‘ಟಾಕ್ಸಿಕ್’ ಇಷ್ಟಪಟ್ಟವರಿಗೂ ಥ್ಯಾಂಕ್ಸ್, ಇಷ್ಟಪಡದವರಿಗೂ ಥ್ಯಾಂಕ್ಸ್: ಯಶ್

Untitled design (29)

ಟಾಕ್ಸಿಕ್ ಆ್ಯಕ್ಷನ್‌‌‌ಗೆ ಪ್ರೇಕ್ಷಕ ಪ್ರಭು ನೀಡಿದ ರೆಸ್ಪಾನ್ಸ್‌ಗೆ ರಿಯಾಕ್ಷನ್ ಕೂಡ ನೀಡಿದ ರಾಕಿಂಗ್ ಸ್ಟಾರ್.. ವಿಎಫ್‌‌ಎಕ್ಸ್ ಮಿಸ್ಟೇಕ್ಸ್ ಸೇರಿದಂತೆ ಕೊಂಕು ಹುಡುಕುವವರಿಗೆ ಮಾಸ್ಟರ್‌ ಕ್ಲಾಸ್ ಸ್ಪೀಚ್ ನೀಡಿದ್ರು. ಅಪಾರ ಅಭಿಮಾನಿ ಬಳಗದ ಜೊತೆ IPS ಆಫೀಸರ್‌‌ಗಳೇ ಯಶ್ ಜೊತೆ ಫೋಟೋಗೆ ಮುಗಿಬಿದ್ದ ಅವಿಸ್ಮರಣೀಯ ಕ್ಷಣಗಳ ಜೊತೆ ರಾಕಿಭಾಯ್ ಮಾತುಗಳನ್ನ ಒಮ್ಮೆ ಕಣ್ತುಂಬಿಕೊಳ್ಳಿ.

ಯಶ್ ಒಂದೊಂದು ಮಾತು ಕೂಡ ಅದ್ಭುತ, ಅಮೋಘ, ಅದ್ವಿತೀಯ. ಹೌದು.. ಬಹಳ ಬೇಗ ನಿಮ್ಮನ್ನೆಲ್ಲಾ ಮೀಟ್ ಮಾಡಿದೆ ಅನ್ನೋ ಫೀಲಿಂಗ್ ಇದೆ. ಎರಡು ತಿಂಗಳ ಹಿಂದೆ ಬಂದು ಹೋಗಿದ್ದೆ. ನಾವು ಮಾಡಿದ ಕೆಲಸದ ಕುರಿತು ಮಾತಾಡಿದ್ದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಬೇಕು ಅಂದಿದ್ದೆ. ಅದನ್ನ ತೋರಿದ್ದಕ್ಕಾಗಿ ಧನ್ಯವಾದ. ಟಾಕ್ಸಿಕ್ ಇಷ್ಟ ಪಟ್ಟವರಿಗೂ ಥ್ಯಾಂಕ್ಸ್.. ಇಷ್ಟ ಪಡದವರಿಗೂ ಥ್ಯಾಂಕ್ಸ್. ಆದ್ರೆ ನೀವು ಪ್ರೀತಿಯಿಂದ ಬಂದು ನನ್ನ, ನನ್ನ ಕೆಲಸ ನೋಡಿದ್ರಿ ಅಷ್ಟೇ ಸಾಕು. ಸಿನಿಮಾ ಅನ್ನೋದು ಲಾಂಗ್ ಟರ್ಮ್ ಗೇಮ್. ನಿಮ್ಮನ್ನ ರಂಜಿಸುವುದೊಂದೇ ನಮ್ಮ ಗುರಿ ಅಂದ್ರು ಯಶ್.

ಬಾಹುಬಲಿ, RRR, ತೆಲುಗು ಸ್ಟಾರ್ಸ್ ನೆನೆದ ಯಶ್..!

