SSMB29 ಲುಕ್ ಔಟ್.. ಭಜರಂಗಿ ಭಾಯಿಜಾನ್ ಕಾಪಿ..!

ಖ್ಯಾತ ರಾಜಮೌಳಿಗೂ ತಪ್ಪಲಿಲ್ಲ ಕಾಪಿ ಕ್ಯಾಟ್ ಅನ್ನೋ ಪಟ್ಟ

Untitled design 2025 08 09t182358.356

ಸೂಪರ್ ಸ್ಟಾರ್ ಮಹೇಶ್‌ ಬಾಬುಗಿಂದು ಬರ್ತ್ ಡೇ ಸಂಭ್ರಮ. ರಾಜಮೌಳಿ ಇವತ್ತಾದ್ರೂ SSMB29 ಚಿತ್ರದ ವಿಷಯದಲ್ಲಿ ಪ್ರಿನ್ಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಡ್ತಾರೆ ಅಂತ ಎಲ್ರೂ ಕಾತರರಾಗಿದ್ರು. ಆದ್ರೀಗ ಬ್ರೇಕಿಂಗ್ ನ್ಯೂಸ್ ಜೊತೆ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಮೌಳಿ. ಭಜರಂಗಿ ಭಾಯಿಜಾನ್ ಫಸ್ಟ್‌ಲುಕ್‌ನ ಕಾಪಿ ಮಾಡಿ, ಮೊದಲ ಬಾರಿಗೆ ಕಾಪಿಕ್ಯಾಟ್ ಅನಿಸಿಕೊಂಡಿದ್ದಾರೆ.

ಎಸ್. ಎಸ್. ರಾಜಮೌಳಿ.. ಇದು ಬರೀ ಹೆಸರಲ್ಲ. ಇಂಡಿಯನ್ ಸಿನಿದುನಿಯಾದ ಬ್ರ್ಯಾಂಡ್. ಹೌದು.. ಇಂಡಿಯನ್ ಸ್ಪೀಲ್ ಬರ್ಗ್ ಅಂತಲೇ ಕರೆಯಲ್ಪಡುವ ಮೌಳಿ ಮಾಡಿದ ಸಿನಿಮಾಗಳೆಲ್ಲಾ ಬ್ಲಾಕ್ ಬಸ್ಟರ್ ಹಿಟ್. 25 ವರ್ಷದಲ್ಲಿ ಇವರು ಮಾಡಿದ ಸಿನಿಮಾಗಳು ಕೇವಲ 12. ಹಂತ ಹಂತವಾಗಿ ತೆಲುಗು ಚಿತ್ರರಂಗ, ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಮೌಳಿ ಸೌಂಡ್ ಮಾಡಿದ್ರು.

ಅದಕ್ಕೆ ಕಾರಣ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಗಳು, ತಮ್ಮ ಡಿಫರೆಂಟ್ ಮೇಕಿಂಗ್ ಹಾಗೂ ನಿರೂಪಣಾ ಶೈಲಿ, ಪ್ಯಾಟ್ರನ್, ಸಿಕ್ಕ ಸ್ಟಾರ್‌ಗಳು, ಅವರುಗಳ ಹಾರ್ಡ್‌ ವರ್ಕ್‌ ಹಾಗೂ ಔಟ್ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್. ಆಸ್ಕರ್ ಅಂಗಳಕ್ಕೆ ತ್ರಿಬಲ್ ಆರ್ ಸಿನಿಮಾನ ಕರೆದೊಯ್ದು, ನಾಟು ನಾಟು ಘಾಟಿನಿಂದ ಭಾರತಕ್ಕೆ ಪ್ರತಿಷ್ಠಿತ ಆಸ್ಕರ್ ತಂದರು ಜಕ್ಕನ್ನ.

ಇಂತಹ ಗ್ರೇಟೆಸ್ಟ್ ಮಾಸ್ಟರ್‌ಮೈಂಡ್‌ಗೂ ಕಾಪಿ ಕ್ಯಾಟ್ ಪಟ್ಟ ತಪ್ಪಲಿಲ್ಲ. ಹೌದು.. ಸದ್ಯ ಪ್ರಿನ್ಸ್ ಮಹೇಶ್ ಬಾಬು ನಟನೆಯ 29ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿರೋ ರಾಜಮೌಳಿ, ಶೂಟಿಂಗ್ ಶುರು ಮಾಡಿ ಐದಾರು ತಿಂಗಳಾದ್ರೂ ಇಲ್ಲಿಯವರೆಗೆ ಅದ್ರ ಎಳ್ಳಷ್ಟು ಮಾಹಿತಿ ಕೂಡ ಬಿಟ್ಟುಕೊಟ್ಟಿಲ್ಲ. ಅದಕ್ಕೆ ಕಾರಣ ಗ್ಲೋಬಲ್ ಸಿನಿಮಾಗೆ ಕೈ ಹಾಕಿರೋ ರಾಜಮೌಳಿ, ಸುಮಾರು 800ರಿಂದ ಸಾವಿರ ಕೋಟಿ ಬಿಗ್ ಬಜೆಟ್‌‌ನಲ್ಲಿ ವಿಶ್ವಸಂಚಾರಿಯ ಕುರಿತ ಕಥೆಯನ್ನ ತೆರೆಗೆ ತರ್ತಿರೋದು.

