ಮೆಗಾ ಪವರ್ ಸ್ಟಾರ್ ಯುವರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಇರ್ತಾರಂತೆ. ಈ ತರಹದ ಒಂದು ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ಹಾಗಾದ್ರೆ ಈ ಸುದ್ದಿಯ ಅಸಲಿಯತ್ತೇನು..? ಕಿಚ್ಚನ ಸ್ಪೆಷಲ್ ಅಪಿಯರೆನ್ಸ್ ಯಾವ ರೀತಿ ಅನ್ನೋದ್ರ ಡಿಟಲ್ಡ್ ಸ್ಟೋರಿ ನಿಮಗಾಗಿ ಕಾಯ್ತಿದೆ.
- ಯುವ ಎಕ್ಕದಲ್ಲಿ ಬಾದ್‌ಷಾ ಸುದೀಪ್.. ಬಿಗ್ ಸರ್‌ಪ್ರೈಸ್ ?
- ಕಿಚ್ಚನ ಸ್ಪೆಷಲ್ ಅಪಿಯರೆನ್ಸ್ ಅಥ್ವಾ ಬ್ಯಾಗ್ರೌಂಡ್ ವಾಯ್ಸ್ ?
- ಜುಲೈ 18ಕ್ಕೆ ಥಿಯೇಟರ್ಗೆ ಮೆಗಾ ಪವರ್ ಸ್ಟಾರ್ ಯುವ..!
- ಯುವ ಚಿತ್ರದ ಬಳಿಕ ಮತ್ತಷ್ಟು ಮಾಗಿರೋ ದೊಡ್ಮನೆ ಹುಡ್ಗ
ಎಕ್ಕ.. ಒಂಥರಾ ಸುಕ್ಕಾ ಮೂವಿ. ಲೋಕಲ್ ಫ್ಲೇವರ್, ಯೂತ್‌ಫುಲ್ ಹಾಗೂ ಮಾಸ್ ಎಂಟರ್‌ಟೈನರ್. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿನಲ್ಲಿನಂತೆ ಸಖತ್ ಚಾಲಾಕಿ ಇರೋ ಹೀರೋ ಆಗಿ ಯುವರಾಜ್‌ಕುಮಾರ್ ಇಲ್ಲಿ ಮಿಂಚು ಹರಿಸಲಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಎಕ್ಕ ಸಿನಿಮಾ, ಸದ್ಯ ಟೀಸರ್ ಹಾಗೂ ಸಾಂಗ್ಸ್‌ನಿಂದ ಬಝ್ ಕ್ರಿಯೇಟ್ ಮಾಡಿದ್ದು, ಬಹು ನಿರೀಕ್ಷಿತ ಸಿನಿಮಾ ಅನಿಸಿಕೊಂಡಿದೆ.
ಇದೇ ಜುಲೈ 18ಕ್ಕೆ ಎಕ್ಕ ಥಿಯೇಟರ್‌ಗಳಿಗೆ ಎಂಟ್ರಿ ಕೊಡ್ತಿದ್ದು, ಚಿತ್ರತಂಡ ಕೂಡ ಭರ್ಜರಿ ಪ್ರಮೋಷನ್ಸ್ ಮಾಡ್ತಿದೆ. ರಾಜ್ಯದ ಮೂಲೆ ಮೂಲೆ ಸುತ್ತುವಲ್ಲಿ ಬ್ಯುಸಿಯಾಗಿದೆ. ನಾಯಕನಟ ಯುವರಾಜ್‌ಕುಮಾರ್‌ಗೆ ಯುವ ಚಿತ್ರದ ಬಳಿಕ ಇದು ಎರಡನೇ ಸಿನಿಮಾ ಆಗಿದ್ದು, ಅವರ ನಟನೆಯಲ್ಲಿ ಪಕ್ವತೆ ಕಾಣ್ತಿದೆ. ಎಕ್ಸ್‌ಪೀರಿಯೆನ್ಸ್‌ನಿಂದ ಮಾಗಿರೋ ಅವರು, ಪ್ರಾಮಿಸಿಂಗ್ ಆಗಿ ಕಾಣ್ತಿದ್ದಾರೆ.
ಇದೀಗ ಹೊಚ್ಚ ಹೊಸ ನ್ಯೂಸ್ ಏನಪ್ಪಾಂದ್ರೆ, ಎಕ್ಕ ಸಿನಿಮಾಗೆ ಬಾದ್‌ಷಾ ಕಿಚ್ಚ ಸುದೀಪ್ ಎಂಟ್ರಿ ಕೊಡಲಿದ್ದಾರಂತೆ. ಇದ್ರಿಂದ ಆನೆ ಬಲ ಬಂದಂತಾಗಿದೆ. ಹೌದು.. ಸುದೀಪ್ ಎಕ್ಕ ಅಡ್ಡಾಗೆ ಬರಲಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಅಂದಹಾಗೆ ಮ್ಯಾಕ್ಸ್‌ನಿಂದ ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ಕೊಟ್ಟಿರೋ ಸುದೀಪ್, ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಕೊಡ್ತಾರಾ ಅಥ್ವಾ ಬ್ಯಾಗ್ರೌಂಡ್ ವಾಯ್ಸ್ ಕೊಡ್ತಾರಾ ಅನ್ನೋ ಕುತೂಹಲವಿದೆ.
ಯುವ ಸಿನಿಮಾ ಬಂದಾಗಲೂ ಯುವರಾಜ್ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದ್ದ ಅಭಿನಯ ಚಕ್ರವರ್ತಿ ಸುದೀಪ್, ಇದೀಗ ಎಕ್ಕ ಚಿತ್ರಕ್ಕೂ ಸಾಥ್ ಕೊಡಲಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಆಲ್ ಇಂಡಿಯಾ ಕಟೌಟ್ ಇಲ್ಲಿ ನಟಿಸ್ತಿಲ್ಲ, ಬದಲಿಗೆ ಸಿನಿಮಾದಲ್ಲಿ ಬ್ಯಾಗ್ರೌಂಡ್ ವಾಯ್ಸ್ ಕೊಡೋ ಮೂಲಕ ನೆರೇಷನ್ ನೀಡಲಿದ್ದಾರೆ ಅಂತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದು ಗೊತ್ತಿಲ್ಲ. ಈ ವಿಷಯವನ್ನು ಚಿತ್ರತಂಡ ಕೂಡ ಕನ್ಫರ್ಮ್ ಮಾಡಿಲ್ಲ. ಇದು ಸತ್ಯವಾದಲ್ಲಿ ಎಕ್ಕ ಸಿನಿಮಾದ ತೂಕ ಮತ್ತಷ್ಟು ಹೆಚ್ಚಲಿದೆ.
ಯುವ ಜೊತೆ ಕಿಚ್ಚ ಕೈ ಜೋಡಿಸಿದ್ರೆ, ಅಪ್ಪು-ಸುದೀಪ್ ಸ್ನೇಹದ ಮುಂದುವರಿದ ಭಾಗವಾಗಲಿದೆ. ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲಂಸ್ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡ್ತಿದ್ದು, ಅಪ್ಪು ಮನದನ್ನೆಗಾಗಿ ಕಿಚ್ಚ ಈ ಚಿತ್ರದ ಭಾಗವಾದ್ರೂ ಅಚ್ಚರಿಯಿಲ್ಲ ಅನ್ನೋದು ಓಪನ್ ಸೀಕ್ರೆಟ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