ರೀಜನಲ್ ಸಿನಿಮಾಗಳು ಯಾವ ಲೆವೆಲ್‌ಗೆ ಬೇಕಾದ್ರೂ ಹೋಗಬಹುದು ಅನ್ನೋದನ್ನ ರಾಜಮೌಳಿ, ಪ್ರಭಾಸ್ ಅವರ ಬಾಹುಬಲಿ.. ತಾರಕ್-ರಾಮ್‌ಚರಣ್ ಅವರ ತ್ರಿಬಲ್ ಆರ್ ಸಿನಿಮಾಗಳು ಪ್ರೂವ್ ಮಾಡಿದ್ವು. ತೆಲುಗು ಇಂಡಸ್ಟ್ರಿ ಭಾರತೀಯ ಚಿತ್ರರಂಗದಲ್ಲಿ ಎಂತಹ ಜಾದೂ ಮಾಡಬಹುದು ಅನ್ನೋದನ್ನ ತೋರಿಸಿತು. ಬಾಲಿವುಡ್ ಕೂಡ ಸೌತ್ ಚಿತ್ರರಂಗದ ಜೊತೆ ಒಡಂಬಡಿಕೆಯಿಂದ ಸಿನಿಮಾಗಳನ್ನ ಮಾಡ್ತಿದೆ. ಅದೊಂಥರಾ ಪರಸ್ಪರ ಆಗಿದೆ ಅಂತ ಅಭಿಪ್ರಾಯ ಪಟ್ಟರು.

ದಿಲ್‌ರಾಜು ಜೊತೆ 3ನೇ ಕೊಲ್ಯಾಬೊರೇಷನ್ ಎಂದ ಯಶ್, ರಾಮಾಯಣ ತೆಲುಗು ಡೈಲಾಗ್ಸ್ ಬಗ್ಗೆ ಅವರು ತಲೆ ಕೆಡಿಸಿಕೊಂಡ ಪರಿಯನ್ನ ನೆನೆದರು. ನಿತೇಶ್ ತಿವಾರಿ ಅವರು ಕೆಲಸ ಮಾತ್ರ ಮಾಡ್ತಾರೆ.. ಆದ್ರೆ ಯಾರಿಗೂ ಕಾಣಿಸಿಕೊಳ್ಳಲ್ಲ. ಅವರ ಜ್ಞಾನವನ್ನ ಬಣ್ಣಿಸಲಾಗದು. ಅವರ ಆರ್ಟ್ ಅದ್ಭುತ. ಶ್ರೀರಾಮನ ಸರಳತೆ.. ರಾವಣನ ಅಟ್ರಾಸಿಟಿಯನ್ನ ಅದ್ಭುತವಾಗಿ ತೆರೆಗೆ ತಂದಿದ್ದಾರೆ ಎಂದರು ರಾಕಿಂಗ್ ಸ್ಟಾರ್.

ರಾಕಿಭಾಯ್ ರಾಕಿಭಾಯ್ ಅಂತ ಕೂಗಿದ ಫ್ಯಾನ್ಸ್‌‌ನ ಸಮಾಧಾನಿಸಿದ ಯಶ್.. ರಾಕಿ ಅಲ್ಲ ಇರಪ್ಪ.. ರಾವಣ ಈಗ ಅಂತ ಮಾತು ಮುಂದುವರೆಸಿದ್ರು. ರಕುಲ್ ತೆಲುಗು ಅಮ್ಮಾಯಿ. ಆಕೆಯ ವೈಭವದ ನಟನೆ ಮಿಸ್ ಮಾಡ್ಕೋಬೇಡಿ. ರವಿ ದುಬೆ ಪರಿಪಕ್ವವಾದ ನಟ ಹಾಗೂ ಒಳ್ಳೆಯ ವ್ಯಕ್ತಿತ್ವವುಳ್ಳವರು. ಅವರು ನೋಡುಗರಿಗೆ ಬಹುದೊಡ್ಡ ಸರ್‌‌ಪ್ರೈಸ್ ಕೊಡ್ತಾರೆ. ಹೆಮ್ಮೆ ತರಿಸುತ್ತಾರೆ ಅಂತ ರಾಮಾಯಣದ ಕಲಾವಿದರನ್ನ ಕೊಂಡಾಡಿದ್ರು.

ಸಾಯಿ ಪಲ್ಲವಿ ಫೆಮಿನೈನ್ ಎನರ್ಜಿ.. ಸೀತಾಮಾತೆಯಾಗಿ ದೈವಿಕತೆಯಲ್ಲಿ ಮುಳುಗಿ ಹೋಗಿರ್ತಾರೆ. ಸೀತೆಯಾಗಿ ನಟಿಸೋದು ಸುಲಭದ ವಿಷಯವಲ್ಲ. ಅಂಥದ್ದೊಂದು ಕಳೆ, ಕಲೆ ಅವರಲ್ಲಿದೆ. ತಾಯಿ ಫೀಲ್ ಕೊಡೋ ಅಂತಹ ನಟಿ ಆಕೆ ಅಂತ ಬಹುಭಾಷಾ ನಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಯಶ್.

