ಬಸವನಗುಡಿಯಲ್ಲಿ ಬಿಜೆಪಿ ಹವಾ: ತೇಜಸ್ವಿನಿ ಅನಂತಕುಮಾರ್ ಗೆ ಈ ಬಾರಿ ಸಿಗುತ್ತಾ ಟಿಕೆಟ್..?

ಗ್ಯಾರಂಟಿ ನ್ಯೂಸ್ ಮೂಡ್ ಆಫ್ ಕರ್ನಾಟಕ ಮೆಗಾ ಸರ್ವೆ

Untitled design 2025 04 05t221749.055

ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.

ಬೆಂಗಳೂರಿನಲ್ಲಿ ಐತಿಹಾಸಿಕ ಹಿನ್ನಲೆ ಹೊಂದಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರವು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ. ಕಳೆದ 2023ರ ವಿಧಾನಸಭಾ ಫಲಿತಾಂಶದಲ್ಲಿ ಬಿಜೆಪಿಯ ಎಲ್.ಎ ರವಿ ಸುಬ್ರಹ್ಮಣ್ಯ 78,854 (61.47%) ಮತ ಪಡೆದು ಬರೋಬ್ಬರಿ 54,978 ಮತಗಳ ಅಂತರದಿಂದ ಗೆದ್ದು ಬಿಗಿದ್ದರು. ಕಾಂಗ್ರೆಸ್ ನ ಯು ಬಿ ವೆಂಕಟೇಶ್ 23,876 (18.61%), ಜೆಡಿಎಸ್ ನಿಂದ ಸರ್ಧೆ ಮಾಡಿದ್ದ ಅರಮನೆ ಶಂಕರ್ ಜೆಡಿಎಸ್ 19,931 (15.54%) ಮತ ಪಡೆಯಲು ಶಕ್ತರಾಗಿದ್ದಾರೆ.

ADVERTISEMENT
ADVERTISEMENT

ಬಸವನಗುಡಿ ಕ್ಷೇತ್ರದ ಚಿತ್ರಣ..
ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಬಸವನಗುಡಿ ಕ್ಷೇತ್ರದಲ್ಲಿ ಬ್ರಾಹ್ಮಣರದ್ದೇ ಪಾರುಪತ್ಯ ಇದ್ದು, ಬಿಜೆಪಿಗೆ ಮತದಾರರ ಬೆಂಬಲ ಹೆಚ್ಚಿರುವದರಿಂದ ಕಳೆದ ಮೂರು ಬಾರಿ ಬಿಜೆಪಿಗೆ ಗೆಲುವು ಸಾಧಿಸಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ಪ್ರಬಲ ಅಭ್ಯರ್ಥಿ ಕೊರತೆಯೇ ಬಿಜೆಪಿಗೆ ಲಾಭವಾಗಿದೆ. ಶಾಸಕ ರವಿ ಸುಬ್ರಹ್ಮಣ್ಯ ರವರು ತಾವಾಯಿತು ತಮ್ಮ ಕ್ಷೇತ್ರವಾಯಿತು ಎನ್ನೋ ಶಾಸಕರಾಗಿದ್ದು, ಕ್ಷೇತ್ರದ ಅಭಿವೃದ್ಧಿ ಜೊತೆಗೆ ಜಾತಿ ಲೆಕ್ಕಾಚಾರ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.ಜೆಡಿಎಸ್ ನ ಮೈತ್ರಿ ಬಿಜೆಪಿಗೆ ಲಾಭವಾದರೆ.

ಮೂಡ್ ಆಫ್ ಕರ್ನಾಟಕ : ಬಸವನಗುಡಿ ಮೂಡ್ ಹೇಗಿದೆ.?
ಬಿಜೆಪಿಯಲ್ಲಿನ ಬಣ ಬಡಿದಾಟವನ್ನು ಕಾಂಗ್ರೆಸ್ ಗೆ ವರವಾದರೂ ಅಚ್ಚರಿವಿಲ್ಲ. ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೂ ಬಳಸಿಕೊಂಡು ಪ್ರಚಾರ ಮಾಡಿದರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದು. ಬಿಜೆಪಿಯ ಬಣ ಬಡಿದಾಟದಿಂದ ರವಿ ಸುಬ್ರಮಣ್ಯ ಅಂತರ ಕಾಯ್ದುಕೊಂಡಿದ್ದು ಪಕ್ಷದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ರಾಜ್ಯ-ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಹೊಂದಿರುವ ರವಿ ಸುಬ್ರಮಣ್ಯ ಬಸವನಗುಡಿಯಲ್ಲಿ ಬಿಜೆಪಿಯದ್ದೇ ಪ್ರಾಬಲ್ಯವಾಗಿಸಿದ್ದಾರೆ.

ಈ ಕ್ಷೇತ್ರ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಭಾವವೂ ಇದ್ದು,  ಜೆಡಿಎಸ್, ಬಿಜೆಪಿ ಮೈತ್ರಿ ಆದರೆ ಲಾಭ ಬಿಜೆಪಿಗೆ ಲಾಭವಾಗಲಿದೆ. ಗ್ಯಾರಂಟಿ ನ್ಯೂಸ್ ನ ಮೂಡ್ ಆಫ್ ಕರ್ನಾಟಕ ಸರ್ವೆ ಪ್ರಕಾರ ಈಗಲೂ ಬಸವನಗುಡಿ ಕ್ಷೇತ್ರದ ಜನತೆ ಬಿಜೆಪಿಯ ಪರ ಒಲವು ಹೊಂದಿದ್ದು ಯಾರಿಗೆ ಟಿಕೆಟ್ ಸಿಕ್ಕರೂ ಪಕ್ಷದ ಚಿಹ್ನೆಯೇ ನಿರ್ಣಾಯಕ ಪಾತ್ರವಹಿಸುತ್ತೆದೆ.

ಬಸವನಗುಡಿ ಕ್ಷೇತ್ರದ ಆಕಾಂಕ್ಷಿಗಳು ಯಾರು.?
ಬಸವನಗುಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಯು.ಬಿ ವೆಂಕಟೇಶ್, ಎಂ ಬೋರೇಗೌಡ ಹಾಗೂ ಡಾ. ಶಂಕರ್ ಗುಹಾ ದ್ವಾರಕಾನಾಥ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ರವಿ ಸುಬ್ರಹ್ಮಣ್ಯ, ಕೆ.ಎನ್ ಸುಬ್ಬಾರೆಡ್ಡಿ, ಹಾಗೂ ತೇಜಸ್ವಿನಿ ಅನಂತಕುಮಾರ್ ಸರ್ಧೆಗೆ ಸಜ್ಜಾಗಿದ್ದಾರೆ. ಜೆಡಿಎಸ್ ನಿಂದ ಅರಮನೆ ಶಂಕರ್ ಮತ್ತು ಕೆ ಬೋಜೇಗೌಡ ನಡುವೆ ಯಾರಿಗೆ ಟಿಕೆಟ್ ಸಿಗಬಹುದು ಎಂದು ಕಾದುನೋಡಬೇಕಿದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version