ಇಂಡಿಯಾನಾ ಜೋನ್ಸ್ ಹೋಲುವ ಸಿನಿಮಾ ಮಾಡ್ತಿರೋ ಜಕ್ಕನ್ನ, ಜಂಗಲ್ ಅಡ್ವೆಂಚರ್ ಮೂವಿಯನ್ನ ಸಿದ್ಧಗೊಳಿಸ್ತಿದ್ದಾರೆ. ಗುಂಟೂರು ಖಾರಂ ಚಿತ್ರದ ಬಳಿಕ ನಟ ಮಹೇಶ್ ಬಾಬು, SSMB29 ಪ್ರಾಜೆಕ್ಟ್‌ಗಾಗಿ ಸಾಕಷ್ಟು ಎಫರ್ಟ್‌ ಹಾಕ್ತಿದ್ದಾರೆ. ಆದ್ರೆ ಇಂದು 50ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿರೋ ಪ್ರಿನ್ಸ್‌ ಮಹೇಶ್ ಬಾಬು‌‌ಗೆ ಮೌಳಿ ನೂತನ ಚಿತ್ರದ ಫಸ್ಟ್‌ಲುಕ್ ಲಾಂಚ್ ಮಾಡ್ತಾರೆ ಅಂತ ಎಲ್ರೂ ಕಾಯ್ತಿದ್ರು. ಆದ್ರೀಗ ಅದು ಹುಸಿಯಾಗಿದೆ.

ಸ್ವತಃ ರಾಜಮೌಳಿ ಫಸ್ಟ್ ಟೈಂ SSMB29 ಕುರಿತು ಮೌನ ಮುರಿದಿದ್ದು, ನವೆಂಬರ್‌‌ನಲ್ಲಿ ‘ನೆವರ್ ಬಿಫೋರ್ ಸೀನ್’.. ಅಂದ್ರೆ ಹಿಂದೆಂದೂ ನೋಡದಂತಹ ಅದ್ಭುತ ದೃಶ್ಯದೊಂದಿಗೆ ಫಸ್ಟ್ ಲುಕ್ ಕೊಡ್ತೀನಿ. ದಯವಿಟ್ಟು ಅಲ್ಲಿಯವರೆಗೂ ಇದೇ ರೀತಿ ತಾಳ್ಮೆಯಿಂದ ಕಾಯಿರಿ ಎಂದಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಮಹೇಶ್ ಬಾಬು ಫೇಸ್ ಕಾಣದ ಒಂದು ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಆದ್ರೆ ಅದು ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಲುಕ್‌ನ ಹೋಲುವಂತಿದೆ.

ಯೆಸ್.. SSMB29 ಚಿತ್ರದ ಫಸ್ಟ್ ಲುಕ್ ಪೋಸ್ಟರ್‌‌ನಲ್ಲಿ ವಿ ನೆಕ್ ಟೀ ಶರ್ಟ್‌ ಧರಿಸಿರೋ ಮಹೇಶ್ ಬಾಬು ಫೇಸ್ ಇಲ್ಲದ ಲುಕ್ ರಿವೀಲ್ ಮಾಡಿದ್ದಾರೆ ರಾಜಮೌಳಿ. ರಕ್ತ ಸೋರುತ್ತಿರೋ ಅವರ ಕೊರಳಲ್ಲಿ ಕರುಂಗಾಲಿ ಮಾಲಾ ಕೂಡ ಇದೆ. ಅದ್ರಲ್ಲಿ ಶಿವನಂದಿ, ಶಿವನ ತ್ರಿಶೂಲ, ಢಮರುಗ ಇರೋ ಲಾಕೆಟ್ ಇದೆ. ಅಂದಹಾಗೆ ಭಜರಂಗಿ ಭಾಯಿಜಾನ್ ಚಿತ್ರದ ನಾಯಕನಟ ಸಲ್ಮಾನ್ ಖಾನ್ ಕೊರಳಲ್ಲಿ ಕಪ್ಪು ದಾರ, ಅದಕ್ಕೊಂದು ಗದೆ ಪೆಂಡೆಂಟ್ ಇತ್ತು. ಇದೀಗ ಅದೇ ಶೈಲಿಯಲ್ಲಿ ಶಿವನ ಪೆಂಟೆಂಟ್ ಇಟ್ಟಿದ್ದಾರೆ ರಾಜಮೌಳಿ.

ಅಯ್ಯೋ ರಾಜಮೌಳಿ ಕೂಡ ಬೇರೆಯವರ ರೀತಿಯೇ. ಹೈಲಿ ಟ್ಯಾಲೆಂಟೆಡ್ ಡೈರೆಕ್ಟರ್ ಆದ್ರೂ ಸಹ, ತಮ್ಮ ತಂದೆ ಕಥೆ ಬರೆದಿದ್ದ ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯಿಜಾನ್ ಕಥೆಯ ಕ್ಯಾರೆಕ್ಟರ್ ಲುಕ್‌ನಂತೆ ಇದನ್ನ ಡಿಸೈನ್ ಮಾಡಿದ್ದಾದ್ರೂ ಏಕೆ ಅಂತೆಲ್ಲಾ ಎಲ್ಲಾ ಕಾಲೆಳೆಯುತ್ತಿದ್ದಾರೆ. ಈ ಮೂಲಕ ಆಡಿಕೊಳ್ಳೋರಿಗೆ ಆಹಾರ ಆಗಿಬಿಟ್ಟಿದ್ದಾರೆ ದಿ ಗ್ರೇಟ್ ಮಾಸ್ಟರ್‌ಮೈಂಡ್ ರಾಜಮೌಳಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್   

Exit mobile version