ರಣ್ಬೀರ್ ಬಹಳ ಅದ್ಭುತ ವ್ಯಕ್ತಿ.. ಝೀರೋ ಪರ್ಸೆಂಟ್ ಈಗೋ ವ್ಯಕ್ತಿತ್ವ. ನಾವು ಸಾಕಷ್ಟು ಕಡೆ ಪ್ರಮೋಷನ್ಸ್‌‌ಗೆ ಓಡಾಡ್ತಿದ್ದೀವಿ. ಅವರು ಒಂಥರಾ ಮುಗ್ಧರು. ಮಗು ತರಹದ ಮನಸ್ಸು. ನೀವು ಈಗಾಗಲೇ ಅವರಿಗೆ ಸಾಕಷ್ಟು ಪ್ರೀತಿ ತೋರಿದ್ದೀರಿ. ಈ ಸಿನಿಮಾಗೂ ಅದೇ ರೀತಿಯ ಸಹಕಾರ ಇರಲಿ. ಅತ್ಯದ್ಭುತವಾಗಿ ನಟಿಸಿದ್ದಾರೆ ಎಂದರು.

ತಮ್ಮ ಪ್ರೊಡ್ಯೂಸರ್ ನಿಮಿತ್ ಮಲ್ಹೋತ್ರಾ ಎಂತಹ ದೊಡ್ಡ ಬ್ಯುಸಿನೆಸ್‌‌ಮ್ಯಾನ್ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಯಶ್.. ಅವರಿಗೆ ಸಾಲು ಸಾಲು ಆಸ್ಕರ್ ಅವಾರ್ಡ್ಸ್ ಬರ್ತಿದ್ರೂ ಸಹ ಖುಷಿ ಇಲ್ಲ. ಯಾಕಂದ್ರೆ ಅವು ನಮ್ಮ ಇಂಡಿಯನ್ ಸಿನಿಮಾಗೆ ಬರಬೇಕು ಅನ್ನೋದು ಅವರ ಆಶಯ ಆಗಿತ್ತು. ಆ ದಿನವೇ ನಾನು ಅವರೊಂದಿಗೆ ಕೈ ಜೋಡಿಸಲು ನಿರ್ಧರಿಸಿದೆ ಅಂತ ಆ ಬಿಗ್ ಸೀಕ್ರೆಟ್ ರಿವೀಲ್ ಮಾಡಿದ್ರು ನಮ್ಮ ಕನ್ನಡಿಗ.

ಒಟ್ಟಾರೆ.. ಪ್ರಯತ್ನಗಳು ಹಾಗೂ ಪ್ರಯೋಗಗಳು ಆದಾಗ ಅವುಗಳನ್ನ ಪ್ರೋತ್ಸಾಹಿಸಿ. ವಿಎಫ್‌ಎಕ್ಸ್ ಅದು ಇದು ಅಂತ ಕಾಲೆಳೆಯಬೇಡಿ ಅಂತ ಆಡಿಕೊಳ್ಳೋರಿಗೂ ಬಿಗ್ ಕೌಂಟರ್ ನೀಡಿದ್ರು ಯಶ್. ಒಟ್ಟಾರೆ ರಾಮಾಯಣ ಬರೀ ಸಿನಿಮಾ ಅಲ್ಲ. ಅದೊಂದು ಎಮೋಷನ್. ಅದಕ್ಕಾಗಿ ಈ ಟೀಂ ಹಾಕಿರೋ ಎಫರ್ಟ್ ಅಷ್ಟಿಷ್ಟಲ್ಲ. ಅದನ್ನ ಸಾಕಾರಗೊಳಿಸೋದು ಚಿತ್ರಪ್ರೇಮಿಗಳಲ್ಲಿದೆ. ನವೆಂಬರ್ 5ಕ್ಕೆ ರಾಮಾಯಣ ಪಾರ್ಟ್-1 ನಿಮ್ಮ ನೆಚ್ಚಿನ ಥಿಯೇಟರ್‌‌ಗಳಲ್ಲಿ ರಾರಾಜಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version