ನಗರವನ್ನೇ ಬೆಚ್ಚಿ ಬೀಳಿಸಿದ್ದ ₹7.11 ಕೋಟಿ ನಗದು ದರೋಡೆ ಪ್ರಕರಣದಲ್ಲಿ ಇದೀಗ ದೊಡ್ಡ ಟ್ವಿಸ್ಟ್. ಪ್ರಕರಣದ ಕಿಂಗ್‌ಪಿನ್ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆಕೆ ಪತಿಯ ಕೃತ್ಯದಲ್ಲಿ ತಾನೂ ಭಾಗಿಯಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
“ನಾನೇ ಪೊಲೀಸ್ ಠಾಣೆಗೆ ಬರುಬೇಕು ಅಂತ ಯೋಚಿಸ್ತಾ ಇದ್ದೆ. ನೀವೇ ಬಂದ್ ಬಿಟ್ರಿ” ಎಂದು ಪತ್ನಿ ಪೊಲೀಸರ ಜೊತೆಗೆ ಸಂಯಮದಿಂದಲೇ ಬಂದಿದ್ದಾರೆ ಎನ್ನಲಾಗಿದೆ. ರವಿ ಪತ್ನಿಯಿಂದ ಈಗ ರವಿ ಇರುವ ಸ್ಥಳ, ಹಣ ಉಳಿದ ಭಾಗ ಮತ್ತು ಇತರ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿ ಪಡೆಯಲಾಗುತ್ತಿದೆ.
ಪೊಲೀಸ್ ಕಾನ್‌ಸ್ಟೇಬಲ್‌ನೇ ಮಾಸ್ಟರ್‌ಮೈಂಡ್. ಈ ದರೋಡೆಯ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಗೋವಿಂದಪುರ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಅಣ್ಣಪ್ಪ ಹಾಗೂ ಅವನ ಸ್ನೇಹಿತ, ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ನೌಕರ ಕ್ಸೇವಿಯರ್. ರಾಬರಿ ಪ್ಲ್ಯಾನ್ ಅಣ್ಣಪ್ಪನದ್ದು, ಎಸ್ಕೇಪ್ ಪ್ಲ್ಯಾನ್ ಕ್ಸೇವಿಯರ್‌ನದ್ದು ಆದರೆ ಪ್ಲ್ಯಾನ್ ಕೈಕೊಟ್ಟಿದೆ.
ಇದುವರೆಗೆ ವಸೂಲಿ:
ಆಂಧ್ರಪ್ರದೇಶದಲ್ಲಿ ದರೋಡೆಕೋರರಿಂದ ₹5.30 ಕೋಟಿ ರಿಕವರಿ ಮಾಡಿದ್ದಾರೆ. ಪ್ರಮುಖ ಆರೋಪಿಗಳಾದ ಅಣ್ಣಪ್ಪ ಮತ್ತು ಕ್ಸೇವಿಯರ್ ಬಂಧನ ಮಾಡಿದ್ದಾರೆ. ಉಳಿದ ₹1.81 ಕೋಟಿ ಹಾಗೂ ಕಿಂಗ್‌ಪಿನ್ ರವಿ ಪತ್ತೆಗೆ ಖಾಕಿ ಬಲೆ ಹಾಕಿದ್ದಾರೆ.
ರವಿ ಬೆಂಗಳೂರಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದು, ಲಾಸ್ ಆಗಿ ಕೆಲಸ ಬಿಟ್ಟು ಮನೆಯಲ್ಲಿದ್ದ. ಆಗ ಸ್ಥಳೀಯ ಹುಡುಗರನ್ನು ಸೇರಿಸಿಕೊಂಡು ಈ ದರೋಡೆಗೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.
ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳಾಗಿರೋದು ಇಡೀ ಇಲಾಖೆಗೆ ಮುಖಭಂಗ ತಂದಿದ್ದು, ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.
