ರಾಮಾಯಣ ಪಾರ್ಟ್‌-1ರಲ್ಲಿ ಯಶ್ ಪಾತ್ರ 15 ನಿಮಿಷ

ಎರಡು ಸೆಕೆಂಡ್ ಲುಕ್‌‌ಗೆ ಚಿತ್ರ ಪ್ರೇಮಿಗಳು ಕ್ಲೀನ್ ಬೋಲ್ಡ್

Your paragraph text (18)

ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಇತಿಹಾಸ ಸೃಷ್ಟಿಸೋಕೆ ಸಜ್ಜಾಗಿದ್ದಾರೆ. ರಾಮಾಯಣ ಸಿನಿಮಾ ಚರಿತ್ರೆಯಲ್ಲಿ ಉಳಿದುಹೋಗುವಂತಹ ಮಾಸ್ಟರ್‌ಪೀಸ್ ಚಿತ್ರವಾಗಿಸೋ ನಿಟ್ಟಿನಲ್ಲಿ ತನು, ಮನ, ಧನವನ್ನು ಅರ್ಪಿಸಿ ಹಗಲಿರುಳು ದುಡಿಯುತ್ತಿದ್ದಾರೆ. ಅದ್ರೆ ರಾಮಾಯಣ ಮೊದಲ ಭಾಗದಲ್ಲಿ ರಾಕಿಂಗ್ ರಾವಣನ ಸಮಯ ಜಸ್ಟ್ 15 ನಿಮಿಷಗಳು.

ರಾಮಾಯಣ.. ಬಾಲಿವುಡ್‌ನಲ್ಲಿ ತಯಾರಾಗ್ತಿರೋ ಮಹೋನ್ನತ ಸಿನಿಮಾ. ಕೆಜಿಎಫ್ ರಾಕಿಭಾಯ್ ಹಾಗೂ ಅನಿಮಲ್ ರಣ್‌ಬೀರ್ ಕಪೂರ್ ಇಬ್ಬರನ್ನೂ ಒಂದೇ ಫ್ರೇಮ್‌‌ನಲ್ಲಿ ಇರಿಸಿ, ದಂಗಲ್ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳ್ತಿರೋ ಚಿತ್ರ. ರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಕಾಣಸಿಗಲಿದ್ದಾರೆ.

ADVERTISEMENT
ADVERTISEMENT

ನಿಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣ ಸಿನಿಮಾದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆ ಆಯ್ತು. ಇಡೀ ಭಾರತೀಯ ಚಿತ್ರರಂಗ ಟೀಸರ್‌ಗೆ ಫಿದಾ ಆಗಿದೆ. ಮೇಕಿಂಗ್ ಕ್ವಾಲಿಟಿ ಆ ರೇಂಜ್‌ಗಿದೆ. 8 ಆಸ್ಕರ್ ಅವಾರ್ಡ್‌ಗಳನ್ನ ಪಡೆದಂತಹ ವಿಎಫ್‌ಎಕ್ಸ್ ಕಂಪೆನಿಯಲ್ಲಿ ಈ ಸಿನಿಮಾದ ಕೆಲಸ, ಕಾರ್ಯಗಳು ನಡೆಯುತ್ತಿವೆ. ಅದೇ ಕಾರಣದಿಂದ ಎರಡೆರಡು ಫ್ರೇಮ್‌ಗಳಲ್ಲಿ ರಾಕಿ-ರಣ್‌ಬೀರ್ ಕಾಣಿಸಿದ್ರೂ, ನೋಡುಗರ ಕಣ್ಣಲ್ಲಿ ಹಾಗೆಯೇ ಅಚ್ಚಳಿಯದೆ ಉಳಿದುಬಿಟ್ಟಿದ್ದಾರೆ.

ಇನ್ನು ರಾಮಾಯಣ ಸಿನಿಮಾ ಒಂದಲ್ಲ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದೆ. ಮೊದಲ ಭಾಗ 2026ರ ದೀಪಾವಳಿಗೆ ತೆರೆ ಕಂಡ್ರೆ, ಎರಡನೇ ಭಾಗ 2027ರ ದೀಪಾವಳಿಗೆ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಆದ್ರೆ ಮೊದಲ ಭಾಗದಲ್ಲಿ ಯಶ್ ಫ್ಯಾನ್ಸ್‌ಗೆ ದೊಡ್ಡ ನಿರಾಸೆ ಅಂತೂ ಆಗಲಿದೆ. ಕಾರಣ ಅವರ ಸ್ಕ್ರೀನ್ ಸ್ಪೇಸ್ ಜಸ್ಟ್ 15 ನಿಮಿಷಗಳಷ್ಟೇ. ಹೌದು.. ಮೊದಲ ಭಾಗದಲ್ಲಿ ಯಶ್ ಅಪಿಯರೆನ್ಸ್ ಹದಿನೈದು ನಿಮಿಷಗಳಿಗೆ ಸೀಮಿತವಾಗಿದೆ. ಎರಡನೇ ಭಾಗದಲ್ಲಿ ರಾಮ-ರಾವಣದ ಕದನ ಇರಲಿದ್ದು, ಲಂಕಾಸುರನಾಗಿ ಅಬ್ಬರಿಸಿ, ಆರ್ಭಟಿಸಲಿದ್ದಾರಂತೆ ಯಶ್.

Exit mobile version