ಕಿಂಗ್ ಆದ ಯೋಗಿ..ಶಿವಣ್ಣ, ತಮಿಳ್ ಡೈರೆಕ್ಟರ್ಸ್ ಏನಂದ್ರು ?

50ನೇ ಚಿತ್ರಕ್ಕೆ ಕರುನಾಡ ಸುಲ್ತಾನನಾದ ಲೂಸ್‌‌ಮಾದ ಯೋಗಿ

BeFunky collage 2026 02 13T164221.242

ನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ. ಹೀಗೊಂದು ಮನಮುಟ್ಟುವ ಮಾತಿನಿಂದ ತನ್ನ ಕಂಬ್ಯಾಕ್ ಭರ್ಜರಿಯಾಗಿರಲಿದೆ ಅನ್ನೋದ್ರ ಹಿಂಟ್ ನೀಡಿದ್ದ ಲೂಸ್‌ಮಾದ ಯೋಗಿ, ಇದೀಗ 50ನೇ ಮೈಲಿಗಲ್ಲು ಚಿತ್ರದ ಮೂಲಕ ಧಮಾಕೇದಾರ್ ನ್ಯೂಸ್ ಕೊಟ್ಟಿದ್ದಾರೆ. ಕಿಂಗ್ ಪಟ್ಟಕ್ಕೇರಿರೋ ಯೋಗೇಶ್‌‌ಗೆ ದೊಡ್ಮನೆಯ ಲಿವಿಂಗ್ ಲೆಜೆಂಡ್ ಜೊತೆ ತಮಿಳಿನ ಸ್ಟಾರ್ ಡೈರೆಕ್ಟರ್ಸ್ ಎಲ್ಲಾ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಕಿಂಗ್ ಟೀಸರ್ ಸಮೇತ ಅದ್ರ ಕಹಾನಿ ನಿಮಗಾಗಿ.

ಲೂಸ್ ಮಾದ ಯೋಗಿ..ಕನ್ನಡದ ಮೋಸ್ಟ್ ವರ್ಸಟೈಲ್ ಹಾಗೂ ಪ್ರತಿಭಾವಂತ ನಟ. ಈಗ ಕರುನಾಡ ಸುಲ್ತಾನನಾಗಿ ಮಿಂಚು ಹರಿಸುತ್ತಿದ್ದಾರೆ. ಯೋಗಿ ನಟನೆಯ 50ನೇ ಚಿತ್ರ ಕಿಂಗ್ ಟೈಟಲ್‌‌ನ ಸ್ಯಾಂಡಲ್‌‌ವುಡ್ ಕಿಂಗ್ ಡಾ ಶಿವರಾಜ್ ಕುಮಾರ್ ಅನಾವರಣ ಮಾಡಿದ್ರು. ಚಿತ್ರವನ್ನ ಜಾಕ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು, ಮಹೇಂದರ್, ಸಿದ್ದೇಶ್, ಸಂತೋಷ್ ಬಸವರಾಜ್, ವಿಶಾಲ್ ಪ್ರಸಾದ್, ಮಲ್ಲಿಕಾರ್ಜುನ ಸ್ವಾಮಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಕಿಂಗ್ ಆದ ಯೋಗಿ.. ಶಿವಣ್ಣ, ತಮಿಳ್ ಡೈರೆಕ್ಟರ್ಸ್ ಏನಂದ್ರು ?

50ನೇ ಚಿತ್ರಕ್ಕೆ ಕರುನಾಡ ಸುಲ್ತಾನನಾದ ಲೂಸ್‌‌ಮಾದ ಯೋಗಿ

ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಕೂಡ ಟೀಸರ್ ಸಿದ್ದಗೊಂಡಿದ್ದು, ಮುಂದಿನ ಒಂದು ತಿಂಗಳಲ್ಲಿ ಚಿತ್ರೀಕರಣಕ್ಕೆ ತೆರಳಲು ಚಿತ್ರತಂಡ ಸಜ್ಜಾಗಿದೆ. ಯೋಗಿ ಹಿಂದೆಂದೂ ಕಾಣದ ರೀತಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಮಾತನಾಡಿ ಕಿಂಗ್ ಚಿತ್ರದಲ್ಲಿ ರಕ್ತಸಿಕ್ತ ಅಧ್ಯಾಯ ಮಾತ್ರವಲ್ಲ ಎಮೋಷನ್ ಕೂಡ ಇದೆ. ಕಪಾಲಿಯಲ್ಲಿ ಓಂ, ಜೋಗಿ ಸೇರಿದಂತೆ ಅನೇಕ ಚಿತ್ರಗಳು ಯಶಸ್ಸು ಕಂಡಿವೆ. ಯೋಗಿಯ ನಂದ ಲವ್ಸ್ ನಂದಿತಾ ಕೂಡ ಹಿಟ್ ಆಗಿತ್ತು. ಹೀಗಾಗಿ ಕಪಾಲಿ ಮೇಲೆ ವಿಶೇಷ ಅಭಿಮಾನವಿದೆ. ಯೋಗಿ ನಟನೆಗೆ ನಾನು ದೊಡ್ಡ ಅಭಿಮಾನಿ. ಅಪ್ಪು ಜೊತೆ ಹುಡುಗರು ಚಿತ್ರದಲ್ಲಿ ನಟಿಸಿದ್ರು, ನನ್ನ ಜೊತೆಯೂ ನಟಿಸುತ್ತಿದ್ದಾರೆ. ಉತ್ತಮ ನಟ, ಒಳ್ಳೆಯದಾಗ್ಬೇಕು ಎಂದರು.

