ಉಗ್ರ ಸಂಘಟನೆಗಳ ಜೊತೆ ನಂಟು ಆರೋಪ: ಬಳ್ಳಾರಿಯಲ್ಲಿ ಶಂಕಿತ ಉಗ್ರ ಅಬ್ದುಲ್‌ ಸಲಾಂ ಬಂಧನ

BeFunky collage (17)

ಬಳ್ಳಾರಿ ನಗರದಲ್ಲಿ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಶಂಕಿತ ವ್ಯಕ್ತಿಯನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ: ಅಬ್ದುಲ್ ಸಲಾಂ (36), ಕೌಲ್ ಬಜಾರ್ ನಿವಾಸದ, ನಾರದ ಮಿಲ್ ಪ್ರದೇಶ, ಬಳ್ಳಾರಿ.

ಆಂಧ್ರ ಪ್ರದೇಶ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಳ್ಳಾರಿಗೆ ಬಂದು ತೀವ್ರ ಕಾರ್ಯಾಚರಣೆ ನಡೆಸಿ ಅಬ್ದುಲ್ ಸಲಾಂ ಅವರನ್ನು ಬಂಧಿಸಿದ್ದಾರೆ. ಬಂಧನದ ನಂತರ ಅವರ ಮನೆಯಲ್ಲಿ ಪಂಚನಾಮೆ ಮಾಡಲಾಗಿದೆ.

ಉಗ್ರನ ಮೇಲೆ ಆರೋಪ ಏನು ಏನಿದೆ ಎಂದರೆ. ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರವಾದಿ ಚಟುವಟಿಕೆಗಳನ್ನು ಪ್ರಚಾರ ಮಾಡಿದ ಆರೋಪವಿದೆ. ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ಶಂಕೆ ಇದೆ.

ಘಟನೆಯ ಕ್ರಮ: ಮಾರ್ಚ್ 22ರಂದು ವಿಜಯವಾಡ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದ್ದು, ಮಾರ್ಚ್ 23ರಂದು FIR ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಲಾಗಿತ್ತು. ಆಂಧ್ರ ಪೊಲೀಸರು ಬಳ್ಳಾರಿಗೆ ಬಂದು ಅಬ್ದುಲ್ ಸಲಾಂ ಅವರನ್ನು ಬಂಧಿಸಿ ವಿಜಯವಾಡಕ್ಕೆ ಕರೆದೊಯ್ದಿದ್ದಾರೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.

ಪೊಲೀಸರು ಅಬ್ದುಲ್ ಸಲಾಂ ಅವರ ಮನೆಯಲ್ಲಿ ಸಂಪೂರ್ಣ ಪಂಚನಾಮೆ ಮಾಡಿ, ಇತರ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆ ಮುಂದುವರೆದಿದೆ.

ಈ ಬಂಧನವು ಬಳ್ಳಾರಿ ಜಿಲ್ಲೆಯಲ್ಲಿ ಉಗ್ರ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಯು ಎಚ್ಚರಗೊಂಡಿರುವುದನ್ನು ಸೂಚಿಸುತ್ತಿದೆ.

Exit mobile version