IPL ಹಿನ್ನೆಲೆ: ಕರ್ತವ್ಯದಲ್ಲಿದ್ದಾಗ ಪಂದ್ಯ ವೀಕ್ಷಣೆ ಮಾಡಿದ್ರೆ ಪೊಲೀಸರ ವಿರುದ್ದ ಶಿಸ್ತು ಕ್ರಮ-ಕಮಿಷನರ್ ಖಡಕ್ ಸೂಚನೆ

Untitled design (3)

ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕಾಯುವಿಕೆಗೆ ತೆರೆಬೀಳುವ ಸಮಯ ಹತ್ತಿರವಾಗಿದೆ. ನಾಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇಡೀ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ.

2,000 ಪೊಲೀಸರ ನಿಯೋಜನೆ 

ಹಿಂದಿನ ಕಹಿ ಘಟನೆಗಳು ಹಾಗೂ ಕ್ರೀಡಾಂಗಣದ ಬಳಿ ಸಂಭವಿಸಬಹುದಾದ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಸುಮಾರು 2,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದ ತಂಡಗಳು, ಸಿವಿಲ್ ಡಿಫೆನ್ಸ್, ಗರುಡಾ ಫೋರ್ಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡಿದ್ದಾರೆ. ಕ್ರೀಡಾಂಗಣದ ಎಲ್ಲಾ ಗೇಟ್‌ಗಳ ಸಂಪೂರ್ಣ ಜವಾಬ್ದಾರಿಯನ್ನು ಪೊಲೀಸರೇ ವಹಿಸಿಕೊಂಡಿದ್ದು, ಗೇಟ್‌ಗಳ ಕೀಗಳು ಸಹ ಅವರ ಸುಪರ್ದಿಯಲ್ಲೇ ಇರಲಿವೆ.

ತಂತ್ರಜ್ಞಾನದ ಬಳಕೆಯೊಂದಿಗೆ ಈ ಬಾರಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಕ್ರೀಡಾಂಗಣದ ಒಳಗಡೆ ಮತ್ತು ಹೊರಗಡೆ ಇರುವ ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾಗಳ ಲಿಂಕ್ ಅನ್ನು ಕಮಾಂಡ್ ಸೆಂಟರ್‌ಗೆ ನೀಡಲಾಗಿದೆ. ವಿಶೇಷವೆಂದರೆ, ನಗರ ಪೊಲೀಸ್ ಆಯುಕ್ತರು ತಮ್ಮ ಕಚೇರಿಯಿಂದಲೇ (ಚೇಂಬರ್) ಇಡೀ ಸ್ಟೇಡಿಯಂನ ಚಲನವಲನಗಳನ್ನು ನೇರವಾಗಿ ವೀಕ್ಷಿಸಲಿದ್ದಾರೆ. ಯಾವುದೇ ಸಣ್ಣ ಲೋಪ ಕಂಡುಬಂದರೂ ಕೂಡಲೇ ಸ್ಥಳದಲ್ಲಿರುವ ಸಿಬ್ಬಂದಿಗೆ ಸೂಚನೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಸಾಮಾನ್ಯವಾಗಿ ಬಂದೋಬಸ್ತ್‌ನಲ್ಲಿರುವ ಪೊಲೀಸರು ಕೆಲಸ ಬಿಟ್ಟು ಪಂದ್ಯ ವೀಕ್ಷಣೆಯಲ್ಲಿ ಮಗ್ನರಾಗುವ ದೂರುಗಳು ಕೇಳಿಬರುತ್ತಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್, ಯಾವುದೇ ಸಿಬ್ಬಂದಿ ಮೈದಾನದತ್ತ ಮುಖ ಮಾಡಿ ಪಂದ್ಯ ನೋಡುವಂತಿಲ್ಲ. ತಮಗೆ ನಿಗದಿಪಡಿಸಿದ ಜಾಗದಲ್ಲಿ ನಿಂತು ಕೇವಲ ಸಾರ್ವಜನಿಕರ ಸುರಕ್ಷತೆಯತ್ತ ಗಮನ ಹರಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕರ್ತವ್ಯದ ವೇಳೆ ಪಂದ್ಯ ನೋಡುತ್ತಾ ಕಾಲಹರಣ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ಸಾರ್ವಜನಿಕರಿಗೆ ಕಿವಿಮಾತು 

ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪೊಲೀಸರು ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ:

Exit mobile version