ಐಪಿಎಲ್ 2026ರಲ್ಲಿ ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಿಗೆ ಅಭಿಮಾನಿಗಳಿಗೆ ಡಬಲ್ ಗುಡ್ ನ್ಯೂಸ್ ನೀಡಿದೆ BMRCL ಮತ್ತು BMTC.
ಏಪ್ರಿಲ್ 15, 18 ಮತ್ತು 24ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮೂರು ಹೈವೋಲ್ಟೇಜ್ ಪಂದ್ಯಗಳ ಸಂದರ್ಭದಲ್ಲಿ ಮೆಟ್ರೋ ಮತ್ತು ಬಸ್ ಸೇವೆಯನ್ನು ವಿಸ್ತರಿಸಲಾಗಿದೆ.
BMRCL ವಿಶೇಷ ಮೆಟ್ರೋ ಸೇವೆ :
ರಾತ್ರಿ 11 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೆ ಮೆಟ್ರೋ ಸಂಚಾರವನ್ನು ವಿಸ್ತರಿಸಲಾಗಿದೆ. ಕೊನೆಯ ರೈಲುಗಳ ವೇಳಾಪಟ್ಟಿ ಈ ರೀತಿದೆ:
- ವೈಟ್ಫೀಲ್ಡ್ → ರಾತ್ರಿ 12:30
- ಚಲ್ಲಘಟ್ಟ → ರಾತ್ರಿ 12:45
- ಸಿಲ್ಕ್ ಇನ್ಸ್ಟಿಟ್ಯೂಟ್ & ಮಾದಾವರ → ರಾತ್ರಿ 12:45
- ಬೊಮ್ಮಸಂದ್ರ → ರಾತ್ರಿ 1:00
- ಆರ್.ವಿ. ರಸ್ತೆ → ರಾತ್ರಿ 2:00
- ಮೆಜೆಸ್ಟಿಕ್ → ನಾಲ್ಕು ದಿಕ್ಕುಗಳಿಗೆ ರಾತ್ರಿ 1:30ಕ್ಕೆ ಕೊನೆಯ ರೈಲು
ವಿಶೇಷ ಸೌಲಭ್ಯಗಳು:
- IPL ಟಿಕೆಟ್ನಲ್ಲೇ ಮೆಟ್ರೋ QR ಕೋಡ್ ಲಭ್ಯ (ಎರಡು ಮಾರ್ಗಗಳ ಪ್ರಯಾಣಕ್ಕೆ ಬಳಸಬಹುದು)
- ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳನ್ನು ಬಳಸುವಂತೆ ಸಲಹೆ
- ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ: ದ್ವಿಚಕ್ರ ವಾಹನಕ್ಕೆ ₹30 | ಕಾರಿಗೆ ₹60
BMTC ವಿಶೇಷ ಬಸ್ ಸೇವೆ :
ಪಂದ್ಯದ ದಿನಗಳಂದು BMTC ಬಸ್ ಸೇವೆಯನ್ನು ವಿಸ್ತರಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುತ್ತದೆ.
ವಿಶೇಷ ಬಸ್ ಸಂಚಾರ ಮಾರ್ಗಗಳು:
- ಸರ್ಜಾಪುರ – ಕಾಡುಗೋಡಿ ಬಸ್ ನಿಲ್ದಾಣ
- ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ)
- ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
- ಆರ್.ಕೆ. ಹೆಗಡೆ ನಗರ – ಯಲಹಂಕ (ನಾಗವಾರ, ಟ್ಯಾನರಿ ರಸ್ತೆ ಮೂಲಕ)
- ಹೊಸಕೋಟೆ
- ಬನಶಂಕರಿ
BMRCL ಮತ್ತು BMTC ಅಧಿಕಾರಿಗಳು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. “ಟ್ರಾಫಿಕ್ ಜಾಮ್ ತಪ್ಪಿಸಲು ಮತ್ತು ಸುರಕ್ಷಿತವಾಗಿ ಮನೆಗೆ ತಲುಪಲು ಮೆಟ್ರೋ ಮತ್ತು BMTC ಬಸ್‌ಗಳನ್ನು ಬಳಸಿ.”
ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಈ ವ್ಯವಸ್ಥೆ ಸಹಕಾರಿಯಾಗುವುದು ನಿರೀಕ್ಷಿತವಾಗಿದೆ.
