ಬೆಂಗಳೂರಿನ ನಿವಾಸಿಗಳು ಇತ್ತೀಚೆಗೆ ಮೆಟ್ರೋ ಮತ್ತು ಬಸ್ ಟಿಕೆಟ್ ದರ ಏರಿಕೆಯಿಂದಾಗಿ ಆರ್ಥಿಕ ಒತ್ತಡದಲ್ಲಿದ್ದಾರೆ. ಇದರ ನಡುವೆ, ಏಪ್ರಿಲ್ 2025ರಿಂದ ಮನೆ-ಮನೆಯಿಂದ ತ್ಯಾಜ್ಯ ಕಸ ಸಂಗ್ರಹಿಸುವುದಕ್ಕೆ ಶುಲ್ಕ ವಸೂಲಿ ಜಾರಿಗೊಳಿಸಲು ನಿರ್ಧರಿಸಿದೆ. ಸರ್ಕಾರದ ನಿರ್ಧಾರದಿಂದ ಬೆಂಗಳೂರಿನವರಿಗೆ ಇನ್ನೂ ಹೆಚ್ಚಿನ ಹೊರೆಯನ್ನು ತಂದಿದೆ. ಈ ಹೊಸ ಶುಲ್ಕವನ್ನು ಆಸ್ತಿ ತೆರಿಗೆಗೆ ಸೇರಿಸಿ ಸಂಗ್ರಹಿಸಲಾಗುವುದು. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್) ಮುಂದಾಳತ್ವದಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
5 ವರ್ಷಗಳ ಚರ್ಚೆ :
ಕಳೆದ ಐದು ವರ್ಷಗಳಿಂದ ನಗರದಲ್ಲಿ ಘನತ್ಯಾಜ್ಯ ಸಂಗ್ರಹಕ್ಕೆ ಸೇವಾ ಶುಲ್ಕ ವಿಧಿಸುವುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಆದರೆ, ಸಾರ್ವಜನಿಕ ವಿರೋಧದಿಂದಾಗಿ ಇದನ್ನು ಮುಂದೂಡಲಾಗಿತ್ತು. ಇತ್ತೀಚಿಗೆ ನಗರದ ಕಸ ವಿಲೇವಾರಿ ಜವಾಬ್ದಾರಿ ಯನ್ನು ಹೊತ್ತುಕೊಂಡ ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್) ಮೂಲಕ ಶತಾಯಗತಾಯ ಸೇವಾ ಶುಲ್ಕ ವಸೂಲಿಗೆ ಮುಂದಾಗಿದ್ದು, ಕಳೆದ ನವೆಂಬೆರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆ ಪ್ರಸ್ತಾವನೆಗೆ ಕಳೆದ ಸೋಮವಾರ ರಾಜ್ಯ ಸರ್ಕಾರ ಅನುಮೋದನೆ ನೀಡಿ, ಏಪ್ರಿಲ್‌ನಿಂದ ಜಾರಿಗೊಳಿಸುವಂತೆ ನಿರ್ದೇಶಿಸಿದೆ. ಈ ಹಿಂದೆ ವಿದ್ಯುತ್‌ಬಿಲ್‌ನೊಂದಿಗೆ ಘನತ್ಯಾಜ್ಯ ಸೇವಾಶುಲ್ಕ ಸಂಗ್ರ ಹಿಸುವ ಚರ್ಚೆಗಳು ನಡೆಸಲಾಗಿತ್ತು. ಆದರೆ, ಗೃಹ ಜ್ಯೋತಿ ಯೋಜನೆಯಿಂದ ಬಹುತೇಕರು ವಿದ್ಯುತ್ ಬಿಲ್ ಪಾವತಿಸುವ ಪ್ರಮೇಯವೇ ಇಲ್ಲ. ಹೀಗಾಗಿ, ಆಸ್ತಿ ತೆರಿಗೆ ಜತೆ ಸೇವಾ ಶುಲ್ಕವನ್ನು ಸಂಗ್ರಹಿಸುವುದಕ್ಕೆ ತೀರ್ಮಾನಿಸಲಾಗಿದೆ. ಸಂಗ್ರಹವಾಗುವ ಸೇವಾ ಶುಲ್ಕವನ್ನು ಬಿಬಿಎಂಪಿಯು, ಬಿಎಸ್‌ಡಬ್ಲ್ಯುಎಂಎಲ್‌ಗೆ ವರ್ಗ ಮಾಡುವುದಕ್ಕೆ ಯೋಜಿಸಲಾಗಿದೆ.
