ಮರದ ಕೊಂಬೆ ಬಿದ್ದು ಆಸ್ಪತ್ರೆಗೆ ಸೇರಿದ್ದ ಅಕ್ಷಯ್‌ ಸಾವು

Add a heading (34)

ಬೆಂಗಳೂರು: ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ ಕಳೆದ ಭಾನುವಾರ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾನೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಮೈಮೇಲೆ ಬಿದ್ದ ಮರದ ಕೊಂಬೆಯಿಂದ ಅಕ್ಷಯ್‌ನ ತಲೆ ಮತ್ತು ಮೆದುಳಿಗೆ ತೀವ್ರ ಪೆಟ್ಟಾಗಿತ್ತು.

ಘಟನೆಯ ನಂತರ ಅಕ್ಷಯ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ರಕ್ತಸ್ರಾವ ಮತ್ತು ಮೆದುಳಿನ ಗಾಯದಿಂದಾಗಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕಳೆದ ಭಾನುವಾರದಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷಯ್, ಇಂದು ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಅವನ ಜೀವ ಉಳಿಸಲು ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಅಕ್ಷಯ್‌ನ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಬಿಬಿಎಂಪಿಯಿಂದ ನಡೆಯುತ್ತಿರುವ ಮರಗಣತಿ ಕಾರ್ಯಕ್ರಮದ ನಿರ್ಲಕ್ಷ್ಯವೂ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Exit mobile version