ಪಶು ವೈದ್ಯ ಲೋಕವೇ ಅಚ್ಚರಿ ಪಡುವ ಸಂಗತಿ : ಜನಿಸಿದ ಮೂರೇ ದಿನಕ್ಕೆ ಹಾಲು ಕೊಟ್ಟ ಕರು

Untitled design 2025 03 09t092546.385

 ಚಿತ್ರದುರ್ಗ : ಜಗತ್ತಿನಲ್ಲಿ ಅಸಂಖ್ಯಾತ ವಿಸ್ಮಯಕಾರಿ ಘಟನೆಗಳು ನಡೆಯುತ್ತವೆ. ಆದರೆ ಚಿತ್ರದುರ್ಗ ಜಿಲ್ಲೆಯ ಅನ್ನೇಹಾಳ ಗ್ರಾಮದಲ್ಲಿ ನಡೆದಿದೆ ಒಂದು ನಿಜಕ್ಕೂ ಅಪರೂಪದ ಘಟನೆ. ಇಲ್ಲಿನ ನಿರಂಜನ ಮೂರ್ತಿ ಎಂಬುವವರ ಹಸುವಿನ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕರೆಯುತ್ತಿರುವುದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಮೂರೇ ದಿನದಲ್ಲಿ ಹಾಲು ಕೊಡುವ ಕರು 

ತಾಯಿ ಹಸುವಿನ ಹಾಲು ಕುಡಿದು ಬೆಳೆಯುವ ವಯಸ್ಸಿನ ಕರು ಸ್ವತಃ ಹಾಲು ಕರೆಯುತ್ತಿರುವುದನ್ನು ಕಂಡು ಗ್ರಾಮಸ್ಥರು ಹುಬ್ಬೇರುವಂತಾದರು. ಸಾಮಾನ್ಯವಾಗಿ, ಹಸುವಿನ ಮರಿ ಹಾಲು ಕೊಡಲು ಕೆಲವೇ ವರ್ಷಗಳು ಬೇಕಾಗುತ್ತದೆ. ಆದರೆ ಜನಿಸಿದ ಮೂರೇ ದಿನದಲ್ಲಿ ಹಾಲು ಕೊಡುವ ಈ ಕರು ಸುತ್ತಮುತ್ತಲಿನ ಜನರಿಗೆ ಭಕ್ತಿಯ ಕೇಂದ್ರವಾಗಿದ್ದು, ಗ್ರಾಮಸ್ಥರು ಇದನ್ನು “ಕಾಮಧೇನು” ಎಂದು ಪೂಜಿಸುತ್ತಿದ್ದಾರೆ.

ಈ ಅಪರೂಪದ ಘಟನೆಯ ಹಿಂದೆ ವೈಜ್ಞಾನಿಕ ಕಾರಣವೇನು ಎಂಬುದನ್ನು ಪಶು ವೈದ್ಯರು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗ್ರಾಮಸ್ಥರ ನಂಬಿಕೆ ಪ್ರಕಾರ, ಇದು ದೇವತೆಯ ಕರುಣೆಯಿಂದಾದ ಅಧ್ಬುತ. ಕರುವಿನ ಹಾಲನ್ನು ದೇವಸ್ಥಾನದಲ್ಲಿ ಅಭಿಷೇಕಕ್ಕೆ ಬಳಸಲಾಗುತ್ತಿದೆ ಮತ್ತು ಗ್ರಾಮಸ್ಥರು ಪುಣ್ಯ ವರ್ಣಿಸುತ್ತಿದ್ದಾರೆ.

ಈ ವಿಶೇಷ ಕರುವನ್ನು ನೋಡುವುದಕ್ಕೆ ಗ್ರಾಮದ ಜನರು ಗುಂಪಾಗಿ ಬರುತ್ತಿದ್ದಾರೆ. “ಇದು ಶತಮಾನಗಳಲ್ಲೇ ಅಪರೂಪ! ಇದನ್ನು ದೇವರ ಆಶೀರ್ವಾದವಾಗಿ ಕಾಣಬೇಕು” ಎಂದು ಊರಿನ ಹಿರಿಯರು ಹೇಳಿದ್ದಾರೆ.

Exit mobile version