ಹಾಸನದಲ್ಲಿ ಭಯಾನಕ ಅಪಘಾತ: ಹಂಪ್ ಕಾಣಿಸದೆ ಬೈಕ್‌ನಿಂದ ಬಿದ್ದು ಯುವತಿ ಸಾ*ವು

ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದ ದುರಂತ ಅಪಘಾತದಲ್ಲಿ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬಳು ಗಂಭೀರ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಇರುವ ಸ್ಪೀಡ್ ಹಂಪ್‌ಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಮೃತರಾದವರು ಸತ್ಯಮಂಗಲ ಬಡಾವಣೆಯ ರಮ್ಯ (23). ಖಾಸಗಿ ಕಾಲೇಜಿನಲ್ಲಿ MCA ಓದುತ್ತಿದ್ದ ರಮ್ಯ ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರೊಂದಿಗೆ ಇದ್ದ ಸ್ವಾತಿ (24) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ವಿವರ

ಹಾಸನ ಹೊರವಲಯದ ಕೈಗಾರಿಕಾ ಪ್ರದೇಶ ಸತ್ಯಮಂಗಲ ಬಡಾವಣೆ ಸಮೀಪದಲ್ಲಿ ನಡೆದ ಘಟನೆ. ರಸ್ತೆಯಲ್ಲಿ ಇದ್ದ ಹಂಪ್ (ಸ್ಪೀಡ್ ಬ್ರೇಕರ್) ಕಾಣದೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಬುಲೆಟ್ ಬೈಕ್ ರೈಡ್ ಮಾಡುತ್ತಿದ್ದ ವೇಳೆ ಸ್ಪೀಡ್ ಹಂಪ್‌ಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ರಮ್ಯ ಸ್ಥಳದಲ್ಲೇ ಧಾರುಣ ಸಾವು, ಸ್ವಾತಿ ಗಂಭೀರ ಗಾಯಗೊಂಡಿದ್ದಾರೆ. ಯಾರೂ ಧರಿಸಿರಲಿಲ್ಲ ಎಂದು ಪ್ರಾಥಮಿಕ ಮಾಹಿತಿ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ರಸ್ತೆಯಲ್ಲಿ ಹಂಪ್‌ಗಳು ಸರಿಯಾಗಿ ಗುರುತಿಸದಿರುವುದು ಅಥವಾ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಅಪಘಾತಕ್ಕೆ ಕಾರಣ ಎಂದು ಆರೋಪಗಳಿವೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶವಾದ್ದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಸ್ಥಳೀಯರು ಮತ್ತು ಪೊಲೀಸರು ರಮ್ಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಸ್ವಾತಿಯ ಆರೋಗ್ಯ ಸ್ಥಿತಿ ಸುಧಾರಣೆಯ ಕಡೆಗೆ ಇದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಮತ್ತು ರಸ್ತೆಯಲ್ಲಿರುವ ಹಂಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶ ಹೊರಹೊಮ್ಮಿದೆ.

Exit mobile version