ರ‍್ಯಾಗಿಂಗ್‌ ಕಾಟಕ್ಕೆ ಡೆ*ತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹ*ತ್ಯೆ!

0 (63)

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಅಂಜಲಿ, ಸಹಪಾಠಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ಕಾರಣರಾದ ಮೂವರ ಹೆಸರನ್ನು ಉಲ್ಲೇಖಿಸಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು, ತನಿಖೆ ಆರಂಭವಾಗಿದೆ.

ಗುಳೇದಗುಡ್ಡದ ನಿವಾಸಿಯಾಗಿರುವ ಅಂಜಲಿ(21), ಬಿಎ(BA) ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಳೇದಗುಡ್ಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡೆತ್ ನೋಟ್‌ನಲ್ಲಿ ಅಂಜಲಿ, “ನನ್ನ ಸಾವಿಗೆ ಕಾರಣವಾದ ವರ್ಷಾ, ಪ್ರದೀಪ್ ಮತ್ತು ಇತರ ಸ್ನೇಹಿತರು ನನ್ನನ್ನು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಇವರು ನನ್ನ ಬದುಕಿನಲ್ಲಿ ತೊಂದರೆಯನ್ನುಂಟುಮಾಡಿದ್ದಾರೆ. ಇವರನ್ನು ಕಾನೂನಿನ ಕಟ್ಟಳೆಯಿಂದ ಶಿಕ್ಷಿಸಬೇಕು,” ಎಂದು ಬರೆದಿದ್ದಾರೆ.

ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್ ನೋಟ್‌ನಲ್ಲಿ ಉಲ್ಲೇಖಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ನಡೆಯುತ್ತಿದೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿದ್ದರೆ, ಕೇಂದ್ರ ಸರ್ಕಾರದ ಟೆಲಿ ಮಾನಸ್ ಸೇವೆಯನ್ನು ಸಂಪರ್ಕಿಸಿ. ಟೋಲ್-ಫ್ರೀ ಸಂಖ್ಯೆಗಳಾದ 14416 ಅಥವಾ 18008914416ಗೆ ಕರೆ ಮಾಡಿ.

Exit mobile version