ಹೆಮ್ಮೆಯ ಕನ್ನಡಿಗ.. ಇಂಡಿಯನ್ ಸಿಇಓ.. ಇಂಡಿಯಾದ ಯಂಗೆಸ್ಟ್ ಸೂಪರ್ ಸ್ಟಾರ್ ಯಶ್ ನೆಕ್ಸ್ಟ್ ವೆಂಚರ್ ಚಂದ್ರಗುಪ್ತ ಮೌರ್ಯ. ಹೀಗೊಂದು ಸುದ್ದಿ ಸದ್ಯ ಎಲ್ಲೆಡೆ ಸಂಚಲನ ಮೂಡಿಸ್ತಿದೆ. ಧುರಂಧರ್ ಸ್ಟಾರ್ ರಣ್ವೀರ್ ಸಿಂಗ್.. ಕೆಜಿಎಫ್ ಸ್ಟಾರ್ ರಾಕಿಭಾಯ್ ಕಾಂಬೋನಲ್ಲಿ ಬರ್ತಿರೋ ಈ ಐತಿಹಾಸಿಕ ಕಥೆಗೆ ಸಾರಥಿ ಯಾರು..? ಏನಿದರ ಅಸಲಿ ಮರ್ಮ ಅಂತೀರಾ..? ಇಲ್ಲಿದೆ ಒಂದು ರಿಪೋರ್ಟ್.
- ಚಂದ್ರಗುಪ್ತ ಮೌರ್ಯನಾಗಿ ಯಶ್.. ರಾಕಿ ಜೊತೆ ರಣ್ವೀರ್?
- ಭಾರತವನ್ನ ಒಗ್ಗೂಡಿಸಿದ ಮೊದಲ ಸಾಮ್ರಾಟನಾಗಿ ಯಶ್..!
- ಧುರಂಧರ್ ಸ್ಟಾರ್-KGF ಸ್ಟಾರ್ಗೆ ಆದಿತ್ಯ ಧರ್ ಡೈರೆಕ್ಷನ್..!
- ಗಜಕೇಸರಿಯಲ್ಲಿ ಚಕ್ರವರ್ತಿಯಾಗಿ ಮಿಂಚು ಹರಿಸಿದ್ದ ಕನ್ನಡಿಗ
ಮೌರ್ಯ ಸಾಮ್ರಾಜ್ಯದ ಸ್ಥಾಪಕ, ಭಾರತವನ್ನ ಒಗ್ಗೂಡಿಸಿದ ನಿಜವಾದ ಸಾಮ್ರಾಟ ಚಂದ್ರಗುಪ್ತ ಮೌರ್ಯ. 20ನೇ ವಯಸ್ಸಿನಲ್ಲೇ ಅಲೆಕ್ಸಾಂಡರ್ ಸೈನ್ಯವನ್ನ ಸೋಲಿಸಿದ ಗರಿಮೆ ಇವರದ್ದು. ಮಗಧದ ನಂದ ವಂಶಕ್ಕೆ ಸೇರಿದ ಚಂದ್ರಗುಪ್ತ, ಚಾಣಾಕ್ಯನ ಬೆಂಬಲದಿಂದ ಬಹುದೊಡ್ಡ ಸಾಮ್ರಾಟನಾಗಿ ಖ್ಯಾತಿ ಪಡೆದವರು. ಪೂರ್ವದಲ್ಲಿ ಬೆಂಗಾಲ್-ಅಸ್ಸಾಂನಿಂದ ಹಿಡಿದು ಪಶ್ಚಿಮದಲ್ಲಿ ಆಫ್ಘಾನಿಸ್ತಾನ- ಬಲೂಚಿಸ್ತಾನದವರೆಗೆ, ಉತ್ತರದಲ್ಲಿ ವಾಯುವ್ಯ ಕಾಶ್ಮೀರ-ಈಶಾನ್ಯ ನೇಪಾಳದಿಂದ ಹಿಡಿದು ದಕ್ಷಿಣದ ಡೆಕ್ಕನ್ ಪ್ರಸ್ಥಭೂಮಿವರೆಗೆ ತನ್ನ ಮೌರ್ಯ ಸಾಮ್ರಾಜ್ಯವನ್ನ ವಿಸ್ತರಿಸಿದ್ದರು.
ಇತಿಹಾಸದ ಪುಟಗಳಲ್ಲಿ ಇಂದಿಗೂ ರಾರಾಜಿಸ್ತಿರೋ ಅಂತಹ ಮಹಾನ್ ಸಾಮ್ರಾಟ ಚಂದ್ರಗುಪ್ತ ಮೌರ್ಯನಾಗಿ ಆ ಗತವೈಭವವನ್ನ ತೆರೆಗೆ ತರಲು ಸಜ್ಜಾಗ್ತಿದೆ ಒಂದು ಮೆಗಾ ಕಾಂಬೋ. ನಮ್ಮ ಹೆಮ್ಮೆಯ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ಸದ್ಯ ತಮ್ಮ ನೆಕ್ಸ್ಟ್ ವೆಂಚರ್ನಲ್ಲಿ ಚಂದ್ರಗುಪ್ತ ಮೌರ್ಯನಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಚಾಣಾಕ್ಯನಾಗಿ ಬಾಲಿವುಡ್ನ ಸೆನ್ಸೇಷನಲ್ ಸೂಪರ್ ಸ್ಟಾರ್ ರಣ್ವೀರ್ ಸಿಂಗ್ ಅಭಿನಯಿಸಲಿದ್ದಾರಂತೆ.
