ಕಾಲೇಜುಗಳಲ್ಲಿ ರ‍್ಯಾಗಿಂಗ್ ಅನ್ನೋ ಭೂತ ಇನ್ನೂ ಜೀವಂತವಾಗಿದೆ. ಅದಕ್ಕೆ ಕಡಿವಾಣ ಹಾಕೋದಕ್ಕೆ ಪೋಲಿಸರು ಎಷ್ಟೇ ಪ್ರಯತ್ನ ಪಟ್ರು ಅಲ್ಲೊಂದು ಇಲ್ಲೊಂದು ಸದ್ದಿಲ್ಲದೆ ನಡೀತ್ತಾನೇ ಇರ್ತಾವೆ.ಕಾಲೇಜಿನಲ್ಲಿ ಶುರುವಾದ ರ‍್ಯಾಗಿಂಗ್ ಮನೆಯವರೆಗೂ ಆಯುಧಗಳನ್ನು ಹಿಡಿದುಕೊಂಡು ಬರೋ ಮಟ್ಟಕ್ಕೆ ಬಂದಿದ್ದು, ಏರಿಯಾ ಜನ ಭಯಗೊಂಡಿದ್ದಾರೆ.
ಸಿನಿಮೀಯ ಸ್ಟೈಲ್‌ನಲ್ಲಿ ಕೈಯಲ್ಲಿ ಆಯುಧಗಳನ್ನು ಹಿಡಿದು ಕೊಂಡು ಎಂಟ್ರಿಕೊಟ್ಟಿರೋ ಯುವಕರು ಸಿಕ್ಕ ಸಿಕ್ಕವರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಕಾಲೇಜ್‌ನಲ್ಲಿ ಕಾಂಪ್ರಮೈಸ್ ಆಗಿದ್ದ ಗಲಾಟೆಯನ್ನ ಮನೆವರೆಗೂ ಹುಡುಕಿಕೊಂಡು ಬಂದು ದಾಂಧಲೆ ಮಾಡಿದ್ದಾರೆ. ಇದಕ್ಕೆಲ್ಲ ಈ ಸೀನ್‌ಗಳು ಕಂಡು ಬಂದಿದ್ದು ವಿಲ್ಸನ್ ಗಾರ್ಡನ್‌ನ ಬಡಾಮಖಾನ್ ಗ್ರೌಂಡ್‌ನಲ್ಲಿ ಆ ಹುಡುಗರೆಲ್ಲಾ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳ ಬೇಕಿದ್ದ ಅವರು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೆಪ್ಟೆಂಬರ್ 2 ಮಂಗಳವಾರ ಮಧ್ಯಾಹ್ನ ಹೊಸೂರು ರಸ್ತೆಯ ಲಾಲ್ ಬಾಗ್ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿತ್ತು. ಸೀನಿಯರ್ ಮತ್ತು ಜೂನಿಯರ್ ವಿದ್ಯಾರ್ಥಿಗಳ ನಡುವೆ ಉಂಟಾದ ಮಾತಿನ ಚಕಮಕಿಯಿಂದ ರ‍್ಯಾಗಿಂಗ್ ಆಗಿದ್ದು, ಸಣ್ಣ ಗಲಾಟೆಯಾಗಿತ್ತು.
ಬಳಿಕ ಮಧ್ಯಾಹ್ನ ಗಲಾಟೆ ಮಾಡಿಕೊಂಡಿದ್ದ ಆಫ್ರಿದ್ ಎಂಬಾತ ಸಿದ್ದಯ್ಯ ರಸ್ತೆಯ ಬಡಮಕಾನ್ ಮೈದಾನ ಬಳಿ ತನ್ನ ಸ್ನೇಹಿತನ ಜೊತೆ ಕುಳಿತಿದ್ದ. ಈ ವೇಳೆ ಅಲ್ಲಿಗೆ ಬಂದ ಕೆಲವರು ಆತನ ಮೇಲೆ ಗಲಾಟೆ ಮಾಡಿದ್ದಾರೆ. ವಿದ್ಯಾರ್ಥಿಗಳ ಗಲಾಟೆಗೆ ಕೈ ಜೋಡಿಸಿದ ಕೆಲವು ಹೊರಗಿನ ಹಳೇ ವಿದ್ಯಾರ್ಥಿಗಳು ಕೈಯಲ್ಲಿ ಲಾಂಗು ಮಚ್ಚು ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ.
ಈ ವೇಳೆ ಅಫ್ರಿದಿ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿದ್ದಾನೆ. ಮನೆಗೂ ಹಿಂಬಾಲಿಸಿ ಹೋದ ಗುಂಪು ಕೈಯಲ್ಲಿ ಮಾರಕಾಸ್ತ್ರ ಬಿಸಿ ಹಲ್ಲೆಗೆ ಮುಂದಾಗಿದ್ದಾರೆ. ನಂತರ ಪುನಃ ಮೈದಾನಕ್ಕೆ ವಾಪಸ್ ಆಗಿ ಅಲ್ಲಿ ಕುಳಿತಿದ್ದ ಬಬುರ್ ರಾಯನ್ ಎಂಬಾತನ ಮೇಲೆ ಆಯುಧದಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತನ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ಬಬುರ್ ರಾಯನ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 11 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾನೆ. ಈ ಬಗ್ಗೆ ಕೇಸ್ ದಾಖಲಿಸಿದ ಪೊಲೀಸರು ಮಾರಕಾಸ್ತ್ರ ಬಿಸಿದ ಮೊಹಮ್ಮದ್ ಪರ್ಧಿನ್, ಅಫೌನ್, ಸಮೀರ್ ಮತ್ತು ಮೊಹಮ್ಮದ್ ರಾಯನ್ ಎಂಬುವರನ್ನ ಬಂಧಿಸಿದ್ದಾರೆ.
ಒಂದೇ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಉಂಟಾದ ಕ್ಷುಲ್ಲಕ ವಿಚಾರದ ಗಲಾಟೆ ಪೊಲೀಸ್ ಠಾಣೆ ತಲುಪಿದೆ. ಗಲಾಟೆಗೆ ಹೊರಗಿನವರ ಎಂಟ್ರಿ ಮತ್ತು ಮಾರಕಾಸ್ತ್ರಗಳು ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ. ಘಟನೆ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿದ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.