ಬಿಗ್ ಅಪ್ಡೇಟ್.. ಜೂ-4ಕ್ಕೆ ಟಾಕ್ಸಿಕ್.. ಜೂ.19ಕ್ಕೆ ಜನನಾಯಗನ್

ಯಶ್, ವಿಜಯ್ ಫ್ಯಾನ್ಸ್‌ಗೆ ಬ್ಯಾಕ್ ಟು ಬ್ಯಾಕ್ ಡಬಲ್ ಧಮಾಕ

Untitled design 2026 03 09T161849.560

ಒಂದೇ ಪ್ರೊಡಕ್ಷನ್ ಬ್ಯಾನರ್‌ನಡಿ ತಯಾರಾದ ಎರಡು ಬಿಗ್ ಸ್ಟಾರ್, ಬಿಗ್ ಬಜೆಟ್, ಬಿಗ್ ಸ್ಕೇಲ್ ಮೂವಿಗಳ ರಿಲೀಸ್ ಪೋಸ್ಟ್‌‌ಪೋನ್ ಆಗಿತ್ತು. ಇದ್ರಿಂದ ರಾಕಿಂಗ್ ಸ್ಟಾರ್ ಯಶ್ ಜೊತೆ ದಳಪತಿ ವಿಜಯ್ ಫ್ಯಾನ್ಸ್ ಕೂಡ ನಿರಾಸೆಗೊಂಡಿದ್ರು. ಆದ್ರೀಗ ಟಾಕ್ಸಿಕ್ & ಜನನಾಯಗನ್ ಎರಡರ ವೆರಿ ವೆರಿ ಬಿಗ್ ಅಪ್ಡೇಟ್ ನೀಡಿದೆ.

ಸುನಾಮಿ ಬರೋಕೆ ಮುನ್ನ ಕಡಲು ತುಂಬಾ ಪ್ರಶಾಂತವಾಗಿರುತ್ತಂತೆ. ಅದೇ ರೀತಿ ಎರಡು ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್‌‌ಗಳು ವಿಶ್ವ ಸಿನಿದುನಿಯಾಗೆ ಬರೋಕೆ ಸಜ್ಜಾಗಿದ್ದವು. ಒಂದು ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಮತ್ತೊಂದು ದಳಪತಿ ವಿಜಯ್ ನಟನೆಯ ಜನ ನಾಯಗನ್. ಆದ್ರೆ ಕಾರಣಾಂತರಗಳಿಂದ ಎರಡೂ ಸಿನಿಮಾಗಳ ಬಿಡುಗಡೆ ಪೋಸ್ಟ್‌‌ಪೋನ್ ಆಯ್ತು. ಇದ್ರಿಂದ ಚಿತ್ರತಂಡಗಳು, ಸ್ಟಾರ್‌‌ಗಳ ಫ್ಯಾನ್ಸ್ ಅಷ್ಟೇ ಅಲ್ಲ, ಚಿತ್ರಪ್ರೇಮಿಗಳು ಕೂಡ ಬೇಸರಗೊಂಡರು.

ಬಿಗ್ ಅಪ್ಡೇಟ್.. ಜೂ-4ಕ್ಕೆ ಟಾಕ್ಸಿಕ್.. ಜೂ.19ಕ್ಕೆ ಜನನಾಯಗನ್

ಯಶ್, ವಿಜಯ್ ಫ್ಯಾನ್ಸ್‌ಗೆ ಬ್ಯಾಕ್ ಟು ಬ್ಯಾಕ್ ಡಬಲ್ ಧಮಾಕ

ಟಾಕ್ಸಿಕ್ ರಿಲೀಸ್‌ಗೆ ಇರಾಣ್-ಇಸ್ರೇಲ್ ಯುದ್ಧ ಸಮಸ್ಯೆಯಾಗಿ ಮಾರ್ಚ್‌ 19ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಯಶ್ ನಟನೆಯ ಟಾಕ್ಸಿಕ್, ಟೀಸರ್‌‌ಗಳಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಪ್ರೀ ರಿಲೀಸ್ ಬ್ಯುಸಿನೆಸ್ 1000 ಕೋಟಿ ಮಾಡಿದೆ ಅನ್ನೋ ಟಾಕ್ ಕೂಡ ಜೋರಾಗಿದೆ.