ಈ ಧುರಂಧರ್ ಸ್ಟಾರ್ ಹಾಗೂ ಕೆಜಿಎಫ್ ಸ್ಟಾರ್ಗಳನ್ನ ಒಗ್ಗೂಡಿಸಿ ಈತಿಹಾಸಿಕ ಸಿನಿಮಾ ಮಾಡೋಕೆ ಸಜ್ಜಾಗ್ತಿರೋದು ಬೇರಾರೂ ಅಲ್ಲ.. ತಮ್ಮ ಸಿನಿಮಾಗಳಿಂದ ದೇಶಪ್ರೇಮದ ಕಿಚ್ಚು ಹೊತ್ತಿಸುತ್ತಿರೋ ಬಾಲಿವುಡ್ನ ಸ್ಟಾರ್ ಡೈರೆಕ್ಟರ್ ಆದಿತ್ಯ ಧರ್. ಹೌದು.. ಉರಿ, ಧುರಂಧರ್ ಸಿನಿಮಾಗಳ ನಿರ್ದೇಶಕ ಆದಿತ್ಯ ಧರ್ ಸದ್ಯ ಯಶ್-ರಣ್ವೀರ್ ಸಿಂಗ್ ಕಾಂಬೋನಲ್ಲಿ ಚಂದ್ರಗುಪ್ತ ಮೌರ್ಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.
ಅಂದಹಾಗೆ ನಮ್ಮ ಯಶ್ಗೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯ ಸಿನಿಮಾಗಳು ಹೊಸತೇನಲ್ಲ. 2014ರಲ್ಲೇ ಗಜಕೇಸರಿ ಅನ್ನೋ ಚಿತ್ರದಲ್ಲಿ ಬಾಹುಬಲಿ ಸಾಮ್ರಾಟನಾಗಿ ಕುದುರೆ ಸವಾರಿ, ಕತ್ತಿ ವರಸೆ, ಯುದ್ಧವನ್ನ ಎದುರಿಸಿದ್ದರು ಈ ವೀರ ಕನ್ನಡಿಗ. ಅಲ್ಲಿನ ಒಂದೊಂದು ದೃಶ್ಯವೂ ನೋಡುಗರಿಗೆ ಮೈ ರೋಮಾಂಚನ ನೀಡಿತ್ತು. ಅದ್ರಲ್ಲೂ ವಿಷ ಸೇವಿಸಿದ ನಂತ್ರ ನನ್ನ ಉಸಿರಿರುವ ತನಕ ಒಬ್ಬ ಎದುರಾಳಿಯ ಒಂದು ಹೆಜ್ಜೆ ಈ ಬಾವುಟ ದಾಟಿದ್ರೆ ನನ್ನ ತಲೆ ನಿಮ್ಮ ಪಾದದಡಿ ಅನ್ನೋ ಡೈಲಾಗ್ ಆತ ಎಂತಹ ಕೆಚ್ಚೆದಯ ವೀರ ಅನ್ನೋದಕ್ಕೆ ಸಾಕ್ಷಿ ಆಗಿತ್ತು.
ಸದ್ಯ ರಾಮಾಯಣ ಚಿತ್ರದಲ್ಲಿ ಯಶ್ ದಶಕಂಠ ರಾವಣನಾಗಿ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾರೆ. ಹೀಗಾಗಿ ಚಂದ್ರಗುಪ್ತ ಮೌರ್ಯನ ಪಾತ್ರಕ್ಕೆ ಈ ಜನರೇಷನ್ ಸ್ಟಾರ್ಗಳಲ್ಲಿ ನಮ್ಮ ಯಶ್ಗಿಂತ ಸೂಕ್ತವಾಗೋ ಸ್ಟಾರ್ ಮತ್ತೊಬ್ಬರಿಲ್ಲ ಅನ್ನಬಹುದು. ಅಂದಹಾಗೆ ಇದು ಅಫಿಶಿಯಲಿ ಇನ್ನೂ ಅನೌನ್ಸ್ ಆಗಿಲ್ಲ. ಫ್ಯಾನ್ ಮೇಡ್ ಟೀಸರ್ಗಳು, ಪೋಸ್ಟರ್ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಝ್ ಕ್ರಿಯೇಟ್ ಆಗಿದೆ. ಯಶ್-ರಣ್ವೀರ್ ಸಿಂಗ್ಗೆ ಆದಿತ್ಯ ಧರ್ ಡೈರೆಕ್ಟ್ ಮಾಡಿದ್ರೆ ಆ ಸಿನಿಮಾ ಒನ್ ಆಫ್ ದಿ ಮಾಸ್ಟರ್ಪೀಸ್ ಚಿತ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಸುದ್ದಿ ಆದಷ್ಟು ಬೇಗ ನಿಜವಾಗಲಿ ಅನ್ನೋದು ಅಸಂಖ್ಯಾತ ರಾಕಿಭಾಯ್ ಹಾಗೂ ರಣ್ವೀರ್ ಸಿಂಗ್ ಫ್ಯಾನ್ಸ್ ಆಶಯವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
