ಕುಡಿದ ಮತ್ತಿನಲ್ಲಿ ಗಲಾಟೆ: ಇಬ್ಬರು ಸ್ನೇಹಿತರಿಗೆ ಚಾಕು ಇರಿದು ಆರೋಪಿ ಪರಾರಿ

Befunky collage 2025 05 16t152941.514

ಬೆಂಗಳೂರಿನ ಪೀಣ್ಯಾದ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಕುಡಿತದ ಬಳಿಕ ನಡೆದ ಗಲಾಟೆಯಲ್ಲಿ ಇಬ್ಬರು ಯುವಕರು ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ವಿಮಲ್ (28) ಮತ್ತು ಅನ್ವರಸನ್ (22)ಇಬ್ಬರಿಗೂ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ತೀವ್ರ ಕುಡಿತದ ಹಿನ್ನೆಲೆಯಲ್ಲಿ, ಸ್ನೇಹಿತರ ನಡುವೆ ಮನೆಗೆ ಅಟೋದಲ್ಲಿ ಡ್ರಾಪ್ ಮಾಡಿಸುವ ವಿಷಯದಲ್ಲಿ ಮಾತಿನ ಚಕಮಕಿ ನಡೆದಿದೆ. ಬಳಿಕ, ಮನೆ ಹತ್ತಿರ ಅಟೋದಿಂದ ಇಳಿಯುತ್ತಿದ್ದ ವೇಳೆ ಕಾರ್ತಿಕ್ (25) ಎನ್ನುವ ಆರೋಪಿ, ವಿಮಲ್ (28) ಮತ್ತು ಅನ್ವರಸನ್ (22)ಇವರಿಬ್ಬರ ಮೇಲೆ ಚಾಕು ಹಿಡಿದು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ADVERTISEMENT
ADVERTISEMENT

ಗಾಯಗೊಂಡ ಇಬ್ಬರನ್ನು ಸ್ಥಳೀಯರ ಸಹಾಯದಿಂದ ತಕ್ಷಣವೇ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಾರ್ತಿಕ್ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮದ್ಯಪಾನದಲ್ಲಿ ಮಿತಿ ತಪ್ಪಿದರೆ ಸ್ನೇಹಿತರು ಶತ್ರುಗಳಾಗಬಹುದು. ಸಣ್ಣ ಮಾತು ದೊಡ್ಡ ಅನಾಹುತವನ್ನೇ ತರಬಹುದು. ಈ ಘಟನೆಯು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ, ಮದ್ಯಪಾನ ಮಾಡುವುದು ವೈಯಕ್ತಿಕ ಆಯ್ಕೆ ಆಗಬಹುದು, ಆದರೆ ಅದರಿಂದ ಹೊರಡುವ ಪರಿಣಾಮಗಳು ಅನೇಕರ ಜೀವನವನ್ನೇ ಕೆಡಿಸಬಹುದು. ದಯವಿಟ್ಟು ಜವಾಬ್ದಾರಿಯುತವಾಗಿ ವರ್ತಿಸಿ

ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ

Exit mobile version