ಇದುವರೆಗೂ ಒಂದು ಲೆಕ್ಕ.. ಇನ್ಮುಂದೆ ಮತ್ತೊಂದು ಲೆಕ್ಕ.. ತಪ್ಪುಗಳನ್ನು ಸರಿ ಪಡಿಸಿಕೊಂಡಿದ್ದೇನೆ. ಕಿಂಗ್ ನನ್ನ ವೃತ್ತಿ ಜೀವನದ 50ನೇ ಚಿತ್ರ. ಸಿನಿಮಾದಲ್ಲಿ ಬೇರೆ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಿರ್ದೇಶಕ ಜಾಕ್ ಕಥೆ ಹೇಳಿದಾಗ ಥ್ರಿಲ್ ಆದೆ. ಬಜೆಟ್ ಕೇಳಿ ಒಂದು ಕ್ಷಣ ಅವಕ್ಕಾದೆ. ಅಂತಹ ಸಮಯದಲ್ಲಿ ನಿರ್ಮಾಪಕರು ಸಿಕ್ಕರು. ಎಲ್ಲರಿಗೂ ಇಷ್ಟವಾಗುವ ಸಿನಿಮಾ ನೀಡುತ್ತೇವೆ ಅಂದ್ರು.

ಆ್ಯಕ್ಷನ್ ವಿತ್ ಎಮೋಷನ್ ಕಥೆ..ತ್ರಿಭಾಷೆಯಲ್ಲಿ ಕಿಂಗ್ ಕಿಚ್ಚು

ಸೋತಿದ್ದೇನೆ ಆದ್ರೆ ಸತ್ತಿಲ್ಲ ಎಂದಿದ್ದ ಲೂಸ್‌ಮಾದ ಯೋಗೇಶ್

ಬಾಲಿವುಡ್ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಕಲಾವಿದರು ಚಿತ್ರದಲ್ಲಿದ್ದಾರೆ. ಕಥೆ ಮಾಡಿಕೊಳ್ಳುವಾಗಲೇ ನಟ ಯೋಗಿ ನಟಿಸಿದ್ರೆ ಚೆಂದ ಅಂತ ಅವ್ರಿಗೆ ಕಥೆ ಹೇಳಿ ಸಿನಿಮಾ ಮಾಡುತ್ತಿದ್ದೇನೆ ಅಂತಾರೆ ಡೈರೆಕ್ಟರ್.

ಮಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಆಗಲಿದೆ. ಇದು ಬರೀ ಆಕ್ಷನ್ ಅಷ್ಟೇ ಅಲ್ಲ, ಕಣ್ಣೀರಿನ ಕಥೆಯನ್ನು ಸಹ ಹೇಳಲಿದೆ. ಅದನ್ನ ಟೀಸರ್‍ನಲ್ಲಿ ತೋರಿಸಲಾಗಿದೆ. ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರತಾಪ್ ನಾರಾಯಣ್ ಕಾಣಸಿಗಲಿದ್ದು, ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದೆ.

ಶಶಾಂಕ್ ಶೇಷಗಿರಿ ಸಂಗೀತ ಇರಲಿದ್ದು, ಮೂರು ಹಾಡುಗಳು ಈ ಚಿತ್ರದ ಆಲ್ಬಮ್‌‌ನಲ್ಲಿ ಇರಲಿವೆಯಂತೆ. ನಿರ್ಮಾಪಕರಾದ ಸಂತೋಷ್ ಬಸವರಾಜ್, ಮಲ್ಲಿಕಾರ್ಜುನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ವೇಳೆ ಹಿರಿಯ ನಿರ್ಮಾಪಕರಾದ ದುನಿಯಾ ಖ್ಯಾತಿಯ ಟಿ ಪಿ ಸಿದ್ದರಾಜ್, ಭಾಮಾ ಹರೀಶ್, ಕೃಷ್ಣೇಗೌಡ ಸೇರಿದಂತೆ ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು. ಅಲ್ಲದೆ, ಫಸ್ಟ್‌ಲುಕ್ ಟೀಸರ್‌‌ನ ತಮಿಳಿನ ಸೆನ್ಸೇಷನಲ್ ಡೈರೆಕ್ಟರ್ಸ್ ಆದಂತಹ ಮಾರಿ ಸೆಲ್ವರಾಜ್, ಪಾ ರಂಜಿತ್ ಹಾಗೂ ಜಿ ವಿ ಪ್ರಕಾಶ್ ಕುಮಾರ್ ಲಾಂಚ್ ಮಾಡಿ ಬೆಸ್ಟ್ ವಿಶಸ್ ಹೇಳಿದ್ದಾರೆ.

 

 

Exit mobile version