ಹಾಸನ: ಧರ್ಮಸ್ಥಳದ ಪ್ರಕರಣದಲ್ಲಿ ಯೂಟ್ಯೂಬರ್‌ಗಳ ನಡುವೆ ತೀವ್ರ ಕದನ ಆರಂಭವಾಗಿದೆ. ಯೂಟ್ಯೂಬರ್ ಸುಮಂತ್ ವಿರುದ್ಧ ಇನ್ನೊಬ್ಬ ಯೂಟ್ಯೂಬರ್ ಅಭಿಷೇಕ್ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಸುಮಂತ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. “ಅಭಿಷೇಕ್‌ಗೆ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನಾನು ಸೂಚಿಸಿದ್ದೆ, ಹಣ ಕೊಡುವುದಾಗಿಯೂ ಭರವಸೆ ನೀಡಿದ್ದೆ. ಅಭಿಷೇಕ್ ಹಣ ಪಡೆದು ಧರ್ಮಸ್ಥಳದ ವಿರುದ್ಧ ವಿಡಿಯೋ ತಯಾರಿಸಿದ್ದಾರೆ,” ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಭಿಷೇಕ್ ಸಿಡಿದೆದ್ದಿದ್ದು, ಸುಮಂತ್‌ನ ಆರೋಪಗಳು ಸುಳ್ಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಭಿಷೇಕ್ ತಮ್ಮ ದೂರಿನಲ್ಲಿ ಸುಮಂತ್ ವಿರುದ್ಧ ಮಾಡಿದ ಆರೋಪಗಳೇನು?
-
ಹಣ ಪಡೆದು ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿದ ಎಂಬ ಆರೋಪ.
-
ಸುಮಂತ್ ತನಗೆ ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡುವಂತೆ ಒತ್ತಾಯಿಸಿದ್ದ.
-
ಚಂದನ್ ಮೂಲಕ ವಿಡಿಯೋ ತಯಾರಿಸಲು ಯತ್ನಿಸಿದ್ದ.
-
ಸುಮಂತ್‌ನ ಆರೋಪಗಳಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಭಿಷೇಕ್ ದೂರಿನಲ್ಲಿ ತಿಳಿಸಿದ್ದಾರೆ.
ಯೂಟ್ಯೂಬರ್ ಸುಮಂತ್ ವಿರುದ್ಧ ಯೂಟ್ಯೂಬರ್ ಅಭಿಷೇಕ್ ದೂರು ಸಲ್ಲಿಸಿದ ಕಾಪಿ ನೋಡಲು ಲಿಂಕ್ ಕ್ಲಿಕ್ಕಿಸಿ: Abhishek Complaint
ಅಭಿಷೇಕ್ ಈ ಹಿಂದೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಕೇಸ್‌ನಲ್ಲಿ ಎಸ್‌ಐಟಿ ತನಿಖೆಯನ್ನು ಎದುರಿಸಿದ್ದರು. ಈ ದೂರಿನಿಂದ ಯೂಟ್ಯೂಬರ್‌ಗಳ ನಡುವಿನ ವಿವಾದ ಇನ್ನಷ್ಟು ಉಲ್ಬಣಗೊಂಡಿದೆ. ಚನ್ನರಾಯಪಟ್ಟಣ ಪೊಲೀಸರು ಈ ದೂರಿನ ಕುರಿತು ತನಿಖೆ ಆರಂಭಿಸಿದ್ದಾರೆ.