‘ರಾಂಧವ’ನ ಜೊತೆ ಯೋಗರಾಜ್ ಭಟ್ ‘ಹಲೋ 123’

ಮಗಳೇ ಲಕ್ಕಿ ಛಾರ್ಮ್..ಭುವನ್ ಪೊನ್ನಣ್ಣ ಈಸ್ ಬ್ಯಾಕ್

Web (83)

ವಿಕಟಕವಿ ಯೋಗರಾಜ್ ಭಟ್ ನ್ಯೂ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಸ್ಯಾಂಡಲ್‌ವುಡ್ ರಾಂಧವನ ಜೊತೆ ಹಲೋ 123 ಅಂತಿರೋ ಭಟ್ರು, ಈ ಬಾರಿ ಏನೆಲ್ಲಾ ಪ್ರಯೋಗ ಮಾಡೋಕೆ ಹೊರಟಿದ್ದಾರೆ..? ಯಾವ ಜಾನರ್, ಯಾರೆಲ್ಲಾ ಇದ್ದಾರೆ ಅನ್ನೋದನ್ನ ಮುಹೂರ್ತ ಝಲಕ್ ಸಮೇತ ನೋಡಿ. ಅದರೊಟ್ಟಿಗೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್‌ವುಡ್ ಅಪ್ಡೇಟ್ಸ್‌ ಇಲ್ಲಿದೆ.

ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಹಾಗೂ ಮ್ಯೂಸಿಕ್ ಮಾಂತ್ರಿಕ ವಿ. ಹರಿಕೃಷ್ಣ ಕಾಂಬಿನೇಷನ್‌‌ನಲ್ಲಿ ಭುವನ್ ಪೊನ್ನಣ್ಣ ಸ್ಯಾಂಡಲ್‌ವುಡ್‌ಗೆ ರೀ-ಎಂಟ್ರಿ ಕೊಡ್ತಿದ್ದಾರೆ. ಭುವನ್ ಹಾಗೂ ಭಟ್ರ ಹೊಸಚಿತ್ರಕ್ಕೆ ಹಲೋ 123 ಅನ್ನೋ ಡಿಫರೆಂಟ್ ಟೈಟಲ್ ಕೂಡ ಫಿಕ್ಸ್ ಆಗಿದೆ. ಅಮೃತಾ ಸಿನಿ ಕ್ರಾಫ್ಟ್ ಲಾಂಛನದಲ್ಲಿ ಅಮೃತಾ ವಿಜಯ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಲಿದ್ದು, ಹರ್ಷಿಕಾ ಭುವನ್ ಪುತ್ರಿ ತ್ರಿದೇವಿಯ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ನೀಡಲಾಯಿತು.

‘ರಾಂಧವ’ನ ಜೊತೆ ಯೋಗರಾಜ್ ಭಟ್ ‘ಹಲೋ 123’

ಮಗಳೇ ಲಕ್ಕಿ ಛಾರ್ಮ್.. ಭುವನ್ ಪೊನ್ನಣ್ಣ ಈಸ್ ಬ್ಯಾಕ್

ರಾಂಧವ ಸಿನಿಮಾದಿಂದ ಸ್ಯಾಂಡಲ್‌ವುಡ್‌‌ನಲ್ಲಿ ದೊಡ್ಡದಾಗಿ ನಿಲ್ಲೋ ಭರವಸೆ ಹುಟ್ಟಿಸಿದ್ರು ನಟ ಭುವನ್ ಪೊನ್ನಣ್ಣ. ಈ ಬಾರಿ ಗ್ಯಾರಂಟಿಯಾಗಿ ಗೆದ್ದೇ ಗೆಲ್ಲುವೆ ಅನ್ನೋ ಭರವಸೆಯೊಂದಿಗೆ, ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ರೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹಲೋ 123 ಅನ್ನೋ ವಿಶೇಷ ಕಥಾಹಂದರದ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಯೋಗರಾಜ್ ಭಟ್ ಮತ್ತು ಹರಿಕೃಷ್ಣ ವಿನೂತನ ಕಥೆಯೊಂದನ್ನ ಭುವನ್ ಮೂಲಕ ಹೇಳೋದಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ನಿರ್ಮಾಪಕರ ಮನೆಯಂಗಳದಲ್ಲಿ ಅಧಿಕೃತ ಸ್ಕ್ರಿಪ್ಟ್ ಪೂಜೆ ಹಾಗೂ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪುತ್ರಿ ತ್ರಿದೇವಿಯವ್ರ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

ದೇವರ ಪೂಜೆಯೊಂದಿಗೆ ನಾಯಕ ಭುವನ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣರವರಿಗೆ ಅಡ್ವಾನ್ಸ್ ಕೊಟ್ಟು ಶುಭಕೋರಿದ್ರು‌ ನಿರ್ಮಾಪಕರು. ಭಟ್ರು ಅಮೆರಿಕ ಪ್ರವಾಸ ಹೊರಟಿದ್ದು, ವಾಪಸ್ ಬಂದ ಕೂಡ್ಲೇ ಚಿತ್ರದ ಉಳಿದ ಕೆಲಸಗಳು ಶುರುವಾಗಲಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆಯಂತೆ.

Exit mobile version