ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳ ನಡುವೆ ಪ್ರೀತಿ, ಪ್ರೇಮ, ಬ್ರೇಕಪ್ ಕಾಮನ್ ಆಗಿಬಿಟ್ಟಿದೆ. ಅದ್ರಲ್ಲೂ ಸಚಿವ ಜಮೀರ್ ಖಾನ್ ಪುತ್ರ ಝೈದ್ ಖಾನ್, ಯಾಕೋ ಪ್ಯಾಥೋ ಮೂಡ್‌ಗೆ ಜಾರಿದ್ದಾರೆ. ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು, ನಡುದಾರಿಯಲ್ಲೇ ಬಿಟ್ಟೋದೆಯಲ್ಲೇ ಅಂತ ಕೈ ಕೊಟ್ಟ ರಚಿತಾ ರಾಮ್‌ಗಾಗಿ ಹಾಡ್ತಿರೋ ವಿಡಿಯೋ ವೈರಲ್ ಆಗ್ತಿದೆ. ಝೈದ್ ಬ್ರೇಕಪ್ ಸ್ಟೋರಿಯ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಪ್ಯಾಥೋ ಮೂಡ್‌ನಲ್ಲಿ ಸಚಿವ ಜಮೀರ್ ಮಗ ಝೈದ್
- ರಚಿತಾ ಗುಂಗಲ್ಲಿ ಝೈದ್.. ಭಗ್ನಪ್ರೇಮಿ ಪಾಡು ಎಂಥದ್ದು?
- ನಿಯತ್ತಾಗಿ ಪ್ರೀತ್ಸಿದ್ದೇ ತಪ್ಪಾ ಅಂತಿರೋ ಮಾಧವನ ವ್ಯಥೆ
- ಭಗ್ನಪ್ರೇಮಿಗಳಿಗೆ ಪ್ಯಾಥೋ ಆ್ಯಂಥೆಮ್ ಆಗ್ತಿದೆ ಕಲ್ಟ್ ಗೀತೆ
ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ ಎಂದು ಎಣ್ಣೆ ಬಾಟಲ್ ಹಿಡಿದು ಕುಣಿದಿದ್ದ ರಚಿತಾ ರಾಮ್ ಈಗ ಎಣ್ಣೆ ಬಾಟಲ್ ನ ಝೈದ್ ಖಾನ್ ಕೈಗೆ ಕೊಟ್ಟಿದ್ದಾರೆ. ಎಸ್, ಝೈದ್ ಗೆ ರಚ್ಚು ಕೈಕೊಟ್ಟಿದ್ದಾರೆ ಹೀಗಂತ ನಾವು ಹೇಳ್ತಿಲ್ಲ ನಿರ್ದೇಶಕ ಅನಿಲ್ ಕುಮಾರ್ ಹೇಳ್ತಿದ್ದಾರೆ. ಇದು ರಿಯಲ್ ಅಲ್ಲಾ ರೀಲ್ ಕಣ್ರೀ..ಝೈದ್ ಖಾನ್ ಅಭಿನಯಿಸುತ್ತಿರುವ ಕಲ್ಟ್ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆ ಆಗಿದೆ. ಅದುವೇ ಪ್ಯಾಥೋ ಸಾಂಗ್.
ರಿಯಲ್ ಲೈಫ್ ನಲ್ಲಿ ನಟಿ ರಚಿತಾ ರಾಮ್ ಮದುವೆ ಸುದ್ದಿ ಒಂದು ಕಡೆ ಜೋರಾಗೇ ಸದ್ದು ಮಾಡ್ತಿದೆ. ಆದ್ರೀಗ ರಚಿತಾ ಗುಂಗಲ್ಲಿ ಝಹೀದ್ ಕೊರಗ್ತಿರೋ ಕಲ್ಟ್ ಸಿನಿಮಾದ ಪ್ಯಾಥೋ ಸಾಂಗ್ ರಿಲೀಸ್ ಆಗಿದೆ. ನೀಯತ್ತಾಗಿ ಪ್ರೀತ್ಸಿದ್ದೆ ತಪ್ಪಾಗಿ ಹೋಯ್ತಲ್ಲ ಅಂತ ಗುನುಗ್ತಿರೋದಕ್ಕೆ ಕಾರಣ ಕಲ್ಟ್ ಸಿನಿಮಾ. ಅಂದ ಹಾಗೆ ಕಲ್ಟ್ ..ಇದು ಝೈದ್ ಖಾನ್ ಕರಿಯರ್ ನಲ್ಲಿ ಸಕತ್ ಕುತೂಹಲ ಹುಟ್ಟಿಸಿರೋ ಸಿನಿಮಾ. ಈಗಾಗಲೇ ಈ ಸಿನಿಮಾದ ಅಯ್ಯೋ ಶಿವನೇ ಹಾಡು ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಇದೀಗ ಕಲ್ಟ್ ಸಿನಿಮಾದ ಪ್ಯಾಥೋ ಸಾಂಗ್ ಭಗ್ನಪ್ರೇಮಿಗಳ ಪಾಲಿಗೆ ಆ್ಯಂಥೆಮ್ ಸಾಂಗ್ ಆಗ್ತಿದೆ.
