ಮೋದಿ ಬಾಯಲ್ಲಿ ‘ರಾಮಾಯಣ’..ಯಶ್‌ ಚಿತ್ರಕ್ಕೆ ನಮೋ ಬಲ

ನೇಪಾಳ ಪ್ರಧಾನಿ ಜೊತೆ ಮೋದಿ.. ರಾಮ-ಸೀತೆ ನೆನೆದ ಪ್ರಧಾನಿ

Untitled Design 2026 11 24T144554.665

ನಮ್ಮ ಹೆಮ್ಮೆಯ ಕನ್ನಡಿಗ ಯಶ್ ನಟಿಸಿ, ನಿರ್ಮಾಣ ಮಾಡಿರೋ ರಾಮಾಯಣ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿ ಅವ್ರಿಂದ ಮತ್ತಷ್ಟು ಬಲ ಬಂದಂತಾಗಿದೆ. 1700 ಕೋಟಿಗೂ ಅಧಿಕ ಮೊತ್ತ ಗಳಿಸಿರೋ ರಾಮಾಯಣ ವಿಶ್ವದಾದ್ಯಂತ ನಮ್ಮ ಸಂಸ್ಕೃತಿ, ನಂಬಿಕೆಯನ್ನ ಜನ ಮುಗಿಬಿದ್ದು ನೋಡ್ತಿದ್ದಾರೆ. ಇದೀಗ ಮೋದಿ ಮಾತಿನಿಂದ ಅದ್ರ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವಂತಿದೆ. ಹಾಗಾದ್ರೆ ಮೋದಿ ಚಿತ್ರದ ಬಗ್ಗೆ ಏನಂದ್ರು ಅಂತೀರಾ..? ಇಲ್ಲಿದೆ ನೋಡಿ…

ಸನಾತನ ಧರ್ಮದ ಪ್ರಾತಿನಿಧ್ಯತ್ವ ವಹಿಸಿರೋ ಮಹಾಕಾವ್ಯ ರಾಮಾಯಣ ದೃಶ್ಯರೂಪ ಪಡೆದು ವಿಶ್ವದಾದ್ಯಂತ ಬೆಳ್ಳಿತೆರೆ ಬೆಳಗುತ್ತಿದೆ. ಶ್ರೀರಾಮ, ಸೀತಾ ಮಾತೆ ಹಾಗೂ ಲಂಕೆಯ ರಾವಣನ ಕುರಿತ ಕಥೆಗೆ ಪ್ರಪಂಚದಾದ್ಯಂತ ಚಿತ್ರಪ್ರೇಮಿಗಳು ಬೆರಗಾಗಿದ್ದಾರೆ. ಎಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿರೋ ಯಶ್ ನಟಿಸಿ, ನಿರ್ಮಿಸಿರೋ ರಾಮಾಯಣ ಚಿತ್ರ ಸದ್ಯ ಬಾಕ್ಸಾಫೀಸ್‌‌ನಲ್ಲಿ 1700 ಕೋಟಿ ರೂಪಾಯಿಯ ಗಡಿ ಕೂಡ ದಾಟಿದೆ. ಯಶ್ ಜೊತೆ ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಕೂಡ ನೋಡುಗರನ್ನ ಮಂತ್ರಮುಗ್ಧಗೊಳಿಸ್ತಿದ್ದಾರೆ.

ಸರ್ವ ಕಾಲಕ್ಕೂ ಕೌತುಕತೆ ಹುಟ್ಟಿಸುವ ಕಥೆ, ಭಾವನೆ, ನಂಬಿಕೆ ಆಗಿರೋ ರಾಮಾಯಣದ ಬಗ್ಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಆಧುನಿಕ ತಂತ್ರಜ್ಞಾನ ಹಾಗೂ ಇಂದಿನ ಜನರೇಷನ್ ಮಂದಿ ಅದನ್ನ ಪ್ರಸ್ತುತ ಪಡಿಸುವ ವಿಧಾನದಿಂದ ರಾಮಾಯಣ ಇಂದಿನ ಪೀಳಿಗೆಗೆ ಹಾಗೂ ವಿಶ್ವದ ಮೂಲೆ ಮೂಲೆಗೆ ಸುಲಭವಾಗಿ ತಲುಪುತ್ತಿದೆ ಎಂದಿದ್ದಾರೆ ಮೋದಿ. ಅದು ಹಿರಿಯರಿಗಷ್ಟೇ ಸೀಮಿತ ಆಗಿಲ್ಲ. ಆಧುನಿಕ ಮಾಧ್ಯಮಗಳ ಸಹಾಯದಿಂದ ಜಾಗತಿಕ ಪ್ರೇಕ್ಷಕರನ್ನ ತಲುಪುತ್ತಿರೋದು ಖುಷಿಯ ವಿಚಾರ ಎಂದಿದ್ದಾರೆ.

ಯೆಸ್.. ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಜೊತೆ ಡೆಲ್ಲಿಯಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಕಿಂಗ್ ಸ್ಟಾರ್ ಯಶ್-ರಣ್ಬೀರ್ ಕಪೂರ್ ರಾಮಾಯಣಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದಾರೆ. ಅಲ್ಲದೆ.. 2018ರಲ್ಲಿ ನಾನು ಜನಕಪುರಕ್ಕೆ ಭೇಟಿ ನೀಡಿದ್ದೆ. ನಮ್ಮ ಭಗವಾನ್ ರಾಮ್‌‌ ಹಾಗೂ ಸೀತಾ ಮಾತೆಯ ಸಂಬಂಧ ಭಾರತ-ನೇಪಾಳದ ಪರಸ್ಪರ ನಾಗರೀಕತೆಯ ಹಂಚಿಕೆ ಹಾಗೂ ನಂಬಿಕೆಯ ಸಂಕೇತವಾಗಿದೆ. ನೇಪಾಳ ಇಲ್ಲದೆ ನಮ್ಮ ತೀರ್ಥ ಕ್ಷೇತ್ರಗಳು ಹಾಗೂ ರಾಮನ ಕಥೆ ಅಪೂರ್ಣ ಅಂತ ಪ್ರಧಾನ ಮಂತ್ರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಾರೆ ರಾಮಾಯಣ ಸಿನಿಮಾ ರೂಪ ಪಡೆದು ಜನಕ್ಕೆ ದೊಡ್ಡ ಮಟ್ಟದಲ್ಲಿ ತಲುಪುತ್ತಿರೋದು.. ಈ ಕುರಿತು ಮೋದಿ ಪ್ರಸ್ತಾಪ ಮಾಡಿರೋದು.. ಸದ್ಯ ರಾಮಾಯಣ ಸಿನಿಮಾ ತಂಡಕ್ಕೆ ಆನೆಬಲ ಬಂದಂತಾಗಿದೆ. ಮೋದಿಯ ಈ ಮಾತುಗಳು ರಾಮಾಯಣ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಮತ್ತಷ್ಟು ವೇಗ ನೀಡಲಿದ್ದು.. ಇನ್ನೆಷ್ಟು ಕೋಟಿ ಗಳಿಸಿ.. ಮತ್ತೆಷ್ಟು ದಾಖಲೆಗಳನ್ನ ಮಾಡುತ್ತೆ ಅನ್ನೋದು ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version