800 ಕೋಟಿ ಸಂಗ್ರಹ?
ಘನತ್ಯಾಜ್ಯ ನಿಯಮದಲ್ಲಿ ವಸತಿ ಕಟ್ಟಡದಿಂದ ಮಾಸಿಕ ಗರಿಷ್ಠ ₹400 ವರೆಗೆ ವಸೂಲಿಗೆ ತೀರ್ಮಾ ನಿಸಲಾಗಿದೆ. ಇದರಿಂದ ಬಿಎಸ್‌ಡಬ್ಲ್ಯು ಎಂಎಲ್‌ಗೆ ವಾರ್ಷಿಕ ಸುಮಾರು 600 ರಿಂದ ₹800 ಕೋಟಿವರೆಗೆ ಸಂಗ್ರಹವಾ ಗಲಿದೆ. ಈ ಮೊತ್ತದಲ್ಲಿ ನಗರದ ಕಸ ವಿಲೇ ವಾರಿ ನಿರ್ವಹಣೆ ಮಾಡಬಹುದು. ಸರ್ಕಾ ರ ಮತ್ತು ಬಿಬಿಎಂಪಿಯ ಅನುದಾನ ಪಡೆ ಯುವ ಅಗತ್ಯ ಇರುವುದಿಲ್ಲ ಎಂಬುದು ಕಂಪನಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಶುಲ್ಕದ ಹೊರೆ ಮನೆ ಮಾಲೀಕರಿಗೆ:
ಒಂದು ಕಟ್ಟಡದಲ್ಲಿ 10 ಮನೆ ಇದ್ದರೆ, ಪ್ರತಿ ಮನೆಗೆ ಮಾಸಿಕವಾಗಿ ಸೇವಾ ಶುಲ್ಕ ವಿಧಿಸಲಾಗುವುದು. ಈ ಸೇವಾ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸೇರ್ಪಡೆಗೊಳಿಸಲಾ ಗುವುದು. ಮನೆ ಅಥವಾ ಕಟ್ಟಡ ಮಾಲೀಕ ಈಸೇವಾಶುಲ್ಕವನ್ನು ಪಾವತಿಮಾಡಬೇಕು. ನಗರದಲ್ಲಿ ಎಷ್ಟು ಕಟ್ಟಡ ಇವೆ. ಅದರಲ್ಲಿ ಎಷ್ಟು ಮನೆಗಳಿವೆ ಎಂಬುದರ ಬಗ್ಗೆ ಘನ ತ್ಯಾಜ್ಯ ನಿರ್ವಹಣಾ ಕಂಪನಿ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸುವುದಕ್ಕೆ ನಿರ್ಧರಿಸಿದೆ.
ನಂ |
ವಸತಿ ಕಟ್ಟಡಗಳ ಮಾಸಿಕ ಶುಲ್ಕದ ವಿವರ |
ರೂ |
1 | 600 ಚದರಡಿವರೆಗೆ | 10 |
2 | 601 ರಿಂದ 1000 ಚದರಡಿ | 50 |
3 | 1001 ರಿಂದ 2000 ಚದರಡಿ | 100 |
4 | 2001 ರಿಂದ 3000 | 150 |
5 | 3001 ರಿಂದ 4000 | 200 |
6 | 4000 ಚದರಡಿಗಿಂತ ಮೇಲೆ | 400 |
7 | ನಿವೇಶನ ಪ್ರತಿ ಚ.ಅಡಿಗೆ | 0.20 |
ನಂ |
ವಾಣಿಜ್ಯ ಕಟ್ಟಡಗಳು, ಸಂಸ್ಥೆಗಳು |
ಮಾಸಿಕ ಶುಲ್ಕ |
1 | ನಿತ್ಯ 5 ಕೆ.ಜಿ.ವರೆಗೆ ಉತ್ಪಾದನೆಗೆ | ₹500 |
2 | ನಿತ್ಯ 10 ಕೆ.ಜಿ.ವರೆಗೆ ಉತ್ಪಾದನೆಗೆ | ₹1,400 |
3 | ನಿತ್ಯ 25 ಕೆ.ಜಿ.ವರೆಗೆ ಉತ್ಪಾದನೆ | ₹3,500 |
4 | ನಿತ್ಯ 50 ಕೆ.ಜಿ.ವರೆಗೆ ಉತ್ಪಾದನೆ | ₹7,000 |
5 | ನಿತ್ಯ 100 ಕೆ.ಜಿ.ವರೆಗೆ ಉತ್ಪಾದನೆ | ₹14,000 |