ಪ್ರಾಣಿಪ್ರಿಯರ ಜೇಬಿಗೆ ಬಿತ್ತು ಕತ್ತರಿ: ಬನ್ನೇರುಘಟ್ಟ ಜೈವಿಕ ಉದ್ಯಾನ ಟಿಕೆಟ್ ದರ 20% ಏರಿಕೆ

ದರ ಏರಿಕೆ ಆಗಸ್ಟ್ 1ರಿಂದ ಜಾರಿ

Add a heading (85)

ಬೆಂಗಳೂರು: ಬಸ್, ಮೆಟ್ರೋ ಟ್ರೈನ್‌ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ನಡುವೆ, ಪ್ರಾಣಿ ಪ್ರಿಯರಿಗೆ ಕರ್ನಾಟಕ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರವೇಶ ಶುಲ್ಕವನ್ನು 20% ಏರಿಕೆ ಮಾಡಲು ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಪರಿಷ್ಕೃತ ದರ ಆಗಸ್ಟ್ 1, 2025ರಿಂದ ಜಾರಿಗೆ ಬರಲಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ.

ಹೊಸ ಟಿಕೆಟ್ ದರಗಳು:
ದರ ಏರಿಕೆಗೆ ಕಾರಣ:

ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸ್ವಾಯತ್ತ ಸಂಸ್ಥೆಯಾಗಿದ್ದು, ಪ್ರವಾಸಿಗರ ಟಿಕೆಟ್ ಶುಲ್ಕವೇ ಇದರ ಪ್ರಮುಖ ಆದಾಯದ ಮೂಲವಾಗಿದೆ. ಪ್ರಾಣಿಗಳ ಆಹಾರ, ನಿರ್ವಹಣೆ, ಮತ್ತು ಸಿಬ್ಬಂದಿ ವೇತನದ ವೆಚ್ಚಗಳು ಹೆಚ್ಚಿದ್ದರಿಂದ, ಕಳೆದ ಐದು ವರ್ಷಗಳಿಂದ ಯಾವುದೇ ದರ ಏರಿಕೆ ಮಾಡದಿರುವುದನ್ನು ಗಮನಿಸಿ, ಉದ್ಯಾನವನದ ಪ್ರಾಧಿಕಾರವು 50% ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರವು 20% ಏರಿಕೆಗೆ ಮಾತ್ರ ಒಪ್ಪಿಗೆ ನೀಡಿದೆ.

ಪ್ರವಾಸಿಗರ ಪ್ರತಿಕ್ರಿಯೆ:

ಈ ದರ ಏರಿಕೆಗೆ ಪ್ರವಾಸಿಗರಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ದೇಶ-ವಿದೇಶಗಳಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರು, ದಿನನಿತ್ಯದ ಒತ್ತಡದಿಂದ ವಿರಾಮ ಪಡೆಯಲು ಮತ್ತು ಮಕ್ಕಳಿಗೆ ಅಪರೂಪದ ವನ್ಯಜೀವಿಗಳನ್ನು ಪರಿಚಯಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.

ಕೆಲವರು ದರ ಏರಿಕೆಯನ್ನು ವನ್ಯಜೀವಿಗಳ ನಿರ್ವಹಣೆಗೆ ಅಗತ್ಯ ಎಂದು ಬೆಂಬಲಿಸಿದರೆ, ಇನ್ನು ಕೆಲವರು ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದು ಹೆಚ್ಚಿನ ಭಾರವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರು ಹೆಚ್ಚಿನ ದರಕ್ಕೆ ತಕ್ಕಂತೆ ಉತ್ತಮ ಸೌಲಭ್ಯಗಳು ಮತ್ತು ಅಪರೂಪದ ಪ್ರಾಣಿಗಳನ್ನು ಕಾಣುವ ಅವಕಾಶವನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರವು ಉದ್ಯಾನವನದ ನಿರ್ವಹಣೆಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ.

Exit mobile version