ  ಅವರನ್ನೇ ಆಯ್ಕೆ ಮಾಡಬಹುದು.
ಹೊಸಕೋಟೆ ಆಕಾಂಕ್ಷಿಗಳು
ಈವರೆಗೂ  ಬಚ್ಚೇಗೌಡ ಹಾಗೂ ಎಂಟಿಬಿ ಕುಟುಂಬದ ನಡುವೆ ಜಿದ್ದಾಜಿದ್ದಿನ ರಾಜಕೀಯ ಕಣವಾಗಿರುವ ಹೊಸಕೋಟೆ ಮುಂದೆಯೂ ಇವರ ನಡುವೆಯೇ ಹೋರಾಟ ನಡೆಯುವ ಸಾಧ್ಯತೆಗಳೇ ಹೆಚ್ಚು. ಕಾಂಗ್ರೆಸ್ ನಿಂದ  ಶರತ್ ಬಚ್ಚೇಗೌಡ ಸ್ಪರ್ಧೆ ಮಾಡಿದರೆ. ಬಿಜೆಪಿಯಿಂದ ಎಂಟಿಬಿ ಪುತ್ರ ನಿತೀಶ್ ಪುರುಷೊತ್ತಮ್ ನಡುವೆ ಫೈಟ್ ನಿಚ್ಚಿತ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

  • Tata Play-1665
  • U-Digital-ಮೈಸೂರು-160
  • Metro Cast Network-ಬೆಂಗಳೂರು-ಬೆಳಗಾವಿ-30-828
  • V4 digital network-623
  • Abhishek network-817
  • Malnad Digital network-45
  • JBM network-ರಾಮದುರ್ಗ-54
  • Channel net nine-ಧಾರವಾಡ-128
  • Basava cable network-ಚಳ್ಳಕೆರೆ-54
  • City channel network– ಚಳ್ಳಕೆರೆ-54
  • RST digital-ಕಾರ್ಕಳ-101
  • Vinayak cable-ಪಟ್ಟನಾಯಕನಹಳ್ಳಿ-54
  • Mubarak digital-ಸಂಡೂರು-54
  • SB cable-ಸವದತ್ತಿ-54
  • Bhosale network-ವಿಜಯಪುರ-54
  • Surya digital-ಜಗಳೂರು-54
  • Gayatri network-ಸಿಂಧನೂರು-54
  • Global vision-ದಾವಣಗೆರೆ-54
  • Janani cable-ಮಂಡ್ಯ-54
  • Hira cable-ಬೆಳಗಾವಿ-ಹುಬ್ಬಳ್ಳಿ-54
  • UDC network-ಹಾರೋಗೇರಿ-54
  • Moka cable-ಬಳ್ಳಾರಿ-100
  • CAN network-ಚಿಕ್ಕೋಡಿ-54
  • KK digital-ಗಂಗಾವತಿ-54
  • Victory network-ದಾವಣಗೆರೆ-54
Exit mobile version