ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ: ಇಲ್ಲಿದೆ ವಿವರ

ವಾರಾಂತ್ಯದಲ್ಲಿ ಬೆಂಗಳೂರಿನ ಹಲವೆಡೆ ಕರೆಂಟ್ ಇರಲ್ಲ!

0 (17)

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಶನಿವಾರ (ಸಪ್ಟೆಂಬರ್ 13) ಮತ್ತು ಭಾನುವಾರ (ಸಪ್ಟೆಂಬರ್ 14) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಯಾವ್ಯಾವ ಪ್ರದೇಶದಲ್ಲಿ ನಾಳೆ ವಿದ್ಯುತ್ ವ್ಯತ್ಯಯ?

ಕೆಪಿಟಿಸಿಎಲ್‌ನ 220/66/11 ಕೆವಿ ಹೆಚ್.ಎ.ಎಲ್ ಉಪಕೇಂದ್ರ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿಯಿಂದಾಗಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆವರೆಗೆ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ:

ಭಾನುವಾರ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಾವುವು?

ಕೆಪಿಟಿಸಿಎಲ್‌ನ 220/66/11 ಕೆವಿ ಎಸ್‌ಆರ್‌ಎಸ್ ಪೀಣ್ಯ ಉಪಕೇಂದ್ರ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿಯಿಂದಾಗಿ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ:

ವಿದ್ಯುತ್ ವ್ಯತ್ಯಯ ವಿವರಗಳ ಕೋಷ್ಟಕ:

ದಿನಾಂಕ

ಸಮಯ

ಉಪಕೇಂದ್ರ

ಬಾಧಿತ ಪ್ರದೇಶಗಳು

13.09.2025 (ಶನಿವಾರ)

ಬೆಳಗ್ಗೆ 10:00 – ಸಂಜೆ 4:00

220/66/11 ಕೆವಿ ಹೆಚ್.ಎ.ಎಲ್

ಇಸ್ರೋ, ಬಾಗ್ಮನೆ ಟೆಕ್ ಪಾರ್ಕ್, ಇಂದಿರಾನಗರ, ಜೀವನ್ ಭೀಮನಗರ, ಮಾರತ್ತಹಳ್ಳಿ, ದೊಡ್ಡನೆಕುಂಡಿ ಇತ್ಯಾದಿ

14.09.2025 (ಭಾನುವಾರ)

ಬೆಳಗ್ಗೆ 10:00 – ಸಂಜೆ 5:00

220/66/11 ಕೆವಿ ಎಸ್‌ಆರ್‌ಎಸ್ ಪೀಣ್ಯ

ಪೀಣ್ಯ ಗ್ರಾಮ, ಎಸ್‌ಆರ್‌ಎಸ್ ರಸ್ತೆ, ರಾಜಗೋಪಾಲ ನಗರ, ವೈಷ್ಣವಿ ಮಾಲ್, ಕಾವೇರಿ ಮಾಲ್ ಇತ್ಯಾದಿ

Exit mobile version