ಮತ್ತಷ್ಟು ದುಬಾರಿಯಾಗ್ತಿದೆ ನಮ್ಮ ಮೆಟ್ರೋ ಪ್ರಯಾಣ..!

BeFunky collage 2026 01 17T170344.989

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ಆರ್ಥಿಕ ಭಾರ. ಬೆಂಗಳೂರು ಮೆಟ್ರೋ ರೈಲು ನಿಗಮ ಮತ್ತಷ್ಟು ದರ ಏರಿಕೆಗೆ ಮುಂದಾಗಿದೆ. ದರ ನಿಗದಿ ಸಮಿತಿ ಶಿಫಾರಸಿನಂತೆ, ಫೆಬ್ರವರಿ 2026ರಿಂದ ಪ್ರತಿ ವರ್ಷ ಶೇಕಡಾ 5ರಷ್ಟು ದರ ಹೆಚ್ಚಳ ಮಾಡುವ ಅವಕಾಶವಿದೆ. ಇದು 2025ರ ಫೆಬ್ರವರಿಯಲ್ಲಿ ಜಾರಿಗೆ ಬಂದ ಭಾರಿ ದರ ಏರಿಕೆ (ಶೇ.71ರವರೆಗೆ) ನಂತರದ ಮೊದಲ ವಾರ್ಷಿಕ ಪರಿಷ್ಕರಣೆಯಾಗಲಿದೆ.

ಪ್ರತಿದಿನ ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ನಮ್ಮ ಮೆಟ್ರೋ ಬಳಕೆ ಮಾಡುತ್ತಿದ್ದಾರೆ. ನಿರ್ವಹಣಾ ವೆಚ್ಚ, ವಿದ್ಯುತ್ ದರ ಏರಿಕೆ, ಸಾಲ ಮರುಪಾವತಿ ಮತ್ತು ಆರ್ಥಿಕ ಸ್ಥಿರತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು BMRCL ಹೇಳಿದೆ. ಆದರೆ ಪ್ರಯಾಣಿಕರು ಇದನ್ನು “ಜೇಬಿಗೆ ಕತ್ತರಿ” ಎಂದು ಟೀಕಿಸುತ್ತಿದ್ದಾರೆ. ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋ ಇನ್ನಷ್ಟು ದುಬಾರಿಯಾಗುವುದರಿಂದ ಸಾಮಾನ್ಯರಿಗೆ ಸಾರಿಗೆ ಅನುಕೂಲ ಕಡಿಮೆಯಾಗುವ ಆತಂಕ ವ್ಯಕ್ತವಾಗಿದೆ.

ದರ ಏರಿಕೆ ಇತಿಹಾಸ ಸಂಕ್ಷಿಪ್ತವಾಗಿ:

ಪ್ರಸ್ತುತ ದರ ಸ್ಲ್ಯಾಬ್ (2025 ಏರಿಕೆ ನಂತರದ್ದು – ಸಾಮಾನ್ಯವಾಗಿ):

ದೂರ                         ದರ
0-3 ಕಿ.ಮೀ                 ₹10
2-4 ಕಿ.ಮೀ                 ₹20
4-6 ಕಿ.ಮೀ                 ₹30
6-8 ಕಿ.ಮೀ                 ₹40
8-10 ಕಿ.ಮೀ               ₹50
10-12 ಕಿ.ಮೀ             ₹60
15-20 ಕಿ.ಮೀ             ₹70
20-25 ಕಿ.ಮೀ             ₹80
25 ಕಿ.ಮೀ ಮೇಲ್ಪಟ್ಟು- ₹90

ಶೇ.5 ಏರಿಕೆಯ ನಂತರ ದರಗಳು ಸ್ವಲ್ಪ ಬದಲಾಗಬಹುದು, ಆದರೆ ಗರಿಷ್ಠ ₹90-95ರವರೆಗೆ ಏರಬಹುದು.

ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದರ ಏರಿಕೆ ವಿರುದ್ಧ ಅಭಿಯಾನಗಳು ಆರಂಭವಾಗಿವೆ. BMRCL ಇನ್ನೂ ಅಂತಿಮ ಅನುಮೋದನೆ ನೀಡದಿದ್ದರೂ, FFC ಶಿಫಾರಸು ಕಡ್ಡಾಯವಾಗಿರುವುದರಿಂದ ಏರಿಕೆ ಖಚಿತವೆಂದು ವರದಿಗಳಿವೆ.

Exit mobile version