ಗೌರಿ- ಗಣೇಶ ಹಬ್ಬದ ಪ್ರಯುಕ್ತ ಟಾಕ್ಸಿಕ್ ಸಿನಿಮಾದಿಂದ ರಾಕಿಂಗ್ ಖಬರ್ ಸಿಕ್ಕಿದೆ. ರಾಮಾಯಣ ಟೈಟಲ್ ಟೀಸರ್‌ನಿಂದ ಎಲ್ಲರ ಹುಬ್ಬೇರಿಸಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಬಹುನಿರೀಕ್ಷಿತ ಟಾಕ್ಸಿಕ್ ಅಡ್ಡಾಗೆ ಮರಳಿದ್ದಾರೆ. ಹಾಲಿವುಡ್ ಲೆಜೆಂಡ್ ಜೆಜೆ ಪೆರ್ರಿ ಜೊತೆಗೂಡಿ ಬಿಗ್ ಸಿಗ್ನಲ್ ನೀಡಿದ್ದಾರೆ. ಅದೇನು ಅನ್ನೋದ್ರ ಎಕ್ಸ್‌ಕ್ಲೂಸಿವ್, ಇನ್‌ಸೈಡ್ ಸ್ಟೋರಿ ಇಲ್ಲಿದೆ.
- ಯಶ್ ಮ್ಯಾಜಿಕ್.. ಟಾಕ್ಸಿಕ್ ಅಡ್ಡಾದಿಂದ ರಾಕಿಂಗ್ ಖಬರ್
- ಹಾಲಿವುಡ್ ಮಾಸ್ಟರ್ಪೀಸ್ ಚಿತ್ರಗಳ ಟೆಕ್ನಿಷಿಯನ್ ಕೈಚಳಕ
- ಅಮೆರಿಕಾಗೆ ತೆರಳಿ ಸ್ಟಂಟ್ಸ್ ಪ್ರಾಕ್ಟೀಸ್ ಮಾಡಿ ಬಂದಿದ್ದ ಯಶ್
- 45ದಿನ ಟಾಕ್ಸಿಕ್ ಸ್ಟಂಟ್ಸ್.. ಹಾಲಿವುಡ್ ಲೆಜೆಂಡ್ ಪೆರ್ರಿ ರಾಕ್ಸ್
ಟಾಕ್ಸಿಕ್.. ಹೆಮ್ಮೆಯ ಕನ್ನಡಿಗ, ಯಂಗೆಸ್ಟ್ ಸೂಪರ್ ಸ್ಟಾರ್ ಯಶ್ ಕರಿಯರ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ಸಿಂಗಲ್ ಟೀಸರ್‌ನಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರೋ ಟಾಕ್ಸಿಕ್, ಇದೀಗ ಮೇಕಿಂಗ್ ಹಂತದಲ್ಲೇ ಭಾರತೀಯ ಚಿತ್ರರಂಗ ಮಂದಿ ನೆಬ್ಬೆರಗಾಗುವಂತೆ ಮಾಡ್ತಿದೆ. ಅದಕ್ಕೆ ಕಾರಣ ಚಿತ್ರದ ತಾರಾಗಣ, ಟೆಕ್ನಿಷಿಯನ್ಸ್, ಬಜೆಟ್, ತಯಾರಾಗ್ತಿರೋ ಸ್ಕೇಲ್.
ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ತಯಾರಾಗ್ತಿರೋ ಟಾಕ್ಸಿಕ್ ಸಿನಿಮಾ ಗೋವಾದ ಡ್ರಗ್ ಮಾಫಿಯಾ ಮೇಲೆ ಕೇಂದ್ರೀಕೃತವಾಗಿದ್ದು, ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಬಹುದೊಡ್ಡ ತಾರಾಗಣದಲ್ಲಿ ಚಿತ್ರ ಸಿದ್ಧವಾಗ್ತಿದ್ದು, ಯಶ್ ಇತ್ತೀಚೆಗೆ ರಾಮಾಯಣ ಚಿತ್ರದ ಟೈಟಲ್ ಟೀಸರ್‌ನಿಂದ ಗುಡ್‌ನ್ಯೂಸ್ ನೀಡಿದ್ರು. ಆದ್ರೀಗ ಹಬ್ಬದ ಹಿನ್ನೆಲೆ ಟಾಕ್ಸಿಕ್ ಖಬರ್ ನೀಡಿದ್ದಾರೆ.
ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ಹಾಲಿವುಡ್ ಲೆಜೆಂಡ್ ಸ್ಟಂಟ್ ಮಾಸ್ಟರ್ ಜೆ ಜೆ ಪೆರ್ರಿ ಜೊತೆಗಿನ ಸ್ಟಿಲ್ ಫೋಟೋಸ್ ಶೇರ್ ಮಾಡಿದ್ದಾರೆ. ಹೌದು.. ಹಾಲಿವುಡ್‌ನ ನೂರಾರು ಕೋಟಿ ಬಜೆಟ್ ಸಿನಿಮಾಗಳಿಗೆ ಕೆಲಸ ಮಾಡಿರೋ ಖ್ಯಾತ ನಟ ಕಮ್ ಸ್ಟಂಟ್ ಮಾಸ್ಟರ್ ಪೆರ್ರಿ ಟಾಕ್ಸಿಕ್ ಅಡ್ಡಾಗೆ ಬಂದಿರೋದು ಗೊತ್ತೇಯಿದೆ. ಆದ್ರೀಗ ಅಫಿಶಿಯಲಿ ಸಾಹಸ ದೃಶ್ಯಗಳನ್ನು ಚಿತ್ರಿಸೋಕೆ ಟೀಂ ಸಜ್ಜಾಗಿದೆ.
ಬರೋಬ್ಬರಿ 45 ದಿನಗಳ ಕಾಲ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನ ಚಿತ್ರಿಸ್ತಿರೋ ಯಶ್-ಪೆರ್ರಿ ಕಾಂಬೋ, ಇಂಡಿಯಾದಲ್ಲೇ ಬಿಗ್ಗೆಸ್ಟ್ ಆ್ಯಕ್ಷನ್ ಬ್ಲಾಕ್ಸ್‌ನ ಕಟ್ಟಿಕೊಡೋ ಧಾವಂತದಲ್ಲಿದ್ದಾರೆ. ಜಾನ್ ವಿಕ್ ಸೇರಿದಂತೆ ಹಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾಗಳ ಆ್ಯಕ್ಷನ್ ಮಾಸ್ಟರ್‌ಮೈಂಡ್ ಪೆರ್ರಿ, ನಮ್ಮ ಯಶ್ ಜೊತೆ ಕೈ ಜೋಡಿಸಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಅಂದಹಾಗೆ ಪೆರ್ರಿ ಕನ್ನಡಕ್ಕೆ ಬರೋದು ಮೊದಲೇ ನಿಶ್ಚಯವಾಗಿತ್ತು. ಸಿನಿಮಾ ಸೆಟ್ಟೇರುವ ಮೊದಲೇ ಯಶ್ ಅಮೆರಿಕಾಗೆ ತೆರಳಿ, ಸ್ಟಂಟ್ಸ್ ಪ್ರಾಕ್ಟೀಸ್ ಮಾಡಿದ್ರು. ಈಗ ಅದನ್ನ ತೆರೆಗೆ ತರೋಕೆ ಸಜ್ಜಾಗಿದೆ ಈ ಬಿಗ್ ಕಾಂಬೋ.
ಬಾಲಿವುಡ್‌ನ ಕಿಯಾರಾ, ತಮಿಳಿನ ನಯನತಾರಾ, ಕನ್ನಡದ ರುಕ್ಮಿಣಿ ವಸಂತ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಈಗಾಗ್ಲೇ ಈ ಚಿತ್ರದ ತಾರಾಗಣದಲ್ಲಿದ್ದು, ಅತೀವ ನಿರೀಕ್ಷೆ ಮೂಡಿಸಿದೆ. ಸಿಕ್ಕಾಪಟ್ಟೆ ಬಿಗ್ ಸ್ಕೇಲ್‌ನಲ್ಲಿ ತಯಾರಾಗ್ತಿರೋ ಟಾಕ್ಸಿಕ್, ಕೆಜಿಎಫ್ ಬಾಕ್ಸ್ ಆಫೀಸ್ ರೆಕಾರ್ಡ್‌ಗಳನ್ನ ಬ್ರೇಕ್ ಮಾಡೋ ಲಕ್ಷಣ ತೋರಿದೆ. ಸೋ.. 2026ರ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರ್ತಿದ್ದು, ಅಲ್ಲಿಯವರೆಗೂ ಮೇಕಿಂಗ್ ಕಹಾನಿಗಳಿಂದ ಸಂಭ್ರಮಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್