ಜೆಪ್ಪೋ ಆ್ಯಪ್ ರಿಫಂಡ್ ಹೆಸರಲ್ಲಿ ಮಹಿಳೆಗೆ 2ಲಕ್ಷ ರೂ. ಆನ್‌ಲೈನ್ ವಂಚನೆ

Web 2025 05 16t154418.557

ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌‌‌‌ನಲ್ಲಿರುವ ಐಶಾರಾಮಿ ಗ್ಲೋಬಲ್ ಅಪಾರ್ಟ್ ಮೆಂಟ್‌‌‌‌‌ನಲ್ಲಿ ತರಕಾರಿ ಆರ್ಡರ್ ಮಾಡಿದ್ರು,ತರಕಾರಿ ಕಳಪೆ ಇದ್ದದ್ದನ್ನ ನೋಡಿದ ಬಳಿಕ ವಾಪಸ್ ಮಾಡಲು ಯತ್ನಿಸಿದ್ದ ಮಹಿಳೆ ಆನ್‌ಲೈನ್ ವಂಚಕರ ಬಲೆಗೆ ಬಿದ್ದು 2ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

‘ಶ್ರೀ ಲಕ್ಷ್ಮೀ’ ಎಂಬ ಮಹಿಳೆ ಜೆಪ್ಪೋ ಆ್ಯಪ್‌ನ ಮೂಲಕ 403 ರೂಪಾಯಿಗೆ ತರಕಾರಿ ಆರ್ಡರ್ ಮಾಡಿ, ಗೂಗಲ್ ಪೇ ಮುಖಾಂತರ ಹಣ ಪಾವತಿ ಮಾಡಿದ್ದರು. ಮನೆಗೆ ಬಂದ ತರಕಾರಿಗಳಲ್ಲಿ ಕೆಲವು ಕೆಟ್ಟ ಸ್ಥಿತಿಯಲ್ಲಿ ಇದ್ದದ್ದರಿಂದ ವಾಪಸ್ ಮಾಡಬೇಕೆಂದು ಡೆಲಿವರಿ ಹುಡುಗನಿಗೆ ಕರೆ ಮಾಡಿದಾಗ, “ನಾನು ವಾಪಸ್ ತೆಗೆದುಕೊಳ್ಳಲ್ಲ, ಕಸ್ಟಮರ್ ಕೇರ್ ನಂಬರ್‌‌‌ಗೆ ಸಂಪರ್ಕಿಸಿ” ಎಂದು ತಿಳಿಸಿದ್ದನು.

ಅಂತೆಯೇ ಶ್ರೀ ಲಕ್ಷ್ಮೀ ಗೂಗಲ್‌ನಲ್ಲಿ ಜೆಪ್ಪೋ ಕಸ್ಟಮರ್ ಕೇರ್ ನಂಬರ್ ಎಂದು ಹುಡುಕಿದಾಗ, 8035322648 ಎಂಬ ನಂಬರ್ ಸಿಕ್ಕಿತು. ಸಂಪರ್ಕಿಸಿದಾಗ ಮತ್ತಷ್ಟು ನಂಬರ್‌ಗಳಾದ 8515949855 ಹಾಗೂ 9877545613 ನೀಡಿದರು. ಸಂಪರ್ಕಿಸಿದ ವಂಚಕರು “ನಿಮಗೆ ಗೂಗಲ್ ಪೇ ಮೂಲಕ ಹಣ ರಿಫಂಡ್ ಮಾಡುತ್ತೇವೆ” ಎಂದು ನಂಬಿಸಿ, ಮೊಬೈಲ್ ಹಾಗೂ ಖಾತೆ ವಿವರಗಳನ್ನು ಪಡೆದರು.

ಇದರ ನಂತರ, ಫೆಡರಲ್ ಬ್ಯಾಂಕ್‌ನ 15820100072903 ಸಂಖ್ಯೆಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 2ಲಕ್ಷ ರೂಪಾಯಿ ಕಳೆದುಹೋಗಿರುವುದು ಮೆಸೆಜ್ ಮೂಲಕ ತಿಳಿದುಬಂದಿತು.

ಶ್ರೀ ಲಕ್ಷ್ಮೀ ಅವರು ಕೂಡಲೇ 1930ಗೆ ಕರೆ ಮಾಡಿ ವಂಚನೆ ವರದಿ ಮಾಡಿದ್ದಾರೆ. ಅಕ್ಸಾಲೆಡ್ಡೆಂಟ್ ನಂಬರ್ 31605250056733 ಪಡೆದಿದ್ದು, ಫೆಡರಲ್ ಬ್ಯಾಂಕ್‍ಗೂ ಮಾಹಿತಿ ನೀಡಲಾಗಿದೆ.

ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಇನ್ನೂ ಜನತೆ ಗೂಗಲ್‌ನಲ್ಲಿ ಕಂಡ ಕಂಡ ನಂಬರ್‌ಗಳೊಂದಿಗೆ ವ್ಯಾವಹಾರ ಮಾಡದೆ ಸರಕಾರಿ ಅಥವಾ ಆ್ಯಪ್‌ನ ಅಧಿಕೃತ ಸಂಪರ್ಕ ಮೂಲಗಳನ್ನೇ ಬಳಸಬೇಕು ಎಂಬ ಎಚ್ಚರಿಕೆಯನ್ನು ಪೀಣ್ಯಾ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.
ಈ ವಂಚನೆ ಪ್ರಕರಣ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
Exit mobile version