ರಾಜ್ಯದಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್

50 ಕೋಟಿಗೂ ಅಧಿಕ ವಂಚನೆ ಆರೋಪ

Siddu stalin kcr (46)

ಬಳ್ಳಾರಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್​ ನಡೆದಿದೆ. ಅಮಾಯಕ ಜನರಿಂದ ಕೋಟಿ ಕೋಟಿ ರೂಪಾಯಿ ಪಡೆದು ಓರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಮನಿ ಡಬ್ಲಿಂಗ್ ಎಂದು ನಂಬಿಸಿ ಜನರನ್ನು ನಂಬಿಸಿ ವಂಚಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹಣ ಕಳೆದುಕೊಂಡ ಜನರು ಕಂಗಾಲಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್ ಪ್ರಕರಣ ಬೆಳಕಿಗೆ ಬಂದಿದ್ದು, ಅಮಾಯಕ ಜನರಿಂದ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿ ಆರೋಪಿ ಪರಾರಿ ಆಗಿರುವಂತಹ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ವಿಶ್ವನಾಥ್​​ ಎಂಬಾತನಿಂದ ಜನರಿಗೆ ಮೋಸ ಮಾಡಲಾಗಿದೆ. ಕಡಿಮೆ ಹಣ ಕೊಟ್ಟವರಿಗೆ ಕಡಿಮೆ ಬಡ್ಡಿ ಮತ್ತು ಹೆಚ್ಚು ಹಣ ಕೊಟ್ಟವರಿಗೆ ಹೆಚ್ಚು ಬಡ್ಡಿ ಎಂದು ನಂಬಿಸಿ ಮೋಸ ಮಾಡಲಾಗಿದೆ. ಅಂದಾಜು 50 ಕೋಟಿಗೂ‌ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಆರೋಪ‌ ಕೇಳಿಬಂದಿದೆ. ಸದ್ಯ ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಹಣ ಕಳೆದುಕೊಂಡ ಜನರು ಒತ್ತಾಯಿಸಿದ್ದಾರೆ.

ಹೌದು ವಾಸವಿ ಸ್ವಗೃಹ ಹೋಮ್ ನೀಡ್ಸ್ ಆ್ಯಂಡ್​ ಕನ್ಸಲ್ಟನ್ಸ್​ ಹೆಸರಲ್ಲಿ ವಿಶ್ವನಾಥ್​ ಜನರ ಬಳಿ‌ ಹಣ ಪಡೆದು ವಂಚನೆ ಮಾಡಿದ್ದಾರೆ. ಮೂರು ವರ್ಷದ ಹಿಂದೆ ವಿಶ್ವನಾಥ ಕಿರಾಣಿ ಅಂಗಡಿ ಹಾಕಿದ್ದರು. ಐದು ಸಾವಿರ ರೂ ಕಿರಾಣಿ ಪಡೆದರೆ ಎರಡು ಸಾವಿರ ರೂ ಮೌಲ್ಯದ ಅಡುಗೆ ಎಣ್ಣೆ ಕೊಡುವುದಾಗಿ ಮೊದಲು ಆಮಿಷ ಒಡ್ಡಿದ್ದರಂತೆ. ಹದಿನೈದು ಸಾವಿರ ರೂ ಕೊಟ್ಟರೆ ತಿಂಗಳ ನಂತರ 20 ಸಾವಿರ ರೂ ಕೊಡುವುದಾಗಿ ಮತ್ತು ಲಕ್ಷ ಲಕ್ಷ ಹಣ ಕೊಟ್ಟವರಿಗೆ 40% ಬಡ್ಡಿ ಕೊಡುವುದಾಗಿ ನಂಬಿಸಿ ಮೋಸ ಮಾಡದ್ದಾನೆ.

ಸದ್ಯ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಮನೆಗೆ ಬೀಗ ಹಾಕಿ ವಿಶ್ವನಾಥ್ ಪರಾರಿಯಾಗಿದ್ದಾನೆ. ನಮ್ಮ‌ಹಣಕ್ಕೆ ಯಾರು ಗ್ಯಾರಂಟಿ ಅಂತಾ ಜನರು ಅಳಲು ತೊಡಿಕೊಂಡಿದ್ದು, ಬ್ರೂಸ್ ಪೇಟೆ ಪೊಲೀಸ್​ ಠಾಣೆ ಮುಂದೆ ಜಮಾಯಿಸಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version