ಚಿಕ್ಕಮಗಳೂರಿನಲ್ಲಿ ಭಾರಿ ಗೋಲ್ಡ್ ಲೋನ್ ವಂಚನೆ: ಅಸಲಿ ಚಿನ್ನ ಮಾರಿ ನಕಲಿ ಇಟ್ಟ ಬ್ಯಾಂಕ್ ಸಿಬ್ಬಂದಿ!

BeFunky collage 2026 02 18T144414.869

ಚಿಕ್ಕಮಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಲ್ಲಿ ಗ್ರಾಹಕರನ್ನು ವಂಚಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರು ಅಡವಿಟ್ಟ ಅಸಲಿ ಚಿನ್ನಾಭರಣಗಳನ್ನು ಮಾರಿ, ಬದಲಿಗೆ ನಕಲಿ ಚಿನ್ನ ಇಟ್ಟು ವಂಚನೆ ಮಾಡಿದ್ದಾರೆ ಎಂಬ ಆರೋಪ ದೃಢಪಟ್ಟಿದೆ. ಇದರಿಂದ ಗ್ರಾಹಕರು ಲೋನ್ ಹಣ ಮತ್ತು FD ಮೊತ್ತವನ್ನು ಕಳೆದುಕೊಂಡಿದ್ದಾರೆ. 

ಪ್ರಕರಣದ ವಿವರ :

ಚಿಕ್ಕಮಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಸಿಬ್ಬಂದಿ ನಾರಾಯಣಸ್ವಾಮಿ, ಪ್ರಶಾಂತ್, ಲಾವಣ್ಯ ಮತ್ತು ಶ್ವೇತಾ ಸೇರಿದಂತೆ ಐವರು ಮೇಲೆ ಪ್ರಕರಣ ದಾಖಲಾಗಿದೆ. ಈ ಅವಧಿಯಲ್ಲಿ 2020 ರಿಂದ 2025ರವರೆಗೆ ವಂಚನೆ ಮಾಡಿದ್ದಾರೆ. ಸುಮಾರು 5 ವರ್ಷಗಳ ಕಾಲ ವಂಚನೆ ಮಾಡಿದ್ದಾರೆ ಎಂಬ ಆರೋಪ. ಗ್ರಾಹಕರು ಚಿನ್ನ ಅಡವಿಟ್ಟು ಗೋಲ್ಡ್ ಲೋನ್ ಪಡೆದಿದ್ದರು. (ಉದಾ: 80ಗ್ರಾಂ, 100ಗ್ರಾಂ, 142ಗ್ರಾಂ ಚಿನ್ನ). ಲೋನ್ ಮೊತ್ತವನ್ನು ಗ್ರಾಹಕರಿಗೆ ನೀಡಿ, ನಂತರ ಅಸಲಿ ಚಿನ್ನವನ್ನು ಮಾರಿ ನಕಲಿ ಚಿನ್ನ ಇಟ್ಟರು. ಹೆಚ್ಚುವರಿ ಗೋಲ್ಡ್ ಲೋನ್ ಮಾಡಿಸಿ ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪ.

ಗ್ರಾಹಕರ ದೂರು: ಲೋನ್ ಕ್ಲಿಯರ್ ಮಾಡಿದ ನಂತರವೂ ಅಸಲಿ ಚಿನ್ನ ಹಿಂದಿರುಗಿಸದೇ ಇರುವುದು.

ಪೊಲೀಸ್ ಕ್ರಮ: ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಂಚಿತರು ನ್ಯಾಯಕ್ಕಾಗಿ ಬೆಂಗಳೂರು ಕೇಂದ್ರ ಕಚೇರಿಗೂ ದೂರು ನೀಡಿದ್ದಾರೆ.

ಈ ಘಟನೆಯಿಂದ ಬ್ಯಾಂಕ್ ಗ್ರಾಹಕರ ನಂಬಿಕೆಗೆ ದೊಡ್ಡ ಏಟು ಬಿದ್ದಿದೆ. ಚಿನ್ನ ಅಡವಿ ಲೋನ್ ಪಡೆಯುವ ಮೊದಲು ಬ್ಯಾಂಕ್‌ನ ವಿಶ್ವಾಸಾರ್ಹತೆ, ಚಿನ್ನದ ಪರಿಶೀಲನೆ ಮತ್ತು ದಾಖಲಾತಿಗಳನ್ನು ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಲಾಗುತ್ತಿದೆ. SBI ಅಧಿಕಾರಿಗಳು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Exit mobile version