ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಬೇರೆ ಸಮುದಾಯ ಅನ್ನೋ ಕಾರಣಕ್ಕೆ ನನ್ನನ್ನ ಆರಂಭದಲ್ಲೇ ತುಳಿದರು ಅನ್ನೋ ಶಾಕಿಂಗ್ ಸ್ಟೇಟ್ಮೆಂಟ್ ನೀಡಿರೋ ಝೈದ್ ಖಾನ್, ರಾಮ–ರಹೀಮ ಇಬ್ಬರನ್ನೂ ಗೌರವಿಸ್ತಾರೆ. ಅದೇ ಕಾರಣಕ್ಕೆ ಹೋದ ಕಡೆ ದರ್ಗಾ ಜೊತೆ ದುರ್ಗಾ ಟೆಂಪಲ್ಗೂ ಭೇಟಿ ನೀಡಿದ್ದಾರೆ. ಈ ಬಗ್ಗೆ ಝೈದ್ ಖಾನ್ ಏನ್ ಹೇಳಿದ್ರು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಸಿನಿಮಾ ಅನ್ನೋದೇ ಹಾಗೆ ಒಂದು ಭಾಷೆ..ಒಂದು ಜನಾಂಗ..ಒಂದು ಸಮುದಾಯಕ್ಕೆ ಸೀಮಿತವಲ್ಲ. ಹಾಗೆ ಸ್ಟಾರ್ ಗಳಿಗೂ ಕೂಡ ಎಲ್ಲರನ್ನೂ ತಮ್ಮವರಂತೆ ಕಾಣುತ್ತಾ ಪ್ರಚಾರಕ್ಕಿಳಿತಾರೆ. ಸದ್ಯ ಆರಂಭದಲ್ಲೇ ಜಾತಿ ವಿಚಾರಕ್ಕೆ ಸಿಲುಕಿದ್ದೆ, ಬೇರೆ ಸಮುದಾಯ ಅನ್ನೋ ಕಾರಣಕ್ಕೆ ನನ್ನನ್ನ ತುಳಿಯಲಾಯಿತು ಅನ್ನೋ ಝೈದ್ ಖಾನ್ ಅವರ ಮಾತು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಆದ್ರೆ ಆ ನೋವನ್ನೇ ಶಕ್ತಿಯಾಗಿ ಮಾಡಿಕೊಂಡಿರುವ ಝೈದ್ ಖಾನ್, ಧರ್ಮ-ಜಾತಿ ಗಡಿ ಮೀರಿದ ತಮ್ಮ ನಿಲುವನ್ನು ನಡೆಗೇ ತಂದು ತೋರಿಸಿದ್ದಾರೆ. ರಾಮನಿಗೂ ರಹೀಮನಿಗೂ ಒಂದೇ ಗೌರವ ಎನ್ನುವ ಮನಸ್ಥಿತಿಯೊಂದಿಗೆ ಹೋದ ಕಡೆ ದರ್ಗಾಗೂ, ದುರ್ಗಾ ಟೆಂಪಲ್ಗೂ ಭೇಟಿ ನೀಡಿ, ನಿಜವಾದ ಸೇಕ್ಯುಲರ್ ಇಂಡಿಯಾ ಅಂದರೆ ಏನು ಅನ್ನೋದಕ್ಕೆ ಜೀವಂತ example ಆಗಿದ್ದಾರೆ.
ಜಾತಿ ವಿಚಾರ.. ಆರಂಭದಲ್ಲೇ ತುಳಿದರೆಂದ ಝೈದ್ ಖಾನ್
ಹೋದ ಕಡೆ ದರ್ಗಾ ಜೊತೆ ದುರ್ಗಾ ಟೆಂಪಲ್ಗೂ ಭೇಟಿ !
ಅಪ್ಪಟ ಕನ್ನಡಿಗನಾಗಿ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಪಡೆಯಲು ಹೋರಾಟ ನಡೆಸುತ್ತಿರುವ ಝೈದ್ ಖಾನ್, ಜನವರಿ 23ಕ್ಕೆ ತೆರೆಗೆ ಬರ್ತಿರುವ ‘ಕಲ್ಟ್’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಝೈದ್ ಗೆ ರಚಿತಾ ರಾಮ್, ಮಲೈಕ ಜೋಡಿಯಾಗಿದ್ದಾರೆ. ಇದು ಝೈದ್ ಖಾನ್ ಅಭಿನಯದ ಎರಡನೇ ಸಿನಿಮಾ ವಿಭಿನ್ನ ಕಾನ್ಸೆಪ್ಟ್ ಮೂಲಕ ಕಥೆ ಹೇಳೋ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನಿಲ್ ಕುಮಾರ್. ಹೊಸ ರೀತಿಯ ಸಬ್ಜೆಕ್ಟ್, ತೀಕ್ಷ್ಣ ಡೈಲಾಗ್‍ಗಳು ಈಗಿನ ಕಾಲ ಘಟ್ಟಕ್ಕೆ ಹೊಂದುವ ಕಥಾಹಂದರ ಚಿತ್ರಕ್ಕೆ ಪ್ಲಸ್ ಆಗಲಿದೆ.
