ಅಜಯ್ ಯುದ್ಧಕಾಂಡಕ್ಕೆ ಕ್ರೇಜಿಸ್ಟಾರ್ ಸಾಥ್

ರೆಟ್ರೋ ಮೀಟ್ಸ್ ಮೆಟ್ರೋ.. ರವಿಮಾಮ ಟಿಪ್ಸ್

Untitled design 2025 04 13t181658.956

ಹೆಣ್ಣಿನ ಅಳು, ಮಗುವಿನ ಕೂಗು ಏನನ್ನಾದ್ರೂ ಕರಗಿಸೋ ಶಕ್ತಿ ಹೊಂದಿರುತ್ತೆ. ಅಂತಹ ಕೂಗಿಗೆ ಅಜಯ್ ರಾವ್ ಯುದ್ಧಕಾಂಡ ಚಾಪ್ಟರ್-2 ಗೆಲ್ಲಲಿ ಅಂತ ರೆಟ್ರೋ ಸ್ಟೈಲ್‌‌ನಲ್ಲಿ ಯುದ್ಧಕಾಂಡ ಮಾಡಿ ಗೆದ್ದ ಕ್ರೇಜಿಸ್ಟಾರ್ ರವಿಚಂದ್ರಬ್ ಧೈರ್ಯ ತುಂಬಿದ್ದಾರೆ.

ಯುದ್ಧಕಾಂಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾರಣಾಂತರಗಳಿಂದ ಟ್ರೆಂಡ್ ಕ್ರಿಯೇಟ್ ಮಾಡಿರೋ ಸಿನಿಮಾ. ಯುದ್ದಕಾಂಡ ಅಂದಾಕ್ಷಣ ನೆನಪಾಗ್ತಾರೆ ರೆಟ್ರೋ ಸ್ಟೈಲಲ್ಲಿ ಸೋಲೇ ಇಲ್ಲ ಅಂತ ಹಾಡಿ, ಕುಣಿದು ರೋಷಾವೇಶದಲ್ಲಿ ನ್ಯಾಯ ಕೊಡಿಸೋ ಹಠಕ್ಕೆ ಬಿದ್ದಿದ್ದ ಕ್ರೇಜಿಸ್ಟಾರ್ ರವಿಮಾಮ.

ಅಂದಹಾಗೆ ಈಗ ಮೆಟ್ರೋ ಕಾಲದಲ್ಲಿ ಹೆಣ್ಣಿನ ಮೇಲೆ‌ ನಡೆಯೋ ಶೋಷಣೆ, ದಬ್ಬಾಳಿಕೆ, ಅತ್ಯಾಚಾರ ಕಥೆ ಹೇಳೋ ಸಿನಿಮಾ ಮಾಡಿದ್ದಾರೆ ಅಜಯ್ ರಾವ್. ಅವರಿಗೆ ಸ್ಪೂರ್ತಿಯಾಗಿ ನಿಂತ ರವಿಚಂದ್ರನ್, ಗೋಲ್ಡ್ ಕ್ಲಾಸ್ ಟಿಕೆಟ್ ಪಡೆದು, ಧೈರ್ಯ ತುಂಬಿದ್ದಾರೆ. ಸಿನಿಮಾ ಅಂದ್ರೆ ಉಸಿರು, ಸಿನಿಮಾ ಅಂದ್ರೆ ಬದುಕು ಅಂತ ಕನಸುಗಾರ ಸಿನಿಮಾಗಾಗಿ ಸಾಲ‌ ಮಾಡಿದ್ದ ಕಥೆ ಆಗಾಗಾ ಕೇಳಿದ್ದೇವೆ. ಅದರ ಕಷ್ಟ ನಷ್ಟದ‌ ಅನುಭವ ಹೇಳುತ್ತಲೇ ಅಜಯ್ ರಾವ್ ಸಾಲ ತೀರಿಸಿ, ರಿಚ್ ಆಗುವಷ್ಟು ಹಣ ಹರಿದು ಬರಲಿ ಅಂತ ಹಾರೈಸಿದ್ರು ಕ್ರೇಜಿಸ್ಟಾರ್.

