ಬೆಂಗಳೂರು ಮಾಂಸ ಪ್ರಿಯರ ಗಮನಕ್ಕೆ: ಮೇ 1 ರಂದು ನಗರಾದ್ಯಂತ ಮಾಂಸ ಮಾರಾಟ ನಿಷೇಧ!

BeFunky collage (6)

ರಾಜ್ಯ ರಾಜಧಾನಿ ಬೆಂಗಳೂರಿನ ಮಾಂಸ ಪ್ರಿಯರಿಗೆ ಹಾಗೂ ವ್ಯಾಪಾರಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಮೇ 1 ರಂದು (ಶುಕ್ರವಾರ) ‘ಬುದ್ಧ ಪೂರ್ಣಿಮೆ’ ಆಚರಿಸಲಾಗುತ್ತಿದ್ದು, ಈ ವಿಶೇಷ ದಿನದಂದು ನಗರದಾದ್ಯಂತ ಮಾಂಸ ಮಾರಾಟ ಮತ್ತು ಪ್ರಾಣಿವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆದೇಶ ಹೊರಡಿಸಿದೆ.

ಅಹಿಂಸೆಯ ದಿನಕ್ಕೆ ಗೌರವ

ಅಹಿಂಸೆಯ ಸಂದೇಶವನ್ನು ಸಾರಿದ ಭಗವಾನ್ ಗೌತಮ ಬುದ್ಧರ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಗೌರವಾರ್ಥವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಪಾಲನಾ ವಿಭಾಗದ ಉಪ ನಿರ್ದೇಶಕರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.

ಆದೇಶದ ಪ್ರಮುಖಾಂಶಗಳು:
ಉಲ್ಲಂಘಿಸಿದರೆ ಕಠಿಣ ಕ್ರಮ :

ಸಾರ್ವಜನಿಕರು ಮತ್ತು ಮಾಂಸ ವ್ಯಾಪಾರಿಗಳು ಸರ್ಕಾರದ ಈ ಆದೇಶವನ್ನು ಪಾಲಿಸಬೇಕು ಎಂದು ಪ್ರಾಧಿಕಾರ ಮನವಿ ಮಾಡಿದೆ. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ಮಾಂಸ ಮಾರಾಟ ಅಥವಾ ಪ್ರಾಣಿವಧೆ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಪ್ರತಿ ವರ್ಷ ಪ್ರಮುಖ ಹಬ್ಬಗಳು ಮತ್ತು ಮಹಾಪುರುಷರ ಜಯಂತಿಗಳಂದು ಇಂತಹ ನಿಷೇಧವನ್ನು ಜಾರಿಗೆ ತರುವುದು ವಾಡಿಕೆಯಾಗಿದ್ದು, ಈ ವರ್ಷದ ಮೊದಲ ಪ್ರಮುಖ ಮಾಂಸ ನಿಷೇಧ ದಿನವಾಗಿ ಮೇ 1 ಗುರುತಿಸಿಕೊಂಡಿದೆ.

Exit mobile version