ವರದಿ: ಮೂರ್ತಿ.ಬಿ ನೆಲಮಂಗಲ
ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ಹೃದಯವಿದ್ರಾವಕ ಘಟನೆ. ಮತ್ತೊಮ್ಮೆ ಸಮಾಜದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಮನೆಗೆ ಪೋಷಕರು ಇಲ್ಲದ ವೇಳೆಯನ್ನು ಬಳಸಿಕೊಂಡು, 8ನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯನ್ನು ಸುಹೀಲ್ (30) ಎಂದು ಗುರುತಿಸಲಾಗಿದೆ. ಈತ ಬಿಹಾರ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಬಾಡಿಗೆಗೆ ವಾಸವಾಗಿದ್ದ. ತನ್ನ ಆಸೆಯ ತಣಿಸಲು ಪುಟ್ಟ ಬಾಲಕಿಯನ್ನು ನಿಗ್ರಹಿಸುವ ಹೀನ ಕೃತ್ಯವೆಸಗಿದ್ದಾನೆ ಎಂಬ ಆರೋಪ ಇದೆ.
ಬಾಲಕಿ ವಾಂತಿ ಮತ್ತು ಸುಸ್ತು ಎನ್ನುವ ಕಾರಣದಿಂದ ಪೋಷಕರು ಆಕೆಯನ್ನು ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಶಾಕ್ ಆಗುವ ವಿಚಾರವನ್ನು ಬಹಿರಂಗಪಡಿಸಿದರು. ಬಾಲಕಿ ಈಗಾಗಲೇ 6 ವಾರಗಳ ಗರ್ಭಿಣಿಯಾಗಿದ್ದಾಳೆ.ಆರೋಪಿ ಬಳಿಕ ವಾರದ ಹಿಂದೆಯಷ್ಟೇ ಸುಹೀಲ್ ತನ್ನ ಮನೆ ಖಾಲಿ ಮಾಡಿ ಪರಾರಿಯಾಗಿದ್ದಾನೆ. ಈತ ಇದೀಗ ತನ್ನ ಮೂಲ ರಾಜ್ಯ ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಸುಹೀಲ್ ಬಂಧನವಾಗಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ಪೋಕ್ಸೋ ಕಾಯ್ದೆಯ 4 ಮತ್ತು 8ನೇ ಕಲಂಗಳು, ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) 64(B) ಅಡಿಯಲ್ಲಿ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಈ ರೀತಿಯ ದುಷ್ಕರ್ಮಿಗಳನ್ನು ತಡೆಗಟ್ಟುವುದು ಕೇವಲ ಪೊಲೀಸರ ಕೆಲಸವಲ್ಲ. ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯರು ಎಲ್ಲಾ ಮಕ್ಕಳ ಮೇಲೆ ಗಮನವಿಟ್ಟು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳನ್ನು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.
ಈ ಘಟನೆ ನಾವೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ.ಮಕ್ಕಳ ಭದ್ರತೆ ನಮ್ಮ ಮೊದಲ ಆದ್ಯತೆ ಆಗಬೇಕು.
ತದ್ವಾರೆ, ಮಕ್ಕಳಿಗೆ ಭದ್ರ ಮತ್ತು ಸುರಕ್ಷಿತ ಪರಿಸರ ನಿರ್ಮಿಸುವತ್ತ ನಾವು ಹೆಜ್ಜೆ ಹಾಕಬೇಕು.
