ಚಿಕ್ಕಬಳ್ಳಾಪುರದಲ್ಲೊಂದು ಲವ್ ಕಹಾನಿ: ಪ್ರೀತಿಸಿ ಅಕ್ಕ-ತಮ್ಮನ ಜೊತೆಯೇ ಪರಾರಿ

BeFunky collage 2026 05 07T115003.898

ಚಿಕ್ಕಬಳ್ಳಾಪುರ: ಮನೆಯವರು ನಿಶ್ಚಯಿಸಿದ್ದ ಮದುವೆಯನ್ನು ನಿರಾಕರಿಸಿ, ವರಸೆಯಲ್ಲಿ ತಮ್ಮನಾಗುವ ಯುವಕನೊಂದಿಗೆ ಯುವತಿಯೊಬ್ಬಳು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿ ಮತ್ತು ಸಂಪ್ರದಾಯಗಳ ನಡುವಿನ ಸಂಘರ್ಷ ಈಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಘಟನೆಯ ವಿವರ :

ದೇವನಹಳ್ಳಿ ತಾಲೂಕಿನ ಸಾವನಕನಹಳ್ಳಿ ನಿವಾಸಿ ಶಶಿಕಲಾ ಮತ್ತು ಹೊಸಕೋಟೆ ಹಳೆ ಊರಿನ ಪ್ರವೀಣ್ ಇಬ್ಬರೂ ಸಂಬಂಧಿಕರು. ವರಸೆಯಲ್ಲಿ ಪ್ರವೀಣ್ ಶಶಿಕಲಾಗೆ ತಮ್ಮನಾಗುತ್ತಾನೆ. ಆದರೆ ಇಬ್ಬರೂ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ, ಶಶಿಕಲಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದರು. ಆದರೆ ಶಶಿಕಲಾ ತನ್ನ ಪ್ರೀತಿಗೆ ಪಟ್ಟು ಹಿಡಿದು, ಮದುವೆಗೆ ಒಪ್ಪಲಿಲ್ಲ. ಕೊನೆಗೆ ಮದುವೆಗೆ ಕೆಲವು ದಿನಗಳ ಮುಂಚೆಯೇ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ.

ಪೊಲೀಸ್ ಮೊರೆ :

ಪರಾರಿಯಾದ ನಂತರ ಶಶಿಕಲಾ ಮತ್ತು ಪ್ರವೀಣ್ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಭೇಟಿ ಮಾಡಿ ಭದ್ರತೆ ಮತ್ತು ನ್ಯಾಯ ಕೋರಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೋಷಕರ ಆತಂಕ :

ಮಗಳ ಈ ನಡೆಯಿಂದ ಕಂಗಾಲಾದ ಪೋಷಕರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಮದುವೆಗೆ ಬಂದಿದ್ದ ನೆಂಟರಿಷ್ಟರ ಮುಂದೆ ತಲೆ ತಗ್ಗಿಸುವಂತಾಗಿದೆ. ಸಂಪ್ರದಾಯ ಮತ್ತು ಪ್ರೀತಿಯ ನಡುವಿನ ಈ ಘಟನೆ ಸ್ಥಳೀಯರಲ್ಲಿ ಬೆರೆಸಿದ ಚರ್ಚೆಗೆ ಕಾರಣವಾಗಿದೆ.

Exit mobile version