ಬೆಂಗಳೂರು -ಪುಣೆಗೆ ಪ್ರಯಾಣಿಸಲು ಆಗಮಿಸಲಿದೆ ವಂದೇ ಭಾರತ್‌ ಸ್ಲೀಪರ್‌

ವಂದೇ ಭಾರತ್‌ ರೈಲಿನಲ್ಲಿ ಇನ್ಮುಂದೆ ಪುಣೆಗೆ ಜಾಲಿ ರೈಡ್‌..!

1751337448 Howrah Puri Vande Bharat Express standing at Bhadrak 2025 05 31f29f5b5498ef83f3da4fffeec62c3e

ಬೆಂಗಳೂರು: ಬೆಂಗಳೂರಿಂದ ಪುಣೆಗೆ ಹೋಗಲು 18 ರಿಂದ 19 ಗಂಟೆಗಳನ್ನು ತೆಗೆದುಕೊಳ್ಳಲಾಗುತ್ತಿತ್ತು ಆದರೆ ಇನ್ನುಮುಂದೆ ಆ ಅವಧಿ 13 ಗಂಟೆಗೆ ಇಳಿಯಲಿದೆ. ಅಂದರೆ ಇನ್ನುಮುಂದೆ ಬೆಂಗಳೂರಿಗೆ ಬಂದಿಳಿಯಲಿದೆ ವಂದೆ ಭಾರತ್‌ ಸ್ಲೀಪರ್‌ ರೈಲು. ಅರಾಮವಾಗಿ ಮಲಗಿಕೊಂಡು ಬೆಂಗಳೂರಿನಿಂದ ಪುಣೆಗೆ ಪ್ರಯಾಣ ಬೆಳೆಸಬಹುದಾಗಿದೆ. ಈ ಮಹತ್ವಾಕಾಂಕ್ಷೆ ಯೋಜನೆಗೆ ಕೇಂದ್ರದಿಂದ ಅನುಮೋದನೆ ದೊರಕಿದ್ದು ಡಿಸೆಂಬರ್‌ 2026 ರಿಂದ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂಬುದು ತಿಳಿದುವಬಂದಿದೆ.

ಈ ಪ್ರಯಾಣ ಆರಾಮದಾಯಕವಾಗಿರಲಿದ್ದು ಸುಲಭವಾಗಿ ಬೆಂಗಳೂರಿನಿಂದ ಪುಣೆಗೆ ತಲುಪಬಹುದಾಗಿದೆ. ಟಿಕೆಟ್‌ ದರ ಸುಮಾರು 2,500 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇದು ಹಲವು ದಿನಗಳ ಕನಸಾಗಿತ್ತು ಆ ಕನಸು ಈಗ ಪೂರ್ಣಗೊಂಡಿದೆ.

ಬೆಂಗಳೂರು ಮತ್ತು ಪುಣೆ ನಡುವಿನ ಸಂಪರ್ಕ ಕೊಂಡಿ ಇನ್ನಷ್ಟು ವೇಗವಾಗುವ ಸಾಧ್ಯತೆ ಇದೆ. ಇದರ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಏಪ್ರಿಲ್‌ 05,2026 ರಂದು ಈ ಮಾರ್ಗದಲ್ಲಿ ಸಂಚರಿಸಲು ಅನುಮೋದನೆ ನೀಡಿದ್ದು ಇದು  ದೇಶದ ಎರಡನೇ ವಂದೇ ಭಾರತ್‌ ಸೇವೆಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತವಾಗಿ ಬೆಂಗಳೂರು ಮತ್ತು ಪುಣೆ ನಡುವೆ ಸಂಚರಿಸುವ ಉದ್ಯನ್‌ ಎಕ್ಸಪ್ರೆಸ್‌ 18 ಗಂಟೆ ಮತ್ತು ಕೊಯಮತ್ತೂರ್‌ ಎಕ್ಸ್‌ಪ್ರೆಸ್‌ ಸುಮಾರು 19 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತಿದೆ. ಆದರೆ ಈಗ ಹೊಸ ವಂದೇ ಭಾರತ್‌ ಸ್ಲೀಪರ್‌ ರೈಲು ಈ ಸಮಯವನ್ನು 13 ಗಂಟೆಗೆ ಇಳಿಸಲಿದೆ.

ಇದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್ (CSMT)ನಿಂದ ಹೊರಟು ಪುಣೆ ಸೊಲ್ಲಾಪುರ ಮತ್ತು ವಾಡಿ ಮೂಲಕ ಬೆಂಗಳೂರನ್ನು ತಲುಪಲಿದ್ದು, ದೌಂಡ್‌ – ವಾಡಿ ಮತ್ತು ವಾಡಿ –ಗುಂತಕಲ್‌ ನಡುವಿನ ರೈಲ್ವೆ ಹಳಿಗಳನ್ನು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲು ಅನುವಾಗುವಂತೆ ಹೊಂದಿಸಲಾಗಿದೆ. ಇದರಿಂದಾಗಿ ರೈಲು ಅತೀ ವೇಗವಾಗಿ ಗುರಿ ತಲುಪಲು ಸಾಧ್ಯವಾಗಲಿದೆ.

ವೇಳಾಪಟ್ಟಿ ಮತ್ತು ಸೌಲಭ್ಯಗಳು:

Exit mobile version