ಸದ್ಯ ಕಲ್ಟ್ ಸಿನಿಮಾದ ಈ ಹಾಡಿನ ಸಾಲುಗಳು ಪ್ರತೀ ಭಗ್ನ ಪ್ರೇಮಿಯ ಕನವರಿಕೆಯ ಸಾಲುಗಳಾಗಿವೆ. ನನ್ ಅಂಥೋನ್ ನಿಂಗೆ ಸಿಕ್ಕೋದೇ ಇಲ್ಲ…ಸಿಕ್ಕಿದ್ರೂ ನನ್ ಹಂಗೆ ಪ್ರೀತಿ ಮಾಡಲ್ಲ….ನಿನ್ ಅಂದ ಚೆಂದ ನಂಗೆ ಬೆಕಿಲ್ಲ. ನೀಯತ್ತಾಗ್ ಪ್ರೀತ್ಸೀದ್ದೇ ತಪ್ಪಾಗೋಯ್ತಲ್ಲ ಅನ್ನೋ ಈ ಸಾಲುಗಳು ಸದ್ಯ ಸಿನಿಮಾದಲ್ಲಿ ಮಾಧವನ ಪಾತ್ರದಲ್ಲಿರೋ ಝೈದ್ ಪ್ರೀತಿ ಕಳೆದುಕೊಂಡ ನೋವನ್ನ ಹೇಳಿಕೊಳ್ಳುವಂತಿವೆ.
ರಿಲೀಸ್ ಆಗಿರೋ ಪ್ಯಾಥೋ ಸಾಂಗ್ ಗೆ ಅನೀಲ್ ಸಾಹಿತ್ಯವಿದ್ದು, ಅರ್ಜುನ್ ಜನ್ಯಾ ಸಂಗೀತ ಸಿನಿಮಾಗಿದೆ. ಪ್ರೀತ್ಸೋ ಹೃದಯಗಳ ಕನವರಿಕೆಯ ಪಿಸುಮಾತನ್ನ ವಿಭಿನ್ನವಾಗಿ ಹೇಳೋಕೆ ಇಬ್ಬರು ಚೆಂದದ ನಾಯಕಿಯರು ಸಿನಿಮಾದಲ್ಲಿದ್ದಾರೆ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಹಾಗೆ ಮಲೈಕಾ ಟಿ.ವಸುಪಾಲ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇನ್ನು, ಬನಾರಸ್ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಕಲ್ಟ್ ನಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಪಾಧ್ಯಕ್ಷ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಈ ಸಿನಿಮಾ 2026ರ ಜನವರಿ 23ರಂದು ತೆರೆಕಾಣಲಿದೆ. ಇತ್ತೀಚೆಗೆ ಕಿತ್ತೂರು ಉತ್ಸವದಲ್ಲಿ ಚಿತ್ರದ ಎರಡನೇ ಹಾಡು ‘ಬ್ಲಡಿ ಲವ್’ ಬಿಡುಗಡೆಯಾಗಿ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿದೆ. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಜೆ.ಎಸ್. ವಾಲಿ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಒಟ್ಟಿನಲ್ಲಿ ಕಲ್ಟ್ ಸಿನಿಮಾ ಹಲವು ವಿಶೇಷತೆಗಳೊಂದಿಗೆ ಸೌಂಡ್ ಮಾಡ್ತಿದ್ದು ಸದ್ಯದಲ್ಲಿಯೇ ಮುಂದಿನ ವರ್ಷ ಜನವರಿ 23ರಂದು ತೆರೆಗೆ ಬರ್ತಿದೆ. ಹಾಗಾದ್ರೆ ರಿಲೀಸ್ ಆಗಿರೋ ಹಾಡುಗಳನ್ನ ನೋಡಿ ಮೆಚ್ಚಿರೋರು ಮುಂದೆ ಸಿನಿಮಾವನ್ನ ಹೇಗೆ ಇಷ್ಟ ಪಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್