ಸದ್ಯ ಹುಬ್ಬಳ್ಳಿ.. ಧಾರವಾಡ.. ದಾವಣಗೆರೆ ಹೀಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆ ಜಿಲ್ಲೆಗೂ ಝೈದ್ ಆಂಡ್ ಟೀಂ ಭೇಟಿ ಕೊಟ್ಟು ಪ್ರಚಾರಕ್ಕೆ ಇಳಿದಿದ್ದಾರೆ. ಅಂದಹಾಗೆ ಝೈದ್ ಖಾನ್ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಅಂತ ಭಿನ್ನಾಭಿಪ್ರಾಯ ಬೇಡ ನಿಮ್ಮಲ್ಲೊಬ್ಬ ಅಂತ ಪರಿಗಣಿಸಿ ಅಂತ ಹಿಂದೂ ದೇವಾಲಯಗಳಿಗೂ ಬೇಟಿ ನೀಡಿ ಫ್ಯಾನ್ಸ್ ಮೀಟ್ ಮಾಡ್ತಿದ್ದಾರೆ. ಇನ್ನು ಜನವರಿ -23 ಕ್ಕೆ ಕಲ್ಟ್ ಜೊತೆ ಲ್ಯಾಂಡ್ ಲಾರ್ಡ್ ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಹೀಗಾಗಿ ಥಿಯೇಟರ್ ಅಂಗಳದಲ್ಲಿ ಲ್ಯಾಂಡ್ ಲಾರ್ಡ್ ಹಾಗೆ ಕಲ್ಟ್ ನಡುವೆ ಫೈಟ್ ನಡೆಯೋದು ಪಕ್ಕಾ ಆಗಿದೆ.ಈ ನಡುವೆ ಝೈದ್ ಗೆಲ್ಲೋಕೆ ಏನೆಲ್ಲಾ ಸಾಧ್ಯತೆಗಳಿವೆಯೋ ಎಲ್ಲವನ್ನೂ ಮಾಡ್ತಿದ್ದಾರೆ.
ಜ-23ಕ್ಕೆ ‘ಕಲ್ಟ್’ ತೆರೆಗೆ.. ಇದು ಝೈದ್ ಖಾನ್ 2ನೇ ಚಿತ್ರ
ಲ್ಯಾಂಡ್‌ಲಾರ್ಡ್ v/s ಕಲ್ಟ್.. ಬಾಕ್ಸ್ ಆಫೀಸ್ ದುನಿಯಾ
ಒಂದೆಡೆ ಸಮಾಜದ ಟೀಕೆ, ಮತ್ತೊಂದೆಡೆ ಚಿತ್ರರಂಗದ ಸವಾಲು ಎಲ್ಲವನ್ನೂ ಸಮತೋಲನದಿಂದ ಎದುರಿಸುತ್ತಿರುವ ಝೈದ್ ಖಾನ್, ದರ್ಗಾ ದುರ್ಗಾ ಟೆಂಪಲ್ ಭೇಟಿಯ ಮೂಲಕ ಎಲ್ಲರೂ ಒಂದೇ ಅನ್ನೋ ಸಂದೇಶ ನೀಡಿರುವ ಈ ನಟ, ‘ಕಲ್ಟ್’ ಚಿತ್ರದ ಮೂಲಕ ಬಾಕ್ಸ್ ಆಫೀಸ್ ದುನಿಯಾದಲ್ಲೂ ತನ್ನದೇ ಕಲ್ಟ್ ಫಾಲೋಯಿಂಗ್ ಸೃಷ್ಟಿಸಬಹುದಾ ಅನ್ನೋದನ್ನ ಕಾದು ನೋಡಬೇಕಿದೆ. ದರ್ಗಾ ಜೊತೆ ದುರ್ಗಾ ದೇವಿ ಆಶಿರ್ವಾದ ಪಡೆದ ಕಲ್ಟ್ ಹೀರೋ ಹೇಗೆ ಕಮಾಲ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