ಮತ್ತೊಂದ್ಕಡೆ ಪೊಂಗಲ್ ಹಬ್ಬಕ್ಕೇನೇ ಬರಬೇಕಿದ್ದ ದಳಪತಿ ವಿಜಯ್ ಅಭಿನಯದ ಜನ ನಾಯಗನ್‌ಗೆ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಆ ಕುರಿತು ಚಿತ್ರದ ನಿರ್ಮಾಪಕರಾದ ಕೆವಿಎನ್ ಹಾಗೂ ಸೆನ್ಸಾರ್ ಪರಸ್ಪರ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಇಂದು ರಿವೈಸ್ ಕಮಿಟಿ ಜನ ನಾಯಗನ್ ಚಿತ್ರ ವೀಕ್ಷಿಸುತ್ತಿದೆ. ಕೂಡಲೇ ಸೆನ್ಸಾರ್ ಪ್ರಮಾಣ ಪತ್ರ ನೀಡಿದ್ರೂ ಸಹ, ತಮಿಳುನಾಡು ಎಲೆಕ್ಷನ್ಸ್ ಇರೋದ್ರಿಂದ ಸಿನಿಮಾದ ಬಿಡುಗಡೆ ಆಫ್ಟರ್ ಎಲೆಕ್ಷನ್ಸ್ ಓನ್ಲಿ ಎನ್ನಲಾಗ್ತಿದೆ.

ಇಂದು ರಿವೈಸ್ ಕಮಿಟಿಯಿಂದ ಜನ ನಾಯಗನ್ ಚಿತ್ರ ವೀಕ್ಷಣೆ..!!

ಲೇಟ್ ಆದ್ರೂ ಲೇಟೆಸ್ಟ್ ಆಗಿ ಬರಲಿದೆ ಬಾಕ್ಸ್ ಆಫೀಸ್ ತೂಫಾನ್

ಸದ್ಯ ಗ್ಯಾರಂಟಿ ನ್ಯೂಸ್‌ಗೆ ಸಿಕ್ಕಿರೋ ಅಧಿಕೃತ ಮಾಹಿತಿ ಪ್ರಕಾರ ಜೂನ್ 4ಕ್ಕೆ ಯಶ್ ಟಾಕ್ಸಿಕ್ ತೆರೆಗೆ ಬಂದ್ರೆ, ಜೂನ್ 19ಕ್ಕೆ ಜನ ನಾಯಗನ್ ಬಿಗ್‌‌ಸ್ಕ್ರೀನ್‌ಗೆ ಬರಲಿದೆ. ಹೌದು.. ನಟ ವಿಜಯ್ ಬರ್ತ್ ಡೇ ಕೂಡ ಇರೋದ್ರಿಂದ ಅದೇ ಬೆಸ್ಟ್ ಟೈಮ್ ಹಾಗೂ ಚಾಯ್ಸ್ ಅನ್ನೋದು ಚಿತ್ರತಂಡದ ನಿರ್ಧಾರವಾಗಿದೆಯಂತೆ. ಅಲ್ಲಿಗೆ ಟಾಕ್ಸಿಕ್ ಬಂದ ಎರಡು ವಾರದ ನಂತ್ರ ಜನ ನಾಯಗನ್ ಎಂಟ್ರಿ ಕೊಡಲಿದೆ. ವಿಜಯ್ ಕಟ್ಟ ಕಡೆಯ ಸಿನಿಮಾ ಆಗಿರೋದ್ರಿಂದ ಸಹಜವಾಗಿಯೇ ನಿರೀಕ್ಷೆ ಜೋರಿದ್ದು, ಬಾಕ್ಸ್ ಆಫೀಸ್ ತೂಫಾನ್‌‌ ಆಗಲಿದೆ ಜನ ನಾಯಗನ್.

ಎರಡೂ ಚಿತ್ರಗಳನ್ನ ಕನ್ನಡದ ಪ್ರತಿಷ್ಠಿತ ಕೆವಿಎನ್ ನಿರ್ಮಾಣ ಸಂಸ್ಥೆ ನಿರ್ಮಿಸಿದೆ. ಟಾಕ್ಸಿಕ್ ಹಾಗೂ ಜನನಾಯಗನ್‌ಗಾಗಿ ಸಾವಿರಕ್ಕೂ ಅಧಿಕ ಕೋಟಿ ಹೂಡಿಕೆ ಮಾಡಿದೆ. ಹೀಗಾಗಿ ಜೂನ್‌‌ನಲ್ಲಿ ಕೆವಿಎನ್ ಖಜಾನೆ ತುಂಬೋದು ಗ್ಯಾರಂಟಿ. ಯಾಕಂದ್ರೆ ಕೆಜಿಎಫ್‌ನಿಂದ ವರ್ಲ್ಡ್ ವೈಡ್ ಯಶ್ ಫ್ಯಾನ್ ಫಾಲೋಯಿಂಗ್ ಇದೆ. ಸೋ.. ಬಾಕ್ಸ್ ಆಫೀಸ್‌‌ನಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪೈಸಾ ವಸೂಲ್ ಆಗುವ ಸಾಧ್ಯತೆ ಜಾಸ್ತಿ ಇದೆ. ಸೋ.. ಜೂನ್‌‌ನಲ್ಲಿ ಯಶ್ ಹಾಗೂ ವಿಜಯ್ ಫ್ಯಾನ್ಸ್‌ಗೆ ಡಬಲ್ ಧಮಾಕ ಕನ್ಫರ್ಮ್.

 

 

Exit mobile version