ಅಂದ‌ಹಾಗೆ ಯುದ್ದಕಾಂಡ ಚಿತ್ರದ ಟ್ರೈಲರ್‌‌ನ ಸ್ವತಃ ರವಿಚಂದ್ರನ್ ಶಂಖ ಊದುವ ಮೂಲಕ ಅನಾವರಣ ಮಾಡಿ, ತಂಡಕ್ಕೆ ಶುಭ ನುಡಿದಿದ್ದಾರೆ. ಇದೇ ವೇಳೆ ಮಾತನಾಡಿದ ಅಜಯ್, ಸಿನಿಮಾ ನನ್ನ ವೃತ್ತಿ ಬದುಕಿನ ವಿಶೇಷತೆಗಳಲ್ಲೊಂದು. ಕಥೆ ಒಪ್ಪಿದ್ದು ನನ್ನ ಮಗಳಿಗಾಗಿ. ಸದ್ಯ ಸಿನಿಮಾವನ್ನ ತಲುಪಿಸೋದು ಮಾತ್ರವಲ್ಲ ಈ ಸಿನಿಮಾ ಒಂದು ಕ್ರಾಂತಿ ಆಗೋ ನಿಟ್ಟಿನಲ್ಲಿ ಬೇಕಾದ ಪ್ರಯತ್ನಗಳನ್ನ ಮಾಡ್ತಿದ್ದೇನೆ. ಅದಕ್ಕೆ ರವಿಚಂದ್ರನ್ ಅವರು ಸ್ಪೂರ್ತಿ ಅಂತ ಹೇಳಿದ್ದಾರೆ.

ಸಿನಿಮಾ ಅನ್ನೋ ಮಾಯಾ ಜಗತ್ತಿನಲ್ಲಿ ನಡೆಯೋ ಘಟನಾವಳಿಗಳೇ ಹಾಗೆ. ಬಣ್ಣದ ಬದುಕಿನಲ್ಲಿರೋರು ಎಲ್ರೂ ಚೆನ್ನಾಗಿರ್ತಾರೆ ಅವಿರಿಗೇನ್ ಕಡಿಮೆ ಅನ್ನೋ ಮಾತಾಡುವಾಗ ಕೆಲವು ಘಟನೆಗಳು ಅಯ್ಯೋ ಇದೇನಿದು ಹೀಗೆ ಅಂತ ಮರುಗುವ ಹಾಗೆ ಮಾಡುತ್ತವೆ. ಸದ್ಯ ಇಂತಹ ಸವಾಲುಗಳನ್ನ ದಾಟಿ ಎಲ್ಲರ ಮನೆ ಮನ ತಲುಪೋಕೆ ನಟ ಅಜಯ್ ರಾವ್ ರೆಡಿಯಾಗಿದ್ದಾರೆ.

ಕನಸುಗಾರ ರವಿಚಂದ್ರನ್ ಗೆ ಅಜಯ್ ರಾವ್ ಯುದ್ಧಕಾಂಡ ಚಿತ್ರತಂಡದ ಪರವಾಗಿ ಬೆಳ್ಳಿ ಶಂಖ ಉಡುಗೊರೆಯಾಗಿ ನೀಡಲಾಯಿತು. ಒಟ್ಟಿನಲ್ಲಿ ಗಾಂಧಿನಗರದಲ್ಲಿ ಅಜಯ್ ರಾವ್ ನಟಿಸಿ, ನಿರ್ಮಿಸಿರೋ ಹಾಗೂ ಪವನ್ ಭಟ್ ನಿರ್ದೇಶಿಸಿರೋ ಯುದ್ಧಕಾಂಡ ಚಾಪ್ಟರ್-2 ಸಿನಿಮಾ ಹಲವು ವಿಶೇಷತೆಗಳಿಂದ ಸೌಂಡ್ ಮಾಡ್ತಿದೆ. ಇದೇ ಏಪ್ರಿಲ್ 18ರಂದು ಸಿನಿಮಾ ತೆರೆಗೆ ಬರ್ತಿದ್ದು, ನೋಡುಗರಿಗೆ ರುಚಿಸುವ ಲಕ್ಷಣ ತೋರಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version