ಭಾರೀ ಮಳೆಗೆ ಸಿಲಿಕಾನ್ ಸಿಟಿ ನಾನಾ ಅವಾಂತರಗಳು ಸೃಷ್ಟಿ..!

ಧರೆಗುರುಳಿದ ಮರ ಗೂಡ್ಸ್ ವಾಹನ ಜಖಂ..!

Web (9)

ಸುಡು ಬಿಸಿಲಿನ ತಾಪ ತಣಿಸಲು ಇಷ್ಟು ದಿನ ಮಳೆ ಬಂದ್ರೆ ಸಾಕು ಅಂತ ಕಾಯ್ತಾ ಇದ್ದ ಜನರಿಗೆ ಇದೀಗಾ ಯಾಕಪ್ಪ ಮಳೆ ಬರ್ತಾ ಇದೆ ಅನ್ನೋ‌ ರೀತಿಯಲ್ಲಿ ಆಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಮಳೆಗೆ ಯಾವೆಲ್ಲಾ ರೀತಿ ಅವಾಂತರ ಸೃಷ್ಟಿ ಮಾಡಿದೆ ಎಂಬುದರ ಕಂಪ್ಲೀಟ್ ‌ಡಿಟೇಲ್ಸ್ ಇಲ್ಲಿದೆ.

ನಮ್ಮ ಬೆಂಗಳೂರು ಎಷ್ಟೇ ಡೆವಲಪ್‌ ಸಿಟಿ ಆದರೂ ಸಣ್ಣ ಮಳೆ ಬಂದ್ರೂ ಕೂಡ ನೀರಿನಲ್ಲಿ ಬೆಂಗಳೂರು ಮುಳುಗಿ ಹೋಗುತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಸುರಿದ ಮಳೆಗೆ ವರುಣಾರಾಯ ನಾನಾ ಅವಾಂತರ ಸೃಷ್ಟಿ ಮಾಡಿದ್ದಾನೆ. ಜನ ಒಂದೆ ಮಳೆಗೆ  ನಡುಗಿಹೋಗುವ ಆಗಿದೆ.

ಕೊನೆಗೂ ಮಳೆ ಬಂತಪ್ಪ ಅಂತ ಖುಷಿಯಲ್ಲಿದ್ದ ಜನ ಯಾಕಾದ್ರೂ ಮಳೆ ಬರ್ತಿದೆ ಅಂತ ಅಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ನಾನ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು ಜಾಲವೃತವಾಗಿದೆ ಕೆ.ಆರ್.ಪುರಂ ಭೀಮಯ್ಯ ಲೇಔಟ್ ರಸ್ತೆಯಲ್ಲಿ‌ ನಿಂತ ನೀರಿಂದ ಕಾರುಗಳು ಮುಳುಗಡೆಯಾಗಿದೆ. ಕೆಲ ಮನೆಯ ಸಂಪ್‌‌‌‌ಗೆ ಕೊಳಚೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಇನ್ನೂ ಮಳೆ ನೀರು ನಿಂತ ರಸ್ತೆಯಲ್ಲಿದ್ದ ಗುಂಡಿಯಲ್ಲಿ ವಾಲಿದ ಆಟೋ ಬಲ ಬದಿಯ ಚಕ್ರ ಗುಂಡಿಯಲ್ಲಿ ಲಾಕ್ ಆಗಿದ್ದು ಹೊಸ ರೋಡ್‌‌‌‌‌ನ ಸಾಯಿ ಶ್ರೀ ಲೇಔಟ್‌‌‌ನಲ್ಲಿ ಆಟೋ ಗುಂಡಿಯಲ್ಲಿ ಸಿಲುಕಿದೆ. ಇನ್ನೂ ಕೆ ಆರ್ ಮಾರುಕಟ್ಟೆ ಬಳಿ ಮಳೆಯಿಂದಾಗಿ ಹೂವುಗಳು ಕೊಚ್ಚಿ ಹೋಗಿದೆ. ದಿನ ನಿತ್ಯ ಆ ಜಾಗದಲ್ಲಿ ವ್ಯಾಪರಾ ಮಾಡುತಿದ್ದ ವ್ಯಾಪಾರಿಗಳು ಮಳೆ ಎಫೆಕ್ಟ್ ನಿಂದಾಗಿ ವ್ಯಾಪಾರ ಕುಸಿತವಾಗಿದೆ.

ಪಿಯೋನಿಯರ್ ರೆಸಿಡೆನ್ಸಿ ನಿವಾಸಿಗಳಿಗೆ ಜಲದಿಗ್ಬಂದನವಾಗಿದೆ. ಆನೇಕಲ್ ತಾಲ್ಲೂಕಿನ ಗಟ್ಟಹಳ್ಳಿಯಲ್ಲಿರುವ ಪಿಯೋನಿಯರ್ ರೆಸಿಡೆನ್ಸಿಗೆ ಮಳೆಯಿಂದಾಗಿ ನಿವಾಸಿಗಳು ಪರಾದಾಟ ‌ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ರೆಸಿಡೆನ್ಸಿ ಲೇಔಟ್‌‌‌ಗೆ ಸಂಪರ್ಕ ಕಲ್ಪಿಸೋ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಜನ ಪರದಾಟ ನಡೆಸಿದ್ದಾರೆ.

ಇನ್ನೂ ಇದಿಷ್ಟೇ ಅಲ್ಲದೇ ಮಳೆ ನಾನ ತರದ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆ ಸೃಷ್ಡಿಸಿದ ಅವಾಂತರ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬಸವೇಶ್ವರ ನಗರ 8th ಮೈನ್ ರೋಡ್‌‌‌ನಲ್ಲಿ ಬೃಹದಾಕಾರದ ಮರವೊಂದು ಧಾರಶಾಹಿಯಾಗಿದೆ‌.‌ ಮರ ಬಿದ್ದ ರಭಸಕ್ಕೆ ಮರದ ಕೆಳಗೆ ಇದ್ದ ಗೂಡ್ಸ ವಾಹನಗಳು ಜಖಂಗೊಂಡಿದೆ.

ಮಳೆಗಾಗಿ‌ ಕಾಯ್ತಾ ಇದ್ದ ಜನರಿಗೆ ನಿನ್ನೆ ಸುರಿದ ಗಾಳಿಯಿಂದ ಆದ ಹಾನಿಯಿಂದ ಕಂಗೆಟ್ಟಿದ್ದು. ಮಳೆ ಬಂದರೂ ಕಷ್ಟ ಬರದೇ ಇದ್ದರೂ ಕಷ್ಟ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿರೋದಂತೂ ನಿಜ.

Exit mobile version