ಬೀದರ್‌ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಸಾವು

ಕಲ್ಬುರ್ಗಿ-ಬೀದರ್ ರೈಲಿನಲ್ಲಿ ಇಳಿದು ಹತ್ತುವಾಗ ಕಾಲು ಜಾರಿ ಘಟನೆ

Untitled design (99)

ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 31 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕಲ್ಬುರ್ಗಿಯಿಂದ ಬೀದರ್‌ಗೆ ಸಂಚರಿಸುತ್ತಿದ್ದ ಲೋಕಲ್ ರೈಲಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಯುವಕನನ್ನು ಕಲ್ಬುರ್ಗಿಯ ಬಸವನಗರ ನಿವಾಸಿ ವಿಜಯಾನಂದ (31) ಎಂದು ಗುರುತಿಸಲಾಗಿದೆ.

ವಿಜಯಾನಂದ ರೈಲು ಹುಮನಾಬಾದ್ ರೈಲ್ವೆ ನಿಲ್ದಾಣದ ಬಳಿ ನಿಂತಾಗ ನೀರು ತರಲು ಕೆಳಗಿಳಿದಿದ್ದರು. ರೈಲು ಮತ್ತೆ ಚಲಿಸಲು ಆರಂಭಿಸಿದಾಗ, ಅವಸರದಲ್ಲಿ ರೈಲನ್ನು ಹತ್ತಲು ಯತ್ನಿಸಿದ ವಿಜಯಾನಂದರ ಕಾಲು ಜಾರಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಈ ಆಕಸ್ಮಿಕ ಘಟನೆಯಲ್ಲಿ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ADVERTISEMENT
ADVERTISEMENT

ಘಟನೆಯ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಆಕಸ್ಮಿಕ ಸಾವು ಎಂದು ತಿಳಿದುಬಂದಿದ್ದು, ಮುಂದಿನ ತನಿಖೆಯನ್ನು ರೈಲ್ವೆ ಪೊಲೀಸರು ಕೈಗೊಂಡಿದ್ದಾರೆ. ಈ ಘಟನೆಯಿಂದಾಗಿ ಕಲ್ಬುರ್ಗಿ-ಬೀದರ್ ರೈಲು ಮಾರ್ಗದಲ್ಲಿ ಕೆಲವು ಸಮಯದವರೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

